ಇಂದಿನಿಂದ ಪ್ರಧಾನಿ ಮೋದಿ ಫಿಲಿಪ್ಪೀನ್ಸ್ ಪ್ರವಾಸ
ನವದೆಹಲಿ, 16 ನವೆಂಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಫಿಲಿಪ್ಪೀನ್ಸ್ ಪ್ರವಾಸ ಇಂದಿನಿಂದ ಆರಂಭವಾಗಲಿದೆ. ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನವೆಂಬರ್ 16 ಮತ್ತು 17ರಂದು ಪ್ರಧಾನಿ ಮೋದಿ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಲಿದ್ದ
प्रधानमंत्री नरेन्द्र मोदी। फोटो - फाइल


ನವದೆಹಲಿ, 16 ನವೆಂಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಫಿಲಿಪ್ಪೀನ್ಸ್ ಪ್ರವಾಸ ಇಂದಿನಿಂದ ಆರಂಭವಾಗಲಿದೆ. ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನವೆಂಬರ್ 16 ಮತ್ತು 17ರಂದು ಪ್ರಧಾನಿ ಮೋದಿ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಲಿದ್ದಾರೆ.

ಪ್ರವಾಸದ ಸಂದರ್ಭದಲ್ಲಿ ನವೆಂಬರ್ 17ರಂದು ನಡೆಯಲಿರುವ 23ನೇ ಆಸಿಯಾನ್–ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ಭಾರತದ ಪೂರ್ವಾಭಿಮುಖ ನೀತಿ ಹಾಗೂ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ವಲಯದ ಕುರಿತ ಭಾರತದ ದೃಷ್ಟಿಕೋನದಲ್ಲಿ ಭಾರತ–ಆಸಿಯಾನ್ ಸಂಬಂಧಗಳು ಪ್ರಮುಖ ಪಾತ್ರ ವಹಿಸಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಪ್ರವಾಸ ಮಹತ್ವ ಪಡೆದಿದೆ.

ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು 2026ನೇ ವರ್ಷವನ್ನು ಆಸಿಯಾನ್–ಭಾರತ ಕಡಲ ಸಹಕಾರ ವರ್ಷವನ್ನಾಗಿ ಆಚರಿಸುತ್ತಿವೆ. ಅಲ್ಲದೆ, 2027ರಲ್ಲಿ ಭಾರತ–ಆಸಿಯಾನ್ ನಡುವಿನ ಸಂವಾದ ಸಂಬಂಧಗಳಿಗೆ 35 ವರ್ಷ ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷ ಪೂರ್ಣಗೊಳ್ಳಲಿದೆ.

23ನೇ ಆಸಿಯಾನ್–ಭಾರತ ಶೃಂಗಸಭೆಯಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದಲ್ಲಿನ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಇದರಲ್ಲಿ 2026ರಿಂದ 2030ರವರೆಗಿನ ಆಸಿಯಾನ್–ಭಾರತ ಕಾರ್ಯಯೋಜನೆಯೂ ಸೇರಿದೆ. ಜತೆಗೆ, ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ.

21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಆಸಿಯಾನ್ ರಾಷ್ಟ್ರಗಳು ಹಾಗೂ ಇತರ ಭಾಗವಹಿಸುವ ದೇಶಗಳೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande