ಕೃಷಿ ಇಲಾಖೆ : ಪಿಎಂಎಫ್‍ಎಂಇ ಯೋಜನೆ ಸೌಲಭ್ಯ
ಬಳ್ಳಾರಿ, 21 ಜನವರಿ (ಹಿ.ಸ.) : ಆ್ಯಂಕರ್ : ಸಣ್ಣ ಮತ್ತು ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಅವಕಾಶ ಬದಗಿಸುತ್ತಿದ್ದು, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ ಪಿಎಂಎಫ್‍ಎಂಇ ಯೋಜನೆಯ ಸೌಲಭ್ಯ ಪಡೆದು
ಕೃಷಿ ಇಲಾಖೆ : ಪಿಎಂಎಫ್‍ಎಂಇ ಯೋಜನೆ ಸೌಲಭ್ಯ


ಬಳ್ಳಾರಿ, 21 ಜನವರಿ (ಹಿ.ಸ.) :

ಆ್ಯಂಕರ್ : ಸಣ್ಣ ಮತ್ತು ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಅವಕಾಶ ಬದಗಿಸುತ್ತಿದ್ದು, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ ಪಿಎಂಎಫ್‍ಎಂಇ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 6,000 ಹೊಸ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 15 ಲಕ್ಷದವರಗೆ ಸಹಾಯಧನ ಲಭ್ಯವಿದೆ.

ಏನಿದು ಪಿಎಂಎಫ್‍ಎಂಇ ಯೋಜನೆ?:

ಪ್ರಧಾನ ಮಂತ್ರಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಎಂಬುದು ಕೇಂದ್ರೀಯ ಅನುದಾನಿತ ವಲಯದ ಯೋಜನೆಯಾಗಿದೆ. ಇದು ದೇಶದ ಕಿರು ಅಹಾರ ಸಂಸ್ಕರಣಾ ಘಟಕಗಳಿಗೆ ಹಣಕಾಸು, ತಾಂತ್ರಿಕ ಮತ್ತು ವ್ಯವಹಾರ ಒದಗಿಸುವ ಬೆಂಬಲ ಗುರಿಯನ್ನು ಹೊಂದಿದೆ.

ಆಹಾರ ಸಂಸ್ಕರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿರುವ ವೈಯಕ್ತಿಕ ಕಿರು ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಲಯದ ಕಾನೂನುಬದ್ಧಗೊಳಿಸುವಿಕೆಯನ್ನು ಉತ್ತೇಜಿಸುವುದು ಪಿಎಂಎಫ್‍ಎಂಇ ಯೋಜನೆಯ ಗುರಿಯಾಗಿದೆ.

ಉದ್ದೇಶಗಳು:

ಹಾಲಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಎಫ್ ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯಗಳನ್ನು ಹೆಚ್ಚಿಸುವುದು. ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವ ಮೂಲಕ ಸಂಘಟಿತ ಸರಬರಾಜು ಸರಪಳಿಯೊಂದಿ ಏಕೀಕರಣಗೊಳಿಸುವುದು. ಈಗಿರುವ 2,00,000 ಉದ್ದಿಮೆಗಳನ್ನು ಔಪಚಾರಿಕ ಚೌಕಟ್ಟಿನೊಳಗೆ ಸೇರಿಸಲು ಬೆಂಬಲ ಒದಗಿಸುವುದು.

ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು ಶೇಖರಣ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‍ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರಯುವಿಕೆಯನ್ನು ಹೆಚ್ಚಿಸುವುದು. ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಯನ್ನು ಬಲಪಡಿಸುವುದು, ಹಾಗೂ ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರಯುವಿಕೆಯನ್ನು ಹೆಚ್ಚಿಸುವುದಾಗಿದೆ.

ಲಭಿಸುವ ಸಬ್ಸಿಡಿ ಎಷ್ಟು?:

ಈ ಯೋಜನೆಯಡಿ ರಾಜ್ಯ ಸರ್ಕಾರವು 6 ಲಕ್ಷ ರೂ. ಮತ್ತು ಕೇಂದ್ರ ಸರ್ಕಾರವು 9 ಲಕ್ಷ ರೂ.ಗಳ ಸಹಾಯಧನ ನೀಡುತ್ತದೆ. ಗರಿಷ್ಠ 15 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ.

ಅರ್ಹತೆ:

18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕ ಯಾವುದೇ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ.

ರೈತ ಉತ್ಪಾದಕ ಸಂಸ್ಥೆ

ಸ್ವ-ಸಹಾಯ ಗುಂಪುಗಳು, ಸಹಕಾರಿ ಸಂಘಗಳು, ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿದೆ.

ಈ ಯೋಜನೆಯಡಿ ಪ್ರಾರಂಭಿಸಬಹುದಾದ ಘಟಕಗಳು:

ಸಿರಿಧಾನ್ಯ ಮತ್ತು ಧಾನ್ಯಗಳ ಸಂಸ್ಕರಣೆ, ಬೆಲ್ಲದ ಉತ್ಪನ್ನಗಳು, ಉಪ್ಪಿನಕಾಯಿ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರಸ್ ಆಯಿಲ್, ಮೆಣಸಿನಕಾಯಿ ಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಮಸಾಲೆ ಉತ್ಪನ್ನಗಳು ಮತ್ತು ವಿವಿಧ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ಕೇವಲ ಶೇ.10 ಹೂಡಿಕೆ ಮಾಡಿ, ಶೇ.90 ರಷ್ಟು ಬ್ಯಾಂಕಿನ ಸಾಲ ಸೌಲಭ್ಯ ಪಡೆದು ಒಂದು ಉದ್ದಿಮೆ ಪ್ರಾರಂಭಿಸಲು ಸುವರ್ಣ ಅವಕಾಶವಾಗಿದೆ.

ಆಸಕ್ತ ರೈತರು, ರೈತ ಮಹಿಳೆಯರು, ಯುವಕ, ಯುವತಿಯರು ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ ಅಥವಾ ರೈತ ಕರೆ ಕೇಂದ್ರದ ಸಂಖ್ಯೆ: 1800-425-3553 ಗೆ ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande