ನ.24 ಮತ್ತು 25ರಂದು ಬಳ್ಳಾರಿಯಲ್ಲಿ ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ
ಬಳ್ಳಾರಿ, 21 ನವೆಂಬರ್ (ಹಿ.ಸ.) ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ‘ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ-2026’ವು ನವೆಂಬರ್ 24 ಮತ್ತು 25 ರಂದು ಬಳ್ಳಾರಿಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭವು ನವೆಂಬರ್ 24 ರಂದು ಬೆಳಿಗ್ಗೆ 9.30ಕ್ಕೆ ಡಾ. ಜ
ನ.24 ಮತ್ತು 25ರಂದು ಬಳ್ಳಾರಿಯಲ್ಲಿ  ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ-2026


ನ.24 ಮತ್ತು 25ರಂದು ಬಳ್ಳಾರಿಯಲ್ಲಿ  ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ-2026


ಬಳ್ಳಾರಿ, 21 ನವೆಂಬರ್ (ಹಿ.ಸ.)

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ‘ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ-2026’ವು ನವೆಂಬರ್ 24 ಮತ್ತು 25 ರಂದು ಬಳ್ಳಾರಿಯಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭವು ನವೆಂಬರ್ 24 ರಂದು ಬೆಳಿಗ್ಗೆ 9.30ಕ್ಕೆ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ. ಬಳ್ಳಾರಿ ನಗರ ಕ್ಷೇತ್ರದ ಶಾಸಕರಾದ ನಾರಾ ಭರತ್ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದರಾದ ಈ. ತುಕಾರಾಂ, ಕೆ. ರಾಜಶೇಖರ ಬಸವರಾಜ ಹಿಟ್ನಾಳ್, ರಾಜ್ಯಸಭೆ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್, ಕಂಪ್ಲಿ ಶಾಸಕ ಹಾಗೂ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತದ ಅಧ್ಯಕ್ಷ ಜೆ.ಎನ್. ಗಣೇಶ್, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಶಾಸಕರಾದ ಬಿ. ನಾಗೇಂದ್ರ, ಬಿ.ಎಂ. ನಾಗರಾಜ, ಈ. ಅನ್ನಪೂರ್ಣ, ವಿಧಾನಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ, ಶಶಿಲ್ ಜಿ. ನಮೋಶಿ, ವೈ.ಎಂ. ಸತೀಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾಪೆರ್Çೀರೇಷನ್ ಲಿಮಿಟೆಡ್ ಉಪಾಧ್ಯಕ್ಷ ಹೆಚ್. ಲಕ್ಷ್ಮಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ .ಡಿ.ಪಿ ಸೇರಿದಂತೆ ಇತರರು ಭಾಗವಹಿಸುವರು.

ಕಾರ್ಯಕ್ರಮದ ಅಂಗವಾಗಿ ಬಾಲಪ್ರತಿಭೆ, ಕಿಶೋರಪ್ರತಿಭೆ, ಯುವಪ್ರತಿಭೆ (ಏಕವ್ಯಕ್ತಿ) ಹಾಗೂ ನಾಟಕ-ಜನಪದ ನೃತ್ಯ ಸಮೂಹ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

*ನ. 24 ರಂದು (ಬೆಳಿಗ್ಗೆ 10 ಕ್ಕೆ ಪ್ರಾರಂಭ) – ಬಾಲ/ಕಿಶೋರ ಪ್ರತಿಭೆ ವರ್ಗ:*

ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ) ಮತ್ತು ಜಾನಪದ ಗೀತೆಗಳು (7 ನಿಮಿಷ) ಸ್ಪರ್ಧೆಗಳು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿವೆ.

ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿತ - 120 ನಿಮಿಷ) ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರ, ಸಾಂಸ್ಕøತಿಕ ಸಮುಚ್ಚಯ, ಡಾ. ರಾಜ್ ಕುಮಾರ್ ರಸ್ತೆಯಲ್ಲಿ ನಡೆಯಲಿದೆ.

ಹಿಂದೂಸ್ತಾನಿ ವಾದ್ಯ ಸಂಗೀತ (7 ನಿಮಿಷ) ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ) ಸ್ಪರ್ಧೆಗಳು ಹೊಂಗಿರಣ ಸಭಾಂಗಣ, ಸಾಂಸ್ಕøತಿಕ ಸಮುಚ್ಚಯ, ಡಾ. ರಾಜ್ಕುಮಾರ್ ರಸ್ತೆಯಲ್ಲಿ ನಡೆಯಲಿವೆ.

*ನ.25 ರಂದು (ಬೆಳಿಗ್ಗೆ 10 ಪ್ರಾರಂಭ) – ಯುವ ಪ್ರತಿಭೆ/ಸಮೂಹ ಸ್ಪರ್ಧೆ ವರ್ಗ:*

ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ) ಮತ್ತು ನಾಟಕ (ಸಮೂಹ-45 ನಿಮಿಷ) ಸ್ಪರ್ಧೆಗಳು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿವೆ.

ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿತ - 120 ನಿಮಿಷ) ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರ, ಸಾಂಸ್ಕøತಿಕ ಸಮುಚ್ಚಯ, ಡಾ. ರಾಜ್ಕುಮಾರ್ ರಸ್ತೆಯಲ್ಲಿ ನಡೆಯಲಿದೆ.

ಹಿಂದೂಸ್ತಾನಿ ವಾದ್ಯ ಸಂಗೀತ (7 ನಿಮಿಷ), ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ), ಆಶು ಭಾಷಣ (7 ನಿಮಿಷ) ಮತ್ತು ಜನಪದ ನೃತ್ಯ (10 ನಿಮಿಷ) ಸ್ಪರ್ಧೆಗಳು ಹೊಂಗಿರಣ ಸಭಾಂಗಣ, ಸಾಂಸ್ಕøತಿಕ ಸಮುಚ್ಚಯ, ಡಾ. ರಾಜ್ಕುಮಾರ್ ರಸ್ತೆಯಲ್ಲಿ ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande