ಕೇದಾರನಾಥ, ಬದರಿನಾಥದಲ್ಲಿ ‘ನವೋತ್ಥಾನ’, ‘ಯುಗವಾರ್ತಾ’ ವಿಶೇಷಾಂಕ ಬಿಡುಗಡೆ: ಉತ್ತರ ಪ್ರದೇಶ–ಉತ್ತರಾಖಂಡ ಸಾಂಸ್ಕೃತಿಕ ಏಕತೆಗೆ ವೇದಿಕೆ
ಕೇದಾರನಾಥ/ಬದ್ರೀನಾಥ್, 10 ನವೆಂಬರ್(ಹಿ.ಸ.): ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ಮತ್ತು ಬದರಿನಾಥ ಧಾಮಗಳಲ್ಲಿ ದೀಪೋತ್ಸವ ಹಾಗೂ ಭಾಯಿದೂಜ್ ಪವಿತ್ರ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪ್ರಜ್ಞೆ, ರಾಷ್ಟ್ರೀಯ ಚಿಂತನೆ ಮತ್ತು ಸಾಂಸ್ಕೃತಿಕ ಏಕತೆಯ ಸಂದೇಶ ಸಾರುವ ಕಾರ್ಯಕ್ರಮಗಳು ನಡೆದವು.
केदारनाथ में विधायक भूपेश चौबे सहित संत और गणमान्य लोग युग्वार्ता और नवोत्थान पत्रिका का विमोचन करते।


केदारनाथ में विधायक भूपेश चौबे,संत और गणमान्य लोग युग्वार्ता और नवोत्थान पत्रिका का विमोचन करते।


बद्रीनाथ धाम में विधायक भूपेश चौबे,संत कमलेश रतूड़ी और गणमान्य लोग युग्वार्ता और नवोत्थान पत्रिका का विमोचन करते


ಕೇದಾರನಾಥ/ಬದ್ರೀನಾಥ್, 10 ನವೆಂಬರ್(ಹಿ.ಸ.):

ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ಮತ್ತು ಬದರಿನಾಥ ಧಾಮಗಳಲ್ಲಿ ದೀಪೋತ್ಸವ ಹಾಗೂ ಭಾಯಿದೂಜ್ ಪವಿತ್ರ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪ್ರಜ್ಞೆ, ರಾಷ್ಟ್ರೀಯ ಚಿಂತನೆ ಮತ್ತು ಸಾಂಸ್ಕೃತಿಕ ಏಕತೆಯ ಸಂದೇಶ ಸಾರುವ ಕಾರ್ಯಕ್ರಮಗಳು ನಡೆದವು.

ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ಥಾನ್ ಸಮಾಚಾರ್‌ನ ‘ನವೋತ್ಥಾನ’ ಮತ್ತು ‘ಯುಗವಾರ್ತಾ’ ನಿಯತಕಾಲಿಕೆಗಳ ವಿಶೇಷಾಂಕಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ‘ಉತ್ತರ ಪ್ರದೇಶ ತೀರ್ಥಯಾತ್ರೆ–ಪ್ರವಾಸೋದ್ಯಮ’ ಪುಸ್ತಕವನ್ನೂ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮಗಳ ಮೂಲಕ ಉತ್ತರ ಪ್ರದೇಶದ ಸಾಂಸ್ಕೃತಿಕ ಮತ್ತು ವೈಚಾರಿಕ ಪರಂಪರೆ ಹಾಗೂ ಉತ್ತರಾಖಂಡದ ಆಧ್ಯಾತ್ಮಿಕ ಪರಂಪರೆಗೆ ಒಂದೇ ವೇದಿಕೆ ಕಲ್ಪಿಸಲಾಯಿತು.

ಕೇದಾರನಾಥ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಬರ್ಟ್ಸ್‌ಗಂಜ್ ಕ್ಷೇತ್ರದ ಶಾಸಕ ಭೂಪೇಶ್ ಚೌಬೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಅವರು ಮಾತನಾಡಿ, ಸಕಾರಾತ್ಮಕ ಪತ್ರಿಕೋದ್ಯಮವು ಸಮಾಜಕ್ಕೆ ದಿಕ್ಕು ತೋರಿಸುವ ಮತ್ತು ಜನಜಾಗೃತಿಗೆ ಪ್ರೇರಣೆ ನೀಡುವ ಪ್ರಬಲ ಮಾಧ್ಯಮವಾಗಿದೆ. ರಾಷ್ಟ್ರ, ಸಂಸ್ಕೃತಿ, ಸಮಾಜ ಮತ್ತು ಜನಹಿತಕ್ಕೆ ಸಂಬಂಧಿಸಿದ ವಿಷಯಗಳಿಗೆ ಈ ಪ್ರಕಟಣೆಗಳು ಪರಿಣಾಮಕಾರಿ ವೇದಿಕೆಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ಥಾನ್ ಸಮಾಚಾರ್‌ನ ಮುಖ್ಯ ಸಂಯೋಜಕ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ ಮತ್ತು ಜಾರ್ಖಂಡ್ ಪ್ರಾದೇಶಿಕ ಸಂಪಾದಕ ಡಾ. ರಾಜೇಶ್ ತಿವಾರಿ ಮಾತನಾಡಿ, ಭಾಷೆಯ ಮೂಲಕ ಸಮಾಜದ ನೆನಪುಗಳು, ಸಂಪ್ರದಾಯಗಳು, ಹೋರಾಟಗಳು ಮತ್ತು ಸಾಧನೆಗಳು ಮುಂದಿನ ಪೀಳಿಗೆಗೆ ತಲುಪುತ್ತವೆ. ಭಾರತೀಯ ಭಾಷೆಗಳ ಪತ್ರಿಕೋದ್ಯಮವನ್ನು ಬಲಪಡಿಸುವುದು ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ವೈಚಾರಿಕ ಸ್ವಾವಲಂಬನೆಯನ್ನು ಬಲಪಡಿಸಿದಂತೆ ಎಂದು ಹೇಳಿದರು.

ಕೇದಾರನಾಥದ ಕಾರ್ಯಕ್ರಮದಲ್ಲಿ ಬಾಬಾ ಕೇದಾರನಾಥರ ಅರ್ಚಕ ಅರುಣ್ ನೌಟಿಯಾಲ್, ಭೈರವನಾಥರ ಅರ್ಚಕ ಅರವಿಂದ್ ಶುಕ್ಲಾ, ಹಿಂದೂಸ್ಥಾನ್ ಸಮಾಚಾರ್‌ನ ಉತ್ತರಾಖಂಡ ವಿಭಾಗದ ಮುಖ್ಯಸ್ಥ ರಾಜೇಶ್ ಪಾಂಡೆ ಹಾಗೂ ಪತ್ರಕರ್ತ ಜಿತೇಂದ್ರ ಪಾಂಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮೂರು ಪ್ರಕಟಣೆಗಳ ಆಕರ್ಷಕ ವಿನ್ಯಾಸ, ಅಚ್ಚುಕಟ್ಟಾದ ಮುದ್ರಣ ಮತ್ತು ಗುಣಮಟ್ಟದ ವಿಷಯವಸ್ತುವನ್ನು ಅತಿಥಿಗಳು ಶ್ಲಾಘಿಸಿದರು.

‘ಯೋಗಿ ಆಡಳಿತದಲ್ಲಿ ಮುಂಚೂಣಿಯ ರಾಜ್ಯ’ ವಿಶೇಷಾಂಕ

‘ಯುಗವಾರ್ತಾ’ದ ‘ಯೋಗಿ ಆಡಳಿತದಲ್ಲಿ ಮುಂಚೂಣಿಯ ರಾಜ್ಯ’ ವಿಶೇಷಾಂಕವು ಉತ್ತರ ಪ್ರದೇಶದ ನಾಯಕತ್ವ, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಬದಲಾಗುತ್ತಿರುವ ರಾಜ್ಯದ ಗುರುತಿನ ಕುರಿತು ಬೆಳಕು ಚೆಲ್ಲಿದೆ. ಜನಸಂಖ್ಯೆ, ಸಾಂಸ್ಕೃತಿಕ ವಿಸ್ತಾರ ಮತ್ತು ಐತಿಹಾಸಿಕ ಪರಂಪರೆಯ ದೃಷ್ಟಿಯಿಂದ ಮಹತ್ವ ಹೊಂದಿರುವ ಉತ್ತರ ಪ್ರದೇಶವು ರಾಷ್ಟ್ರೀಯ ರಾಜಕೀಯ, ಆರ್ಥಿಕತೆ, ಧಾರ್ಮಿಕ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದನ್ನು ವಿಶೇಷಾಂಕದಲ್ಲಿ ವಿಶ್ಲೇಷಿಸಲಾಗಿದೆ.

‘ಉತ್ತರ ಪ್ರದೇಶ ತೀರ್ಥಯಾತ್ರೆ–ಪ್ರವಾಸೋದ್ಯಮ’ ಪುಸ್ತಕವು ರಾಜ್ಯದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ವ್ಯಾಪಕ ಗುರುತನ್ನು ತಂದುಕೊಡುವ ಪ್ರಯತ್ನವಾಗಿದೆ. ಕಾಶಿಯಿಂದ ಕೇದಾರನಾಥದವರೆಗೆ, ಅಯೋಧ್ಯೆಯಿಂದ ಬದರಿನಾಥದವರೆಗೆ ಹಾಗೂ ವಿಂಧ್ಯಾಚಲದಿಂದ ಹಿಮಾಲಯದ ಶಿಖರಗಳವರೆಗೆ ಹರಡಿರುವ ಭಕ್ತಿಯ ಪರಂಪರೆಯು ಭಾರತದ ಸಾಂಸ್ಕೃತಿಕ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಲಾಗಿದೆ.

ಬದರಿನಾಥದಲ್ಲೂ ನಿಯತಕಾಲಿಕೆಗಳ ಬಿಡುಗಡೆ

ಬದರಿನಾಥ ಧಾಮದಲ್ಲಿ ಭಾಯಿದೂಜ್ ಸಂದರ್ಭದಲ್ಲಿ ಶಾಸಕ ಭೂಪೇಶ್ ಚೌಬೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕುಲಪುರೋಹಿತ ಹಾಗೂ ಜೋಶಿಮಠದ ಪ್ರಸಿದ್ಧ ಸಂತ ಕಮಲೇಶ್ ಕುಕ್ರೇತಿ ಮತ್ತು ಡಾ. ರಾಜೇಶ್ ತಿವಾರಿ ಅವರು ‘ನವೋತ್ಥಾನ’ ಹಾಗೂ ‘ಯುಗವಾರ್ತಾ’ ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತ ಕಮಲೇಶ್ ಕುಕ್ರೇತಿ, ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಮೌಲ್ಯಗಳ ಸಂರಕ್ಷಣೆಯಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

‘ನವೋತ್ಥಾನ’ದ ಸಂಸ್ಕೃತಿಯೊಂದಿಗೆ ಸ್ವಾವಲಂಬನೆ ವಿಶೇಷಾಂಕವು ಭಾರತೀಯ ಸಮಾಜದ ಸಾಂಸ್ಕೃತಿಕ ಬೇರುಗಳು, ಸಂಪ್ರದಾಯಗಳು, ಜ್ಞಾನ, ಕೌಶಲ ಮತ್ತು ಸ್ಥಳೀಯ ಸಂಪನ್ಮೂಲಗಳ ಮೇಲಿನ ವಿಶ್ವಾಸವನ್ನು ಬಲಪಡಿಸುವ ಆಶಯ ಹೊಂದಿದೆ. ಅಭಿವೃದ್ಧಿಯನ್ನು ಕೇವಲ ಆರ್ಥಿಕ ಪ್ರಗತಿಗೆ ಸೀಮಿತಗೊಳಿಸದೆ, ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ಸಮಾಜ ನಿರ್ಮಾಣದೊಂದಿಗೆ ಬೆಸೆಯಲಾಗಿದೆ ಎಂದು ವಿವರಿಸಿದರು.

ಉತ್ತರ ಪ್ರದೇಶದಿಂದ ಪ್ರತ್ಯೇಕವಾಗಿ ಉತ್ತರಾಖಂಡ ರಾಜ್ಯ ರಚನೆಯಾದರೂ ಎರಡೂ ರಾಜ್ಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಯಾವುದೇ ಅಂತರ ಉಂಟಾಗಿಲ್ಲ. ಧಾರ್ಮಿಕ ಸಂಪ್ರದಾಯಗಳು, ಜನಪದ ಸಂಸ್ಕೃತಿ, ಭಾಷಾ ವೈವಿಧ್ಯತೆ, ತೀರ್ಥಕ್ಷೇತ್ರಗಳು ಮತ್ತು ಜನಜೀವನ ಎರಡೂ ರಾಜ್ಯಗಳನ್ನು ಪರಸ್ಪರ ಬೆಸೆದಿವೆ. ಕೇದಾರನಾಥದ ಪವಿತ್ರ ಪರಿಸರದಲ್ಲಿ ನಡೆದ ಈ ಪ್ರಕಟಣೆಗಳ ಬಿಡುಗಡೆ ಎರಡೂ ರಾಜ್ಯಗಳ ನಡುವಿನ ಆತ್ಮೀಯ ಸಂಬಂಧದ ಸಂಕೇತವಾಗಿದೆ.

ರಾಷ್ಟ್ರೀಯ ಪ್ರಜ್ಞೆಯ ವಾಹಕ ಭಾರತೀಯ ಭಾಷೆಗಳು

ದೇಶದ ಮೊದಲ ಬಹುಭಾಷಾ ಸುದ್ದಿ ಸಂಸ್ಥೆಯಾದ ಹಿಂದೂಸ್ಥಾನ್ ಸಮಾಚಾರ್ ಭಾರತೀಯ ಭಾಷೆಗಳಲ್ಲಿ ಸುದ್ದಿ ಮತ್ತು ವಿಚಾರಗಳನ್ನು ಜನರಿಗೆ ತಲುಪಿಸುವ ಪರಂಪರೆಯನ್ನು ಮುಂದುವರಿಸುತ್ತಿದೆ. ‘ನವೋತ್ಥಾನ’ ಮತ್ತು ‘ಯುಗವಾರ್ತಾ’ ನಿಯತಕಾಲಿಕೆಗಳೂ ಭಾರತೀಯ ಭಾಷೆಗಳಲ್ಲಿ ರಾಷ್ಟ್ರೀಯ ಚರ್ಚೆಗಳಿಗೆ ವಿಸ್ತಾರವಾದ ವೇದಿಕೆ ಕಲ್ಪಿಸುತ್ತಿವೆ.

‘ನವೋತ್ಥಾನ’ದ ವಿಶೇಷಾಂಕವು ಸಂಸ್ಕೃತಿಯೊಂದಿಗೆ ಸ್ವಾವಲಂಬನೆಯ ಪರಿಕಲ್ಪನೆಯನ್ನು ಕೇಂದ್ರವಾಗಿಟ್ಟುಕೊಂಡಿದೆ. ಭಾರತೀಯ ಸಮಾಜದ ಬೇರುಗಳು, ಸಂಪ್ರದಾಯಗಳು, ಜ್ಞಾನ, ಕೌಶಲ ಮತ್ತು ಸಂಪನ್ಮೂಲಗಳ ಮೇಲಿನ ವಿಶ್ವಾಸವನ್ನು ಬಲಪಡಿಸುವುದು ಇದರ ಆಶಯವಾಗಿದೆ. ಇಂತಹ ವಿಚಾರಗಳ ಪ್ರಕಟಣೆಯು ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪ್ರಜ್ಞೆಯನ್ನು ರಾಷ್ಟ್ರೀಯ ಸಂವಾದದೊಂದಿಗೆ ಬೆಸೆಯಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande