
ಬಳ್ಳಾರಿ, 19 ನವೆಂಬರ್ (ಹಿ.ಸ.)
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 109ನೇ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.
ಇಂದಿರಾಗಾಂಧಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮಗಳನ್ನು ಸಲ್ಲಿಸುವ ಮೂಲಕ, ಪ್ರಧಾನಿಯಾಗಿ, ಪಕ್ಷದ ಅಧ್ಯಕ್ಷರಾಗಿ ಅವರು ದೇಶಕ್ಕೆ ಮತ್ತು ಪಕ್ಷಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಡಿಸಿಸಿ ಉಪಾಧ್ಯಕ್ಷ ಕೆ. ಶ್ರೀನಿವಾಸುಲು, ಕಾರ್ಯಕಾರಿಣಿ ಸಮಿತಿಯ ಸದಸ್ಯ
ವೆಂಕಟಲಕ್ಷ್ಮಿ ನಾರಾಯಣ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಎಂ.ಎಸ್. ಮಂಜುಳ, ಎರಕುಲಸ್ವಾಮಿ, ಕಣೇಕಲ್ಲು ಮಾಬುಸಾಬ್, ಅಖಿಲ್ ಅಹಮ್ಮದ್, ಅತಾವುಲ್ಲಾ, ಬಳ್ಳಾರಿ ನಗರ ಪ್ರಚಾರ ಸಮಿತಿಯ ಅಧ್ಯಕ ಈರನಗೌಡ, ಮುಖಂಡರುಗಳಾದ ಸಮೀರ್, ಸಂಗನಕಲ್ಲು ವಿಜಯ್ ಕುಮಾರ್, ಪರ್ವೀನ್ಭಾನು, ಮಲ್ಲಮ್ಮ, ಬಿ.ಎ. ಮಲ್ಲೇಶ್ವರಿ, ಆಫ್ರಿನ್, ಲಿಂಗರಾಜು, ಎಂ.ಪಿ. ಕಮಲ, ರಂಗಸ್ವಾಮಿ, ಸಿದ್ದರಾಮ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್