ತೊಗರಿ ಮೌಲ್ಯವರ್ಧನೆ : ಸಚಿವ ಪ್ರಿಯಾಂಕ್ ಖರ್ಗೆ ಸಭೆ
ಬೆಂಗಳೂರು, 20 ಜನವರಿ (ಹಿ.ಸ.) : ಆ್ಯಂಕರ್ : ತೊಗರಿ ಮೌಲ್ಯವರ್ಧನೆಗೆ ಅಗತ್ಯವಿರುವ ಸಂಶೋಧನೆ, ತಾಂತ್ರಿಕ ನೆರವು ಹಾಗೂ ಇತರೆ ಸಹಾಯಕ ವ್ಯವಸ್ಥೆಗಳನ್ನು ರೂಪಿಸುವ ಸಂಬಂಧ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರಾದ ಸೈಯದ್ ಮಹಮೂದ್ ಚಿಸ್ತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಚಿವ
Meeting


ಬೆಂಗಳೂರು, 20 ಜನವರಿ (ಹಿ.ಸ.) :

ಆ್ಯಂಕರ್ : ತೊಗರಿ ಮೌಲ್ಯವರ್ಧನೆಗೆ ಅಗತ್ಯವಿರುವ ಸಂಶೋಧನೆ, ತಾಂತ್ರಿಕ ನೆರವು ಹಾಗೂ ಇತರೆ ಸಹಾಯಕ ವ್ಯವಸ್ಥೆಗಳನ್ನು ರೂಪಿಸುವ ಸಂಬಂಧ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರಾದ ಸೈಯದ್ ಮಹಮೂದ್ ಚಿಸ್ತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಸಭೆ ನಡೆಸಿ ಚರ್ಚಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ತೊಗರಿಯನ್ನು ಆಧಾರವಾಗಿ ಪಡೆದು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿ, ರೈತರಿಗೆ ಹೆಚ್ಚಿನ ಬೆಲೆ ಒದಗಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ಯಾವುದೇ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ವ್ಯವಸ್ಥೆ ರೂಪಿಸಿದರೆ, ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತದೆ. ಇದರೊಂದಿಗೆ ಗ್ರಾಮೀಣ ಉದ್ಯಮಶೀಲತೆ ವೃದ್ಧಿಯಾಗುವ ಜೊತೆಗೆ ರೈತರಿಗೆ ನೇರ ಲಾಭ ಸಿಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆ ಒದಗಿಸುವ ಗುರಿ ಹೊಂದಲಾಗಿದ್ದು, ಸ್ಥಳೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಲಾಗುವುದು. ಇದೇ ಸಂದರ್ಭದಲ್ಲಿ ತೊಗರಿಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವ ಕುರಿತು ಸಿದ್ಧಪಡಿಸಿದ ವರದಿಯನ್ನು ಸಚಿವರು ಪರಿಶೀಲಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande