
ಕೋಲಾರ, ಜನವರಿ೧೯ (ಹಿ.ಸ.) :
ಆ್ಯಂಕರ್ : ಕಳೆದ ೧೫ ವರ್ಷಗಳಿಂದ ನನ್ನನ್ನು ಕ್ಷೇತ್ರದಲ್ಲಿ ಬೆಳೆಸುತ್ತಿರುವವರು ಯಾವುದೇ ಕಾರಣಕ್ಕೂ ತಲೆ ತಗ್ಗಿಸುವ ಕೆಲಸವನ್ನು ಮಾಡಿಲ್ಲ. ತಲೆ ಎತ್ತಿ ನಡೆಯುವಂತೆ ನಡೆದುಕೊಂಡಿದ್ದೇನೆ ನೀವು ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.
ಕೆಜಿಎಫ್ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ೬೧೪ ನೇ ವೇಮನ ಜಯಂತಿ ಹಿನ್ನಲೆ ವೇಮನರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ನೆರೆದಿದ್ದ ರೆಡ್ಡಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ವೇಮನರು ಕೇವಲ ಕವಿ ತತ್ವರಲ್ಲ ಅವರು ಸಮಾಜದ ಅಂತರಾಳವನ್ನು ತಟ್ಟಿ ಎಚ್ಚರಿಸಿದ ಯೋಗಿ ಸುಳ್ಳು ಮೂಢನಂಬಿಕೆ ಅನ್ಯಾಯಗಳ ವಿರುದ್ಧ ನೇರವಾಗಿ ಮಾತನಾಡಿದ ಮಹಾನುಭಾವರು ಎಂದು ಹೇಳಿದರು.
ವೇಮನರ ಪ್ರತಿಯೊಂದು ನುಡಿ ನಮ್ಮ ಜೀವನಕ್ಕೆ ದಾರಿ ದೀಪದಂತೆ ಪ್ರಕಾಶಿಸುತ್ತದೆ ಮಾನವೀಯ ಮೌಲ್ಯಗಳನ್ನು ಆತ್ಮಗೌರವ ಸಮಾನತೆ ಮತ್ತು ಸಮಾಜಮುಖಿ ಚಿಂತನೆಗಳು ಅವರ ಪದ್ಯಗಳಲ್ಲಿ ಸಹಜವಾಗಿ ಹರಿದು ಬರುತ್ತದೆ ಅಂತಹ ಮಹಾನ್ ಚಿಂತಕರ ಜಯಂತಿಯನ್ನು ಆಚರಿಸುತ್ತಿರುವುದು ಅದರಲ್ಲಿ ನಾವು ಸಹ ಭಾಗಿಯಾಗಿರುವುದು ನನ್ನ ಸೌಭಾಗ್ಯವೆಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅರ್ಥ ಮತ್ತು ವೈಭವ ಬರುವುದು ಜನರು ಬಂದಾಗ ಮೆರಗು ಬರುತ್ತದೆ ದೇವಸ್ಥಾನಗಳನ್ನು ತುಂಬ ಚೆನ್ನಾಗಿ ನಿರ್ಮಾಣ ಮಾಡಿದರು ಭಕ್ತರು ದೇವಾಲಯಕ್ಕೆ ಬರದಿದ್ದರೆ ದೇವಾಲಯಕ್ಕೆ ವೈಭವ ಮೂಡುವುದಿಲ್ಲ ಆದೇ ರೀತಿ ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿರುವುದರಿಂದ ಕಾರ್ಯಕ್ರಮಕ್ಕೆ ಮಹತ್ವ ಬಂದಿದೆ ಕೋಲಾರ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ನಡೆಯುವ ರೆಡ್ಡಿ ಸಮುದಾಯದ ವೇಮನ ಜಯಂತಿ ಬೇರೆಯದ್ದೇ ಇದ್ದರೆ ನಮ್ಮ ತಾಲ್ಲೂಕಿನಲ್ಲಿ ವೇಮನ ಜಯಂತಿ ಮತ್ತೋಂದು ರೀತಿಯಲ್ಲಿ ಮೂಡುವುದು ವಿಶೇಷವಾದುದ್ದು ನಿಮ್ಮ ಪ್ರತಿ ವಿಶ್ವಾಸದಿಂದ ಕಳೆದ ೧೫ ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ಸಹ ನೀವು ತಲೆ ಬಗ್ಗಿಸಿ ನಡೆಯುವಂತಹ ಕೆಲಸ ಮಾಡುವುದಿಲ್ಲ ಮಾಡಿಲ್ಲ ನನ್ನ ಕೈಲಾದ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದರು.
ಕೆಜಿಎಫ್ ತಾಲ್ಲೂಕು ರೆಡ್ಡಿ ಸಮುದಾಯದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಕಳೆದ ೯೦ ವರ್ಷಗಳಿಂದ ನಮ್ಮ ಸಮುದಾಯದವರು ವೇಮನ ಮಲ್ಲಮ್ಮ ರವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ರಾಜ್ಯ ಸರ್ಕಾರವು ವೇಮನ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡಬೇಕು ಎಂದು ಆದೇಶ ನೀಡಿರುವ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ಕಡಿಮೆ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿದ್ದರು. ಆದರೆ ಈ ವರ್ಷ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸಮುದಾಯವು ಸಂಘಟನೆಯಲ್ಲಿ ಹಿಂದುಳಿದಿದ್ದೇವೆ. ಹಿಂದೆ ಕೇವಲ ೭ ಲಕ್ಷ ಜನಸಂಖ್ಯೆ ಇದೆ ಹೇಳಲಾಗುತ್ತಿತ್ತು. ಆದರೆ ಈ ಭಾರಿಯ ಸಮುದಾಯವ ಸಮೀಕ್ಷೆಯಲ್ಲಿ ೫೦ ರಿಂದ ೬೦ ಲಕ್ಷ ಜನಸಂಖ್ಯೆ ಇರುವುದು ಕಂಡು ಬಂದಿರುವುದು ಸಂತೋಷಕಾರಿ ಸಂಗತಿ. ಇನ್ನು ಹೊರಗಿ ಉಳಿದಿರುವವರು ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಬೆಳವಣಿಗೆಗೆ ಶಾಸಕರು ಸಹಕಾರ ನೀಡಬೇಕು ಎಂದು ಹೇಳಿದರು.
ವೇಮನ ಜಯಂತಿ ಕಾರ್ಯಕ್ರಮದಲ್ಲಿ ರೆಡ್ಡಿ ಸಮುದಾಯದ ಹಿರಿಯ ನಾಯಕರಾದ ಮಾಜಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೆಂಕಟಕೃಷ್ಣರೆಡ್ಡಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ(ಅಪ್ಪಿ) ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾದಾಕೃಷ್ಣರೆಡ್ಡಿ, ರಾಮಕೃಷ್ಣರೆಡ್ಡಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ವಿಜಯರಾಘವರೆಡ್ಡಿ ,ಜಯರಾಮರೆಡ್ಡಿ ,ಬಾಬುರೆಡ್ಡಿ ಪ್ರಸಾದರೆಡ್ಡಿ ಪುರುಷೋತ್ತಮರೆಡ್ಡಿ ಹಾಗೂ ತಹಶೀಲ್ದಾರ್ ಭರತ್, ಇಒ ವೆಂಕಟೇಶಪ್ಪ ಹಾಗೂ ಇತರರು ಹಾಜರಿದ್ದರು .
ಚಿತ್ರ ; ಕೆಜಿಎಫ್ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ೬೧೪ ನೇ ವೇಮನ ಜಯಂತಿ ಹಿನ್ನಲೆ ವೇಮನರ ಭಾವಚಿತ್ರಕ್ಕೆ ಮಾರ್ಲಾಪಣೆ ಶಾಸಕಿ ರೂಪಕಲಾ ಶಶಿಧರ್ ಮಾಡಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್