ನ.24ರಂದು ಮಲ ಹೊರುವ ಪದ್ಧತಿ ನಿಷೇಧ ಕುರಿತು ತ್ರೈಮಾಸಿಕ ಜಾಗೃತಿ ಸಮಿತಿ ಸಭೆ
ಬಳ್ಳಾರಿ, 19 ನವೆಂಬರ್ (ಹಿ.ಸ.): ಮಲ ಹೊರುವ ಪದ್ಧತಿ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ–2013ರ ಸೆಕ್ಷನ್ 24(3)ರ ಅನ್ವಯ, ನವೆಂಬರ್ 24ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬಳ್ಳಾರಿ ಉಪವಿಭಾಗ ಮಟ್ಟದ ತ್ರೈಮಾಸಿಕ ಜಾಗೃತಿ ಸಮಿತಿ ಸಭೆ ನಡೆಯಲಿದೆ. ಬಳ್ಳಾರಿಯ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ಆಯ
ನ.24ರಂದು ಮಲ ಹೊರುವ ಪದ್ಧತಿ ನಿಷೇಧ ಕುರಿತು ತ್ರೈಮಾಸಿಕ ಜಾಗೃತಿ ಸಮಿತಿ ಸಭೆ


ಬಳ್ಳಾರಿ, 19 ನವೆಂಬರ್ (ಹಿ.ಸ.):

ಮಲ ಹೊರುವ ಪದ್ಧತಿ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ–2013ರ ಸೆಕ್ಷನ್ 24(3)ರ ಅನ್ವಯ, ನವೆಂಬರ್ 24ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬಳ್ಳಾರಿ ಉಪವಿಭಾಗ ಮಟ್ಟದ ತ್ರೈಮಾಸಿಕ ಜಾಗೃತಿ ಸಮಿತಿ ಸಭೆ ನಡೆಯಲಿದೆ.

ಬಳ್ಳಾರಿಯ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.

ಸಮಿತಿಯ ಸದಸ್ಯರು ನಿಗದಿತ ಸಮಯಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸಮಿತಿಯ ಅಧ್ಯಕ್ಷರೂ ಆಗಿರುವ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande