
ಬಳ್ಳಾರಿ, 21 ಜನವರಿ (ಹಿ.ಸ.) :
ಆ್ಯಂಕರ್: ಪೂಜ್ಯನೀಯ ಸಿದ್ಧ್ದಗಂಗಾ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿ 7ನೇ ವರ್ಷದ ಸ್ಮರಣೆಯನ್ನು ಬಳ್ಳಾರಿ ನಗರದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಭಾವನದಿಂದ ಬುಧವಾರ ಆಚರಿಸಲಾಯಿತು.
ಕರ್ನಾಟಕದ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು, ಕರಾವಳಿ, ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ, ಆಶ್ರಯ ಮತ್ತು ಅಕ್ಷರವನ್ನು ನೀಡಿ, ಅವರ ಕುಟುಂಬಗಳಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿ, ಸಮಾಜದಲ್ಲಿ ಶಾಶ್ವತವಾದ ಬದಲಾವಣೆಗೆ ಕಾರಣರಾಗಿದ್ದ ಶ್ರೀಗಳು ಸದಾ ಸ್ಮರಣೀಯರು. ವಿಶ್ವರತ್ನರು ಎಂದು ಸ್ಮರಣೋತ್ಸವದಲ್ಲಿ ಪಾಲ್ಗೊಂಡಿದ್ದವರು ಎಲ್ಲರೂ ಹೇಳಿದರು.
ಎಚ್.ಕೆ. ಗೌರಿಶಂಕರಸ್ವಾಮಿ, ವನ್ನನಗೌಡ, ದರೂರು ಶಾಂತನಗೌಡ, ಉಮೇಶಗೌಡ, ಬಂಡೇಗೌಡ ಶಿವಶಂಕರಗೌಡ, ಕಗ್ಗಲ್ ಮಲ್ಲಾರೆಡ್ಡಿ , ಜಾಲಿಹಾಳ ಶ್ರೀಧರ್ ಗೌಡ, ಎಚ್.ಎಂ. ಅಮರೇಶಯ್ಯ ಸ್ವಾಮಿ, ಕೊಳಗಲ್ಲು ವೀರನಗೌಡ, ಡಾ. ಪುರುಷೋತ್ತಮ ಗೌಡ, ಸೋಮಸಮುದ್ರ ಲಿಂಗಾರೆಡ್ಡಿ ಹಾಗೂ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಶ್ರೀಗಳ ಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್