ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ನೆರವಾಗುವಂತೆ ಮನವಿ
ಬಾಗಲಕೋಟೆ, 28 ಅಕ್ಟೋಬರ್ (ಹಿ.ಸ.) ಮುಧೋಳ ನಗರದಾದ್ಯಂತ ದಸರಾ ಹಬ್ಬದ ನವರಾತ್ರಿ ಸಂದರ್ಭದಲ್ಲಿ ಯುವಕ ನಿತಿನ್ ನಿಂಬಾಳ್ಕರ್ ಅವರನ್ನು ಕೊಲೆಗೈದ ಆರೋಪಿಗಳಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗುವಂತೆ ಅಗತ್ಯ ಕಾನೂನು ನೆರವು ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿ ವಕೀಲರ ಸಂಘದ ಅಧ್ಯಕ್ಷ ವಿ.ಡಿ.
ಕೊಲೆ ತನಿಖೆಗೆ ಆಗ್ರಹ


ಬಾಗಲಕೋಟೆ, 28 ಅಕ್ಟೋಬರ್ (ಹಿ.ಸ.)

ಮುಧೋಳ ನಗರದಾದ್ಯಂತ ದಸರಾ ಹಬ್ಬದ ನವರಾತ್ರಿ ಸಂದರ್ಭದಲ್ಲಿ ಯುವಕ ನಿತಿನ್ ನಿಂಬಾಳ್ಕರ್ ಅವರನ್ನು ಕೊಲೆಗೈದ ಆರೋಪಿಗಳಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗುವಂತೆ ಅಗತ್ಯ ಕಾನೂನು ನೆರವು ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಿತಿನ್ ನಿಂಬಾಳ್ಕರ್ ಅವರ ಕೊಲೆ ಪ್ರಕರಣದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಉಂಟಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಮನವಿದಾರರು ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಹಂತದಲ್ಲಿ ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ದಾಖಲಿಸಿ, ನ್ಯಾಯಾಲಯದಲ್ಲಿ ಪ್ರಕರಣವನ್ನು ಸಮರ್ಥವಾಗಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಆರೋಪಿಗಳು ಕಾನೂನಿನ ಲೋಪದಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಯುವಕನನ್ನು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರಕರಣದಲ್ಲಿ ನೊಂದ ಕುಟುಂಬದ ಪರವಾಗಿ ಅಗತ್ಯ ಕಾನೂನು ನೆರವು ದೊರೆಯುವಂತೆ ವಕೀಲರ ಸಂಘ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಿತಿನ್ ನಿಂಬಾಳ್ಕರ್ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande