
ವಿಜಯಪುರ, 20 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾದ ಕೆ. ಡಿ ಗ್ರಾಮ ಪಂಚಾಯತ್ ಅವ್ಯವಹಾರ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಅಪನಾ ದೇಶ, ಅಪನಾ ಗ್ರಾಮ ಹಾಗೂ ಸಮಸ್ತ ರೈತರು ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿ, ಇಂದು ಸಂಜೆ ಒಳಗಾಗಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತ 2020 ರಿಂದ 25ನೇ ಸಾಲಿನ ಆಯ ಮತ್ತು ವ್ಯಯ ಪಟ್ಟಿಯನ್ನು ಸಂಪೂರ್ಣವಾಗಿ ನೀಡಬೇಕು ಹಾಗೂ 7ಕೋಟಿಗೂ ಅಧಿಕ ಹಣ ಗೋಲ್ಮಾಲ್ ಆಗಿದೆ ಎಂಭ ಆರೋಪ ಇದೆ, ಕೂಡಲೇ ಎಲ್ಲಾ ಮಾಹಿತಿ ನೀಡಬೇಕು ಎಂದರು.
ಅಪನಾ ದೇಶ ಅಪನಾ ಗ್ರಾಮ ಸಂಘಟನೆಯ ಜಿಲ್ಲಾಧ್ಯಕ್ಷರಾದ ರವೀಂದ್ರ ಬೆಳ್ಳಿ ಅವರು ಮಾತನಾಡುತ್ತಾ ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿದಿಗಳ ಕೆಲಸ ಬಹಳ ದೊಡ್ಡದು ಗ್ರಾಮಗಳು ರಾಮರಾಜ್ಯ ನಿರ್ಮಾಣವಾಗಬೇಕಾದರೆ ಹಂತ ಹಂತವಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು
ರೈತ ಮುಖಂಡರಾದ ಎಸ್. ಟಿ. ಪಾಟೀಲ್ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ ಗ್ರಾಮದ ಪ್ರತಿಯೊಬ್ಬರ ಸಮ್ಮುಖದಲ್ಲಿ ಗ್ರಾಮ ಸಭೆ ಮಾಡಿ ಗ್ರಾಮದ ಅಭಿವೃದ್ಧಿಗಾಗಿ ಪಕ್ಷತೀತವಾಗಿ, ಜಾತ್ಯತೀತವಾಗಿ ಹಾಗೂ ಪಾರದರ್ಶಕ ವಾಗಿ ಕೆಲಸ ಮಾಡಬೇಕು ಎಂದರು.
ಈ ವೇಳೆ ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಭಿ. ಎಸ್ ಕನ್ನೂರ ಅವರು ಪಿ. ಡಿ. ಓ ಸುರೇಶ ಲೋಣಿ ಅವರನ್ನು ತರಾಟೆಗೆ ತೆಗೆದುಕೊಂಡು ಕೇಳಿರುವ ಮಾಹಿತಿ ನ್ಯಾಯ ಸಮ್ಮತವಾಗಿದೆ, ಅವರಿಗೆ ಪಾರದರ್ಶಕವಾಗಿ 3 ದಿನಗಳಲ್ಲಿ ಕೊಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಿ ಎಂದರು.
ಈ ವೇಳೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಹೋರಾಟ ಸಮಿತಿಯ ಸದಸ್ಯರೂ ಹಾಗೂ ನೆರೆಯ ಮಿರಗಿ ಗ್ರಾಮದ ಸಿದ್ದರಾಮ ಎಸ್. ಹಳ್ಳೂರ ಅವರಿಗೆ ಹೋರಾಟ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಶಿವಾನಂದ ಶಿವಾಚಾರ್ಯ, ಬಿ. ಕೆ. ಪಾಟೀಲ್, ಸುನೀಲ ನಾರಾಯಣಕರ, ಸಿದ್ದರಾಮ ಹಳ್ಳೂರ, ರಫಿಕ ವಾಲಿಕಾರ, ಕನ್ನಪ್ಪ ನಾದ, ಸಾಬ್ ಮುಲ್ಲಾ, ಶರಭಯ್ಯ ಹಿರೇಮಠ, ರಾಯಪ್ಪ ಗಡೆಕಾರ, ಕನ್ನಪ್ಪ ತೇಲಿ, ಶಿವಣ್ಣ ಗುಂಜಟ್ಟಿ, ಸಾಹೇಬಗೌಡ ಪಾಟೀಲ್, ಮಲ್ಲಪ್ಪ ಒಡೆಯರ, ವಿಠೋಭ ಕಣದಳ, ಶಂಕ್ರಪ್ಪ ಜಿದ್ದಿಮನಿ , ಅಸಿಫ್ ಗೊನ್ನಾಳಗಿ, ಭೀಮಶಾ ತೇಲಿ, ಸೇರಿದಂತೆ ನೂರಾರು ರೈತರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande