ನಾರಿಹಳ್ಳಿ ಜಲಾಶಯ : ಬಿತ್ತನೆ ಮೀನುಮರಿ ಸರಬರಾಜು
ಬಳ್ಳಾರಿ, 06 ನವೆಂಬರ್ (ಹಿ.ಸ.) ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮೀನುಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿನ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ, ಸಂಡೂರು ತಾಲೂಕಿನ ನಾರಿಹಳ್ಳಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಬಲಿತ ಬಿತ್ತನೆ ಮೀನುಮರಿಗಳನ್ನು ಸರಬರಾಜು ಮಾಡಲು ನೋಂದಾಯಿತ ಖಾಸಗಿ ಮೀನ
ನಾರಿಹಳ್ಳಿ ಜಲಾಶಯ : ಬಿತ್ತನೆ ಮೀನುಮರಿ ಸರಬರಾಜು


ಬಳ್ಳಾರಿ, 06 ನವೆಂಬರ್ (ಹಿ.ಸ.)

ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮೀನುಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿನ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ, ಸಂಡೂರು ತಾಲೂಕಿನ ನಾರಿಹಳ್ಳಿ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಬಲಿತ ಬಿತ್ತನೆ ಮೀನುಮರಿಗಳನ್ನು ಸರಬರಾಜು ಮಾಡಲು ನೋಂದಾಯಿತ ಖಾಸಗಿ ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಇಲಾಖೆಯಲ್ಲಿ ನೋಂದಾಯಿತ ಖಾಸಗಿ ಮೀನು ಕೃಷಿಕರು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಿನ ಮೀನುಗಾರಿಕೆ ಕಚೇರಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

*ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:*

ಅರ್ಜಿದಾರರ ಇತ್ತೀಚಿನ ಭಾವಚಿತ್ರ, ಮೀನುಮರಿ ಪಾಲನಾ ಕೇಂದ್ರದ ನೋಂದಣಿ ಪ್ರಮಾಣಪತ್ರ, ಪಾಲನಾ ಕೇಂದ್ರದಿAದ ಸರಬರಾಜು ಮಾಡಲು ಲಭ್ಯವಿರುವ ಬಲಿತ ಬಿತ್ತನೆ ಮೀನುಮರಿಗಳ ವಿವರಗಳ ನಮೂನೆ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಇಲಾಖೆಯ ನಿಯಮ ಮತ್ತು ನಿಬಂಧನೆಗಳಿಗೆ ಸಮ್ಮತಿಸಿ ರೂ.100 ಮೌಲ್ಯದ ಛಾಪಾ ಕಾಗದದಲ್ಲಿ (ಬಾಂಡ್ ಪೇಪರ್) ಮುಚ್ಚಳಿಕೆ ಪತ್ರ.

ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ.

ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬಳ್ಳಾರಿ ಅಥವಾ ಸಂಡೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮತ್ತು ಬಳ್ಳಾರಿಯ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande