
ವಿಜಯಪುರ, 21 ಜನವರಿ (ಹಿ.ಸ.) :
ಆ್ಯಂಕರ್ : ಆನ್ಲೈನ್ ವಂಚನೆ ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದ ವ್ಯಾಪಾರಿಯೊಬ್ಬರಿಗೆ The Octa Trading App ಎಂಬ ಟ್ರೇಡಿಂಗ್ ಅಪ್ಲೀಕೇಶನ್ದಲ್ಲಿ ಹಣ ಹೂಡಿಕೆ ಮಾಡಿದರೆ ಅಂತರಾಷ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಟ್ರೇಡ್ ಮಾಡಿ, ಹೂಡಿಕೆ ಮಾಡಿದ ಹಣಕ್ಕೆ ಫ್ರೀ ದಿವಸ ಪ್ರತಿಶತ 4% ಲಾಭಾಂಶ ಮಾಡಿಕೊಡುತ್ತೇವೆ ಅಂತಾ ಸುಳ್ಳು ಹೇಳಿ ನಂಬಿಸಿ 2,04,71,500/- ರೂ. ಗಳನ್ನು ಹಾಕಿಸಿಕೊಂಡು ಟ್ರೇಡಿಂಗ್ ಹೆಸರಿನಲ್ಲಿ ಆನ್ಲೈನ್ ಮೂಲಕ ವಂಚನೆ ಮಾಡಿದ್ದರು. ಸದರಿ ಕೃತ್ಯ ಎಸಗಿದ ಆರೋಪಿತರಿಗೆ ಪತ್ತೆ ಮಾಡಿ, ನೋಟೀಸ್ ಜಾರಿ ಮಾಡಿ ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಮೊದಲು 70,00,000/- ರೂ. ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು. ಪ್ರಸ್ತುತ 65,64,000/- ರೂ. ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಿದ್ದು, ಸದರಿ ಪ್ರಕರಣದಲ್ಲಿ ಒಟ್ಟು 1,35,64,000/- ರೂ. ಗಳನ್ನು ಆರೋಪಿತರಿಂದ ದೂರುದಾರರಿಗೆ ನೀಡಲಾಗಿದೆ. ಅಲ್ಲದೇ, ಜಿಲ್ಲಾ ವ್ಯವಸ್ಥಾಪಕರಾದ ರೇಣುಕಾ ಸಾತರ್ಲೆ, ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಮಣಿಗಿರಿ (ನಿವೃತ್ತ) ಹಾಗೂ ಮುಧೋಳ ಎಂ.ಟಿ ಇವರುಗಳು ಕರ್ತವ್ಯಲೋಪ ಮಾಡಿ ಸರ್ಕಾರಕ್ಕೆ ರೂ. 75,90,000/- (ರೂ ಗಳನ್ನು ದಿನಾಂಕ: 10.12.2018 ರಂದು 37,95,000/- ರೂ. ಗಳನ್ನು ಅಂಬೇಡ್ಕರ ಅಭಿವೃದ್ದಿ ನಿಗಮದ ಬ್ಯಾಂಕ್ ಖಾತೆಯಾದ 733286768 ಭೂ ಒಡೆತನ ಯೋಜನೆ ಹೆಸರಿನಲ್ಲಿರುವ ಇಂಡಿಯನ್ ಬ್ಯಾಕ್, ವಿಜಯಪುರ ಶಾಖೆಯ ಕ್ರಾಸ್ ಚೆಕ್ನ್ನು ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿಜಯಪುರದ ಕಾರ್ಯಾಲಯದಲ್ಲಿ ಕೊಟ್ಟು ಮತ್ತು ದಿನಾಂಕ: 23.01.2019 ರಂದು 3,79,500/- ರೂ. ಹಾಗೂ ದಿನಾಂಕ: 28.01.2019 ರಂದು 34,15,500/- ರೂ. ಗಳನ್ನು ಬೆಂಗಳೂರು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ, ಕೆನರಾ ಬ್ಯಾಂಕ್ ಶಾಖೆಯ ಖಾತೆ ನಂ: 6349132000077 ಭೂ ಒಡೆತನ ಯೋಜನೆ ಹೆಸರಿನಲ್ಲಿರುವ ಖಾತೆಯಿಂದ ಆರ್ಟಿಜಿಎಸ್ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದು, ಆರೋಪಿತರ ಬ್ಯಾಂಕ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು 27,55,183/- ರೂ. ಗಳನ್ನು ಮರಳಿಸಲಾಗಿದೆ ಎಂದರು. ಇನ್ನು ವಿಜಯಪುರ ಜಿಲ್ಲೆಯ ವೈದ್ಯರೊಬ್ಬರಿಗೆ ಡಿವೋರ್ಸ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ, http://m.bitcoin-vt.com ಎಂಬ ವೆಬಸೈಟ್ನಲ್ಲಿ ಹಣ ಹೂಡಿಕೆ ಮಾಡಿ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಲಾಭಾಂಶ ಮಾಡಿಕೊಟ್ಟು ದೂರುದಾರರ ಸಾಲ ತೀರಿಸುವುದಾಗಿ ಸುಳ್ಳು ಹೇಳಿ ನಂಬಿಸಿ ದೂರುದಾರರ ಕಡೆಯಿಂದ 2,15,50,000/- ರೂ. ಹಾಕಿಸಿಕೊಂಡು ಮೋಸ ವಂಚನೆ ಮಾಡಿದ್ದು, ಸದರಿ ಕೃತ್ಯ ಎಸಗಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು 25,11,000/- ರೂ. ಗಳನ್ನು ಆರೋಪಿತರಿಂದ ದೂರುದಾರರಿಗೆ ನೀಡಲಾಗಿದೆ. ಮತ್ತೊಂದೆಡೆ ವಿಜಯಪುರ ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ Jet Serve Aviation Private Ltd. (Flyola) ಎಂಬ ವೆಬ್ಸೈಟಿನಲ್ಲಿ ಪ್ರಯಾಗರಾಜ ವಿಮಾನ ನಿಲ್ದಾಣದಿಂದ ಪ್ರಯಾಗರಾಜ ಕುಂಭಮೇಳ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸರ್ವಿಸ್ ಕೊಡುತ್ತೇವೆ ಅಂತಾ ಸುಳ್ಳು ಹೇಳಿ ನಂಬಿಸಿ ಮತ್ತು ಹೆಲಿಕಾಪ್ಟ್ರ್ ಸರ್ವಿಸ್ ಕೊಡದೆ ಹಣವನ್ನು ಸಹ ಮರಳಿ ಕೊಡದೆ ಆನ್ಲೈನ್ ಮೂಲಕ ಮೋಸ ವಂಚನೆ ಮಾಡಿದ್ದು, ಅಲ್ಲದೇ ಪಿರ್ಯಾದಿಗೆ ವಿಮಾನದ ಟಿಕೆಟ್ ಹಣ ರೂ. 1,08,000/- ಹಾಗೂ ಪ್ರಯಾಗರಾಜದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಗೆ ಅಂತಾ ಸುಮಾರು 1,21,000/- ರೂ. ಪಡೆದು, ಒಟ್ಟು 4,08,000/- ರೂ. ಗಳನ್ನು ವಂಚನೆ ಮಾಡಿದ್ದು, ಸದರಿ ಕೃತ್ಯ ಎಸಗಿದ ಆರೋಪಿತರಿಂದ ಮತ್ತು ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು 4,08,000/- ರೂ. ಗಳನ್ನು ಆರೋಪಿತರಿಂದ ದೂರುದಾರರಿಗೆ ನೀಡಿದ್ದು, ವಿಜಯಪುರ ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಹಾಗೂ ಅವರ ಪರಿಚಯದ 09 ಜನರಿಗೆ ಇಕಾಮ್ ಡೆಲಿವರಿ ಪ್ರಾಂಚೈಸಿ ಕೊಡುತ್ತೇವೆ ಅಂತಾ ನಂಬಿಸಿ ಅವರಿಂದ ಒಟ್ಟು 58,00,000/- ರೂ. ಗಳನ್ನು ಪಡೆದುಕೊಂಡು ಯಾವುದೇ ಫ್ರಾಂಚೈಸಿ ಕೊಡದೆ ವಂಚನೆ ಮಾಡಿದ್ದು, ಸದರಿ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು 10,00,000/- ರೂ. ಗಳನ್ನು ಪಿರ್ಯಾದಿ ಮತ್ತು ಸಾಕ್ಷಿದಾರರಿಗೆ ಮರಳಿಸಲಾಗಿರುತ್ತದೆ. ಅದರಂತೆ ಉಳಿದ ಆರೋಪಿತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12,00,000/- ರೂ. ಗಳನ್ನು ಫ್ರೀಜ್ ಮಾಡಿಸಿ, ನ್ಯಾಯಾಲಯದ ಆದೇಶ ಪಡೆದುಕೊಂಡಿದ್ದು, ಬ್ಯಾಂಕಿನಿಂದ ಸಾಕ್ಷಿದಾರರಿಗೆ ರಿಫಂಡ್ ಮಾಡಿಸುವ ಪ್ರಕ್ರಿಯೆಯಲ್ಲಿ ಇದೆ ಎಂದರು. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೇಲ್ಕಂಡ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರು ವಂಚನೆ ಮಾಡಿದ ಹಣದಲ್ಲಿ ಸುಮಾರು*1,32,38,183/-* ರೂ. ಹಣವನ್ನು ದೂರುದಾರರಿಗೆ ಮರಳಿಸಲಾಗಿದೆ. ಅಲ್ಲದೇ ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೋಬೈಲ್ಗಳನ್ನು ಸಿ.ಇ.ಐ.ಆರ್ (CEIR) ಪೋರ್ಟಲ್ ಮುಖಾಂತರ ವಿವಿಧ ಕಂಪನಿಯ ಒಟ್ಟು 2,40,000/- ರೂ. ಮೌಲ್ಯದ 10 ಮೋಬೈಲ್ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande