ಬಳ್ಳಾರಿಯಲ್ಲಿ 42 ವರ್ಷದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ
ಬಳ್ಳಾರಿ, 19 ನವೆಂಬರ್ (ಹಿ.ಸ.) ಬಳ್ಳಾರಿ ನಗರದ ಅಲ್ಲೀಪುರ ವಿನಾಯಕ ನಗರ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದ ನಿವಾಸಿ ಬಿ. ರಾಜು (42) ಅವರು ನವೆಂಬರ್ 16ರಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲ
ಬಿ. ರಾಜು ಕಾಣೆ : ಪತ್ತೆಗೆ ಮನವಿ


ಬಳ್ಳಾರಿ, 19 ನವೆಂಬರ್ (ಹಿ.ಸ.)

ಬಳ್ಳಾರಿ ನಗರದ ಅಲ್ಲೀಪುರ ವಿನಾಯಕ ನಗರ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದ ನಿವಾಸಿ ಬಿ. ರಾಜು (42) ಅವರು ನವೆಂಬರ್ 16ರಿಂದ ಕಾಣೆಯಾಗಿದ್ದಾರೆ.

ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಕಾಣೆಯಾದ ಬಿ. ರಾಜು ಅವರು 6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹಾಗೂ ದಪ್ಪನೆಯ ಮೈಕಟ್ಟು ಹೊಂದಿದ್ದಾರೆ. ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲಿದ್ದು, ಎಡಗೈ ಮೇಲೆ ಲಕ್ಷ್ಮೀದೇವಿ ಹಾಗೂ 'ಡ್ರೈವರ್ ಬಿ.ಆರ್.ಎನ್' ಎಂಬ ಹಚ್ಚೆ ಗುರುತುಗಳಿವೆ.

ಕಾಣೆಯಾದ ಸಂದರ್ಭದಲ್ಲಿ ಮೆರೂನ್ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಅವರಿಗೆ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.

ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08392-276461, 9480803049 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ 08392-258100ಕ್ಕೆ ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande