ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು : ಜ.28 ರಂದು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು
ಕೊಪ್ಪಳ, 20 ಜನವರಿ (ಹಿ.ಸ.) : ಆ್ಯಂಕರ್ : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆಯಂತೆ ದದೇಗಲ್‍ನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿನ ವಿವಿಧ ವಿಭಾಗಗಳ ಅನುಪಯುಕ್ತ ವಸ್ತುಗಳನ್ನು ಜನವರಿ 28 ರಂದು ಬೆಳಿಗ್ಗೆ 11.30 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ನಿಯಮಾನುಸಾರ
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು : ಜ.28 ರಂದು ಅನುಪಯುಕ್ತ ವಸ್ತುಗಳ ಬಹಿರಂಗ ಹರಾಜು


ಕೊಪ್ಪಳ, 20 ಜನವರಿ (ಹಿ.ಸ.) :

ಆ್ಯಂಕರ್ : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆಯಂತೆ ದದೇಗಲ್‍ನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿನ ವಿವಿಧ ವಿಭಾಗಗಳ ಅನುಪಯುಕ್ತ ವಸ್ತುಗಳನ್ನು ಜನವರಿ 28 ರಂದು ಬೆಳಿಗ್ಗೆ 11.30 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ನಿಯಮಾನುಸಾರ ವಿಲೇ ಮಾಡಲಾಗುವುದು.

ಸಂಸ್ಥೆಯ ವಿವಿಧ ವಿಭಾಗಗಳ ಲ್ಯಾಬ್ ಉಪಕರಣಗಳು, ಕಂಪ್ಯೂಟರ್‍ಗಳು, ಗ್ರಂಥಾಲಯ ಪುಸ್ತಕಗಳು, ಬ್ಲೂ ಬುಕ್‍ಗಳು ಹಾಗೂ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ನಿಯಮಾನುಸಾರ ವಿಲೇ ಮಾಡಲಾಗುವುದು. ಅನುಪಯುಕ್ತ ವಸ್ತುಗಳನ್ನು ಸಂಸ್ಥೆಯ ಆವರಣದಲ್ಲಿ ಶೇಖರಿಸಿಡಲಾಗಿದ್ದು, ಆಸಕ್ತ ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕಚೇರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಜ.28 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯುವ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಮುಕ್ತವಾಗಿ ಭಾಗವಹಿಸಿ ಹರಾಜಿನಲ್ಲಿ ಸರ್ಕಾರವು ನಿಗದಿಪಡಿಸಿರುವ ಮೊತ್ತಕ್ಕಿಂತ ಅತೀ ಹೆಚ್ಚಿನ ಬೆಲೆಯನ್ನು ಕೂಗಿದ ಬಿಡ್‍ದಾರರು ತಕ್ಷಣವೇ ಹಣ ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಒಂದು ವಾರದ ಒಳಗಾಗಿ ವಿಲೇವಾರಿ ಮಾಡಿದ ವಸ್ತುಗಳನ್ನು ಸಾಗಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಹಾಗೂ ಕಚೇರಿ ಅಧೀಕ್ಷಕರನ್ನು ಸಂಪರ್ಕಿಸಬಹುದು ಎಂದು ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ತಿಳಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande