ಕೊಡಗು ಸೈನಿಕ ಶಾಲೆಯ 6 - 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ, 06 ನವೆಂಬರ್ (ಹಿ.ಸ.) ಕೊಡಗಿನ ಕುಡಿಗೆಯಲ್ಲಿರುವ ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ 2027–28ನೇ ಶೈಕ್ಷಣಿಕ ಸಾಲಿನ 6ನೇ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅರ್ಹ ಬಾಲಕ ಮತ್ತು ಬಾಲಕಿಯರಿಂದ ಆನ್ ಲೈನ್ ಮೂಲಕ ಅರ್ಜಿ
ಕೊಡಗು ಸೈನಿಕ ಶಾಲೆಯ 6 - 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಬಳ್ಳಾರಿ, 06 ನವೆಂಬರ್ (ಹಿ.ಸ.)

ಕೊಡಗಿನ ಕುಡಿಗೆಯಲ್ಲಿರುವ ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ 2027–28ನೇ ಶೈಕ್ಷಣಿಕ ಸಾಲಿನ 6ನೇ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅರ್ಹ ಬಾಲಕ ಮತ್ತು ಬಾಲಕಿಯರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಪ್ರವೇಶ ಪರೀಕ್ಷೆಯನ್ನು ನಡೆಸಲಿದ್ದು, ಪರೀಕ್ಷೆಯು 2027ರ ಜನವರಿ 31 ರಂದು ನಡೆಯಲಿದೆ. ಭಾರತೀಯ ಸಶಸ್ತç ಪಡೆಗಳಲ್ಲಿ ಅಧಿಕಾರಿಗಳನ್ನಾಗಿ ರೂಪಿಸಲು ಅಗತ್ಯವಿರುವ ಶೈಕ್ಷಣಿಕ ಮತ್ತು ದೈಹಿಕ ತರಬೇತಿಯನ್ನು ಈ ವಸತಿ ಶಾಲೆಯಲ್ಲಿ ನೀಡಲಾಗುತ್ತದೆ.

ಕರ್ನಾಟಕದ ಮೂಲ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯದ ವತಿಯಿಂದ ವಿದ್ಯಾರ್ಥಿವೇತನ (ಸ್ಕಾಲರ್ ಶಿಪ್) ಸೌಲಭ್ಯವೂ ಲಭ್ಯವಿದೆ.

ಪ್ರವೇಶ ತರಗತಿಗಳು: 6ನೇ ಮತ್ತು 9ನೇ ತರಗತಿ (ಬಾಲಕ ಮತ್ತು ಬಾಲಕಿಯರು).

ಅರ್ಜಿ ಸಲ್ಲಿಸಲು ಡಿಸೆಂಬರ್ 02 ಕೊನೆಯ ದಿನವಾಗಿದೆ.

ಪರೀಕ್ಷಾ ದಿನಾಂಕ: 31 ಜನವರಿ 2027.

ಅರ್ಜಿ ಸಲ್ಲಿಸಲು https://exams.nta.nic.in/sainik-school-society/ ಅಥವಾ ಶಾಲೆಯ ಅಧಿಕೃತ ಜಾಲತಾಣ www.sainikschoolkodagu.edu.in ಗೆ ಭೇಟಿ ನೀಡಬಹುದಾಗಿದೆ.

ಪರೀಕ್ಷಾ ವಿಧಾನ, ಪಠ್ಯಕ್ರಮ, ಶುಲ್ಕ ವಿವರ, ವಯೋಮಿತಿ ಮತ್ತು ಮೀಸಲಾತಿ ನಿಯಮಗಳ ಸಂಪೂರ್ಣ ಮಾಹಿತಿಗಾಗಿ ಆಸಕ್ತ ಪೋಷಕರು ಹಾಗೂ ಅಭ್ಯರ್ಥಿಗಳು ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿ ಕೈಪಿಡಿಯನ್ನು ಪರಿಶೀಲಿಸುವಂತೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande