

ಬಳ್ಳಾರಿ, 21 ನವೆಂಬರ್ (ಹಿ.ಸ.)
ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ತೇಜೋವಧೆ ಮಾಡಲು ಪ್ರಯತ್ನಿಸಿದ ಲೇಖಕ ರವಿ ಹಂಜ್ ಅವರ ವಿಚಾರಗಳು - ಅಭಿಪ್ರಾಯಗಳು ಖಂಡನೀಯವಾಗಿದ್ದು, ಕಠಿಣವಾದ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ವೀರಶೈವ ಲಿಂಗಾಯಿತ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.
ಎಚ್.ಆರ್. ಗವಿಯಪ್ಪ ವೃತ್ತದಲ್ಲಿ ಇರುವ ಬಸವೇಶ್ವರರ ಪುತ್ಥಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಮುಖಂಡರಾದ
ಸಿರಿಗೇರಿ ಪನ್ನರಾಜ್, ಸಂಗನಕಲ್ಲು ಹಿಮಂತರಾಜ್, ಡಾ. ನಿಷ್ಠಿ ರುದ್ರಪ್ಪ, ಬಿ. ಪಂಚಾಕ್ಷರಪ್ಪ, ಗಂಗಾವತಿ ವೀರೇಶ, ರವಿಕುಮಾರ್, ಅರವಿ ಭೀಮನಗೌಡ, ಕೇಣಿ ಬಸವರಾಜ್, ಬಂಡೇಗೌಡ, ಯ್ಯಾಳ್ಪಿ ದಿವಾಕರಗೌಡ, ಸಂಗನಕಲ್ಲು ವಿಜಯಕುಮಾರ್, ಕಪ್ಪಗಲ್ಲು ಓಂಕಾರಪ್ಪ, ಸುರೇಶಗೌಡ, ಮೀನಾಕ್ಷಿ, ವಚನ, ಹಂದ್ರಾಳ್ ಶಿವಶಂಕರ್, ಜೆ.ವಿ. ಮಂಜುನಾಥ್ ಇನ್ನಿತರರು ಮಾತನಾಡಿ, ಸಾಂಸ್ಕøತಿಕ ನಾಯಕ ಬಸವಣ್ಣನವರ ಕುರಿತು ಅವರ ವಚನಗಳ ಕುರಿತು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡಿ, ಸಮಾಜದಲ್ಲಿ ಇರುವ ಶಾಂತಿ, ನೆಮ್ಮದಿಯನ್ನು ಹಾಳು ಮಾಡಲು ಯತ್ನಿಸಿರುವ ಲೇಖಕ ರವಿಹಂಜ್ ಅವರನ್ನು ಸರ್ಕಾರ ಕಠಿಣವಾಗಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
`ಬಸವ ಮಂಟಪ' ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿರುವ ಕುರಿತು ಅಧಿಕೃತ ಆದೇಶವನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರವು ಬಸವಣ್ಣನವರ ಅನುಯಾಯಿಗಳ ತೀವ್ರ ವಿರೋಧವನ್ನು - ಪ್ರತಿಭಟನೆಯನ್ನು ರಾಜ್ಯಾದ್ಯಂತ ಎದುರಿಸಬೇಕಾಗುತ್ತದೆ. ಕಾರಣ ಸರ್ಕಾರ ಲೇಖಕರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಪುಸ್ತಕವನ್ನು ಮುಟ್ಟುಗೋಲು ಹಾಕಬೇಕು. ಪ್ರಕಾಶಕರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್