ಕೈಗಾರಿಕಾ ಜಲ ಭದ್ರತೆಗೆ ಜಾಗತಿಕ ಸಹಭಾಗಿತ್ವ : ಎಂ.ಬಿ.ಪಾಟೀಲ
ದಾವೊಸ್, 21 ಜನವರಿ (ಹಿ.ಸ.) : ಆ್ಯಂಕರ್ : ದಾವೊಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕೈಗಾರಿಕಾ ಜಲ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಜಾಗತಿಕ ಮಟ್ಟದ ಪ್ರಮುಖ ಜಲ ತಂತ್ರಜ್ಞಾನ ಸಂಸ್ಥೆಯಾದ Xylem Inc. ಜೊತೆಗೆ ಮಲಿನ ನೀರು ಶುದ್ಧೀಕರಣ ಹಾಗೂ ಟರ್ಶಿ
Mbp


ದಾವೊಸ್, 21 ಜನವರಿ (ಹಿ.ಸ.) :

ಆ್ಯಂಕರ್ : ದಾವೊಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕೈಗಾರಿಕಾ ಜಲ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಜಾಗತಿಕ ಮಟ್ಟದ ಪ್ರಮುಖ ಜಲ ತಂತ್ರಜ್ಞಾನ ಸಂಸ್ಥೆಯಾದ Xylem Inc. ಜೊತೆಗೆ ಮಲಿನ ನೀರು ಶುದ್ಧೀಕರಣ ಹಾಗೂ ಟರ್ಶಿಯರಿ ಟ್ರೀಟೆಡ್ ವಾಟರ್ (TTP) ಘಟಕಗಳ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಒಂದು ಪೈಲಟ್ ಟಿಟಿಪಿ ಸೌಲಭ್ಯ ಆರಂಭಿಸುವ ಸಾಧ್ಯತೆಗಳ ಕುರಿತು ಮಾತುಕತೆ ನಡೆಯಿತು. ಈ ಪೈಲಟ್ ಯೋಜನೆಯ ಮೂಲಕ ಘಟಕದ ಸಾಮರ್ಥ್ಯ, ತಂತ್ರಜ್ಞಾನದ ಕಾರ್ಯಕ್ಷಮತೆ ಹಾಗೂ ವೆಚ್ಚ ಮಾದರಿಗಳನ್ನು ಸುಧಾರಿಸಿ, ಕೈಗಾರಿಕೆಗಳಿಗೆ ವಿಶ್ವಾಸಾರ್ಹ ಹಾಗೂ ಕಡಿಮೆ ಬೆಲೆಯ ನೀರಿನ ಪೂರೈಕೆಯನ್ನು ಸಾಧ್ಯವಾಗಿಸುವ ಉದ್ದೇಶವಿದೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ, ನೀರಿನ ವ್ಯರ್ಥವನ್ನು ತಗ್ಗಿಸಿ ಒಟ್ಟಾರೆ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಆಧಾರದ ಮೇಲೆ ನೀರಿನ ನಿರ್ವಹಣಾ ಪರಿಹಾರಗಳನ್ನು ಅಳವಡಿಸುವ ಕುರಿತು ಸಹ Xylem Inc ಪ್ರತಿನಿಧಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande