ನ.24 ರಂದು ಉಚಿತ ಯುನಾನಿ ಆರೋಗ್ಯ ಶಿಬಿರ
ಬಳ್ಳಾರಿ, 21 ನವೆಂಬರ್ (ಹಿ.ಸ.) ಸರ್ಕಾರಿ ಯುನಾನಿ ಆಸ್ಪತ್ರೆ ಮತ್ತು ಬೈತುಸ್ಟಾಲಿಹೀನ್ ಟ್ರಸ್ಟ್ ಸಹಯೋಗದಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೌಲ್ ಬಜಾರ್ ಪ್ರದೇಶದ ಗೋಲ್ ಬೌಡಿ ಹತ್ತಿರದ ಆಜಾದ್ ನಗರದಲ್ಲಿರುವ ನೋಬೆಲ್ ಲರ್ನಿಂಗ್ ಸೆಂಟರ್ ನಲ್ಲಿ ಉಚಿತ ಯುನಾನಿ ಆರ
ನ.24 ರಂದು ಉಚಿತ ಯುನಾನಿ ಆರೋಗ್ಯ ಶಿಬಿರ


ಬಳ್ಳಾರಿ, 21 ನವೆಂಬರ್ (ಹಿ.ಸ.)

ಸರ್ಕಾರಿ ಯುನಾನಿ ಆಸ್ಪತ್ರೆ ಮತ್ತು ಬೈತುಸ್ಟಾಲಿಹೀನ್ ಟ್ರಸ್ಟ್ ಸಹಯೋಗದಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೌಲ್ ಬಜಾರ್ ಪ್ರದೇಶದ ಗೋಲ್ ಬೌಡಿ ಹತ್ತಿರದ ಆಜಾದ್ ನಗರದಲ್ಲಿರುವ ನೋಬೆಲ್ ಲರ್ನಿಂಗ್ ಸೆಂಟರ್ ನಲ್ಲಿ ಉಚಿತ ಯುನಾನಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ಸಂಧಿವಾತ, ಸೊಂಟ ನೋವು, ಕೆಮ್ಮು, ಶೀತ ಸೇರಿದಂತೆ ಇತರೆ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಗುವುದು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಪಿ. ಮುನಿವಾಸುದೇವರೆಡ್ಡಿ ಹಾಗೂ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಮಾಧುರಿ, ಡಾ. ದೀಪ ಅರುಣ್ ಕಾಕತೀಕರ, ಡಾ. ಕೆ. ಕಲ್ಯಾಣಿ ಮತ್ತು ಡಾ. ಗುರುಮುರುಗೇಶ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸರ್ಕಾರಿ ಯುನಾನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸೈಯದ್ ಜೈನುಲ್ಆಬಿದೀನ್ ಅವರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande