ರವಿಹಂಜ್ ಅಭಿಪ್ರಾಯಗಳು - ವಿಚಾರಗಳು ಖಂಡನೀಯ : ಸಿದ್ದರಾಮ ಕಲ್ಮಠ
ಬಳ್ಳಾರಿ, 21 ನವೆಂಬರ್ (ಹಿ.ಸ.) ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ತೇಜೋವಧೆ ಮಾಡಲು ಪ್ರಯತ್ನಿಸಿದ ಲೇಖಕ ರವಿ ಹಂಜ್ ಅವರ ವಿಚಾರಗಳು - ಅಭಿಪ್ರಾಯಗಳು ಖಂಡನೀಯ ಎಂದು ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ತಿಳಿಸಿದ್ದ
ರವಿಹಂಜ್ ಅಭಿಪ್ರಾಯಗಳು - ವಿಚಾರಗಳು ಖಂಡನೀಯ : ಸಿದ್ದರಾಮ ಕಲ್ಮಠ


ಬಳ್ಳಾರಿ, 21 ನವೆಂಬರ್ (ಹಿ.ಸ.)

ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ತೇಜೋವಧೆ ಮಾಡಲು ಪ್ರಯತ್ನಿಸಿದ ಲೇಖಕ ರವಿ ಹಂಜ್ ಅವರ ವಿಚಾರಗಳು - ಅಭಿಪ್ರಾಯಗಳು ಖಂಡನೀಯ ಎಂದು ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಾಂಸ್ಕøತಿಕ ನಾಯಕ, ಮಾನವತೆಯ ಸಂದೇಶ ಸಾರಿದ ದಾರ್ಶನಿಕ ಬಸವಣ್ಣನವರು ಮತ್ತು ಶರಣರ ವಿಚಾರಧಾರೆಗಳು ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆಯ ಜಾತ್ಯಾತೀತ ಚಿಂತನೆಗಳು ಸಮಾಜಕ್ಕೆ ಇಂದಿಗೂ ದಾರಿದೀಪವಾಗಿವೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande