ಹಣ ಸುಲಿಗೆ ಮಾಡುತ್ತಿದ್ದ ಆಟೊ ಚಾಲಕನ ಬಂಧನ: ಕೃತ್ಯಕ್ಕೆ ಬಳಸಿದ ಆಟೊ ವಶ
ಧಾರವಾಡ, 21 ನವೆಂಬರ್ (ಹಿ.ಸ.): ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಆಟೊ ಚಾಲಕನೊಬ್ಬನನ್ನು ಧಾರವಾಡ ಉಪನಗರ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಆಟೊವನ್ನು ವಶಪಡಿಸಿಕೊಂಡಿದ್ದಾರೆ. ನ.7ರಂದು ಧಾರವಾಡದ ನರೇಂದ್ರ ಭಾಗದಿಂದ ಸವಾರಿ ಮಾಡಿಕೊಂಡು ಬಂದ ಆಟೊ ಚಾಲಕನೊಬ್ಬ ಕಲಾಭವನದ ಎದುರು ಆಟೊ ನಿ
ಬಂಧಿತ ಆರೋಪಿಯೊಂದಿಗೆ ಪೋಲಿಸ್ ಸಿಬ್ಬಂದಿ


ಧಾರವಾಡ, 21 ನವೆಂಬರ್ (ಹಿ.ಸ.):

ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಆಟೊ ಚಾಲಕನೊಬ್ಬನನ್ನು ಧಾರವಾಡ ಉಪನಗರ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಆಟೊವನ್ನು ವಶಪಡಿಸಿಕೊಂಡಿದ್ದಾರೆ.

ನ.7ರಂದು ಧಾರವಾಡದ ನರೇಂದ್ರ ಭಾಗದಿಂದ ಸವಾರಿ ಮಾಡಿಕೊಂಡು ಬಂದ ಆಟೊ ಚಾಲಕನೊಬ್ಬ ಕಲಾಭವನದ ಎದುರು ಆಟೊ ನಿಲ್ಲಿಸಿ, ಪ್ರಯಾಣಿಕನ ಕೈಗಳನ್ನು ಹಿಡಿದು ಬೆದರಿಸಿದ್ದಾನೆ. ಬಳಿಕ ಆತನಿಂದ 6,220 ರೂ. ನಗದು ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ.

ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.18ರಂದು ರಾತ್ರಿ10 ಗಂಟೆಗೆ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು 31 ವರ್ಷದ ಅರುಣ್ ಚಿಕ್ಕಲಗಾರ ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕೆಎ-25 ಡಿ-6903 ನೋಂದಣಿ ಸಂಖ್ಯೆಯ ಆಟೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.

ಧಾರವಾಡ ವಿಭಾಗದ ಎಸಿಪಿ ಪ್ರಶಾಂತ ಸಿದ್ದನಗೌಡರ

ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಬಸಾಪುರ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande