ಫೆಬ್ರವರಿ 3ಕ್ಕೆ ಬಂಡಿಹಟ್ಟಿಯಲ್ಲಿ `ಪ್ರಮೀಳಾ ದರ್ಬಾರ್’
ಬಳ್ಳಾರಿ, 21 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಕೌಲ್‍ಬಜಾರ್ ವ್ಯಾಪ್ತಿಯ ಬಂಡಿಹಟ್ಟಿಯ ಶ್ರೀರಾಮಲಾದೇವಿ ದೇವಸ್ಥಾನದ ಹತ್ತಿರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಪ್ರಮೀಳಾ ದರ್ಬಾರ್ ಅರ್ಥಾತ್ ಅರ್ಜುನನ ಗರ್ವಭಂಗ ಎಂಬ ಸುಂದರ ಪೌರಾಣಿಕ ಬಯಲಾಟ ಫೆಬ್ರವರಿ 3ರ ಮಂಗಳವಾರ
ಫೆಬ್ರವರಿ 3ಕ್ಕೆ ಬಂಡಿಹಟ್ಟಿಯಲ್ಲಿ `ಪ್ರಮೀಳಾ ದರ್ಬಾರ್’


ಬಳ್ಳಾರಿ, 21 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಕೌಲ್‍ಬಜಾರ್ ವ್ಯಾಪ್ತಿಯ ಬಂಡಿಹಟ್ಟಿಯ ಶ್ರೀರಾಮಲಾದೇವಿ ದೇವಸ್ಥಾನದ ಹತ್ತಿರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಪ್ರಮೀಳಾ ದರ್ಬಾರ್ ಅರ್ಥಾತ್ ಅರ್ಜುನನ ಗರ್ವಭಂಗ ಎಂಬ ಸುಂದರ ಪೌರಾಣಿಕ ಬಯಲಾಟ ಫೆಬ್ರವರಿ 3ರ ಮಂಗಳವಾರ ರಾತ್ರಿ 730 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಬಂಡಿಹಟ್ಟಿಯ ಮಹಾನಗರಪಾಲಿಕೆಯ 32ನೇ ವಾರ್ಡಿನ ಸದಸ್ಯೆಯಾದ ಶ್ರೀಮತಿ ಮಂಜುಳಾ ಉಮಾಪತಿ, ಕರ್ನಾಟಕ ಬಯಲಾಟ ಅಕಾಡೆಮಿಯ ಡಾ. ಕೆ.ಆರ್. ದುರ್ಗದಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹಾಗೂ ಬಯಲಾಟದ ಹಾರ್ಮೋನಿಯಂ ಮಾಸ್ತರ್ ಕೆ. ಸಣ್ಣ ಭೀಮಣ್ಣ ಅವರು ಬಯಲಾಟವನ್ನು ಉದ್ಘಾಟಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ಸಿಪಿಐಗಳಾದ ಷಣ್ಮುಖಪ್ಪ,, ಪಿ.ಎಸ್.ಐ. ಲಾರೆನ್ಸ್, ಜೆಸ್ಕಾಂ ಸಹಾಯಕ ಇಂಜಿನಿಯರ್ ಶಿವಕುಮಾರ್, ಮಹಾನಗರ ಪಾಲಿಕೆಯ ಕಂದಾಯ ನಿರೀಕ್ಷಕರಾದ ಕೆ. ಸೋಮಶೇಖರ ಸಿ.ಎಂ.ಸಿ. ಸೂಪರ್‍ವೈಜರ್ ಶಾಂತಕುಮಾರ್, ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕ ರಾಮಕೃಷ್ಣ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಮನ್ವಯ ಸಮಿತಿಯ ಸದಸ್ಯ ಕೆ. ಪರಮೇಶ್ವರ, ಗ್ರಾಮಲೆಕ್ಕಾಧಿಕಾರಿ ಉಮೇಶ್, ಮತ್ತು ಸುರೇಶ್ ಮುಂತಾದವರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಉಪನ್ಯಾಸಕ ಬಾಷಾ ಅವರು ನಿರೂಪಿಸಲಿದ್ದಾರೆ. ಬಯಲಾಟದ ಮ್ಯಾನೇಜರ್‍ಗಳಾದ ಕೆ.ಶಿವಶರಣ, ಕೋರಿ ಚನ್ನಬಸಪ್ಪ, ಕೆ.ಎಳ್ಳಾರ್ತಿ ವಿರೇಶ್ ಅವರು ವೇದಿಕೆಯ ಮೇಲಿರಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande