ನ.25 : ಜಿಲ್ಲೆಯಾದ್ಯಂತ ಬೃಹತ್ ರಕ್ತದಾನ ಶಿಬಿರ
ಬಳ್ಳಾರಿ, 21 ನವೆಂಬರ್ (ಹಿ.ಸ.) ರಾಷ್ಟಿಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನವೆಂಬರ್ 25 ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಬಳ್ಳಾರಿ ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಸೂಚನೆಯ
ನ.25 : ಜಿಲ್ಲೆಯಾದ್ಯಂತ ಬೃಹತ್ ರಕ್ತದಾನ ಶಿಬಿರ


ಬಳ್ಳಾರಿ, 21 ನವೆಂಬರ್ (ಹಿ.ಸ.)

ರಾಷ್ಟಿಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನವೆಂಬರ್ 25 ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಬಳ್ಳಾರಿ ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಸೂಚನೆಯಂತೆ ನಡೆಯುವ ಈ ಅಭಿಯಾನದಲ್ಲಿ ಒಟ್ಟು 5 ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದ ಡಿ.ಮಳಗಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡ್ಯಾಪ್ಕೋ ವಿಭಾಗ, ಜಿಲ್ಲಾ ಆಸ್ಪತ್ರೆ, ಬಿ.ಎಂ.ಸಿ.ಆರ್.ಸಿ ಹಾಗೂ ವಿವಿಧ ಖಾಸಗಿ ರಕ್ತ ಭಂಡಾರಗಳ ಸಂಯುಕ್ತಾಶ್ರಯದಲ್ಲಿ ಶಿಬಿರಗಳು ಜರುಗಲಿವೆ. ವಿವಿಧ ಇಲಾಖೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

*ಶಿಬಿರದ ಸ್ಥಳಗಳು:*

ಬಳ್ಳಾರಿ ತಾಲ್ಲೂಕು: ಹೊಸ ಜಿಲ್ಲಾಧಿಕಾರಿಗಳ ಕಚೇರಿ, ಎಸ್.ಪಿ. ಕಚೇರಿ, ಎ.ಪಿ.ಎಂ.ಸಿ, ಬಿ.ಐ.ಟಿ.ಎಂ ಕಾಲೇಜು, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಿ.ಎಂ.ಸಿ.ಆರ್.ಸಿ., ಜಿಲ್ಲಾ ಆಸ್ಪತ್ರೆ, ಕೌಲ್ ಬಜಾರ್, ಗಾಂಧಿನಗರ ಸುವರ್ಣ ಇಂಟರ್ ನ್ಯಾಷನಲ್ ಶಾಲೆ ಮತ್ತು ಕೆ.ಪಿ.ಟಿ.ಸಿ.ಎಲ್.

ಸಿರುಗುಪ್ಪ ತಾಲ್ಲೂಕು: ಕಿಷ್ಕಿಂದ ವಿಶ್ವವಿದ್ಯಾಲಯ ಮತ್ತು ಬಸ್ ನಿಲ್ದಾಣ.

ಸಂಡೂರು ತಾಲ್ಲೂಕು: ಎನ್.ಎಂ.ಡಿ.ಸಿ ಮತ್ತು ಶ್ರೀ ಕುಮಾರಸ್ವಾಮಿ ದೇವಸ್ಥಾನ.

ಇದರ ಜೊತೆಗೆ ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.

*ಅರ್ಹತೆ, ನೋಂದಣಿ ಮತ್ತು ಮಾಹಿತಿ:*

ಅರ್ಹತೆ: 18 ರಿಂದ 65 ವರ್ಷದೊಳಗಿನ ಆರೋಗ್ಯವಂತರು, ಕನಿಷ್ಠ 45 ಕೆ.ಜಿ ತೂಕ ಹಾಗೂ ಕನಿಷ್ಠ 12.5 ಗ್ರಾಂ ಹಿಮೋಗ್ಲೋಬಿನ್ ಹೊಂದಿರುವವರು ರಕ್ತದಾನ ಮಾಡಬಹುದು. ಪುರುಷರು ವರ್ಷಕ್ಕೆ ಗರಿಷ್ಠ 4 ಬಾರಿ ಮತ್ತು ಮಹಿಳೆಯರು ಗರಿಷ್ಠ 3 ಬಾರಿ ರಕ್ತದಾನ ಮಾಡಲು ಅವಕಾಶವಿದೆ.

ನೋಂದಣಿ: ದಾನಿಗಳು ಇ-ರಕ್ತಕೋಶ ಆಪ್ನಲ್ಲಿ (https://eraktakosh.mohfw.gov.in) ಲಾಗಿನ್ ಆಗಿ ನೋಂದಣಿ ಮಾಡಿಕೊಂಡು ತಮ್ಮ ಸಮೀಪದ ಶಿಬಿರದಲ್ಲಿ ರಕ್ತದಾನ ಮಾಡಬಹುದು.

ಅಪಘಾತಕ್ಕೀಡಾದವರು, ಶಸ್ತç ಚಿಕಿತ್ಸೆ ಹಾಗೂ ಕ್ಯಾನ್ಸರ್ ಪೀಡಿತರ ಜೀವ ಉಳಿಸಲು ಒಂದು ಯೂನಿಟ್ ರಕ್ತ ನಾಲ್ಕು ಜೀವಗಳಿಗೆ ಆಸರೆಯಾಗಬಲ್ಲದು. ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ದೊರೆಯುತ್ತದೆ, ಕಾರ್ಯತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ ಹಾಗೂ ಹೃದಯಾಘಾತ ಮತ್ತು ರಕ್ತದ ಒತ್ತಡ ಸೇರಿದಂತೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8277220274 ಅಥವಾ 9449846965 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande