
ಬಳ್ಳಾರಿ, 20 ಜನವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವತಿಯಿಂದ 2026-27 ರಿಂದ 2028-29 ನೇ ಸಾಲಿಗೆ ಸಹಕಾರ ಸಂಘಗಳ ಗೌರವ ಮಧ್ಯಸ್ಥದಾರರನ್ನು ನೇಮಿಸುವ ಸಂಬಂಧ ನವೀಕರಣ ಹಾಗೂ ಹೊಸದಾಗಿ ಗೌರವ ಮಧ್ಯಸ್ಥರಾಗ ಬಯಸುವ ಜಿಲ್ಲೆಯ ಆಸಕ್ತ ವಕೀಲರಿಂದ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್