ಅಂಧರ ಸ್ವಾವಲಂಬಿ ಬದುಕಿಗೆ ಹೊಸ ದಾರಿ : ಸಚಿವ ದಿನೇಶ್ ಗುಂಡೂರಾವ್
ಮೈಸೂರು, 19 ಜನವರಿ (ಹಿ.ಸ.) : ಆ್ಯಂಕರ್ : ದೃಷ್ಟಿಹೀನ ವ್ಯಕ್ತಿಗಳು ಸ್ವಾವಲಂಬಿಯಾಗಿ ಬದುಕಲು QR ಕೋಡ್ ಆಧಾರಿತ ಔಷಧಿ ಮಾಹಿತಿ ತಂತ್ರಜ್ಞಾನ ಹೊಸ ದಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜಪಾ
Gundurao


ಮೈಸೂರು, 19 ಜನವರಿ (ಹಿ.ಸ.) :

ಆ್ಯಂಕರ್ : ದೃಷ್ಟಿಹೀನ ವ್ಯಕ್ತಿಗಳು ಸ್ವಾವಲಂಬಿಯಾಗಿ ಬದುಕಲು QR ಕೋಡ್ ಆಧಾರಿತ ಔಷಧಿ ಮಾಹಿತಿ ತಂತ್ರಜ್ಞಾನ ಹೊಸ ದಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜಪಾನ್–ಭಾರತ ಸಹಯೋಗದಡಿ, ಜಿಕಾ ಬೆಂಬಲಿತ IMPACT-VIP ಯೋಜನೆಯ ಅಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಅಂಧರ ಸಮಸ್ಯೆಗಳನ್ನು ಅವರಿಗೆ ಮಾತ್ರ ಸರಿಯಾಗಿ ಅರ್ಥವಾಗುತ್ತದೆ. ಸಾಮಾನ್ಯ ಜನ ಬಳಕೆ ಮಾಡುತ್ತಿರುವ QR ಕೋಡ್ ತಂತ್ರಜ್ಞಾನವನ್ನು ಅಂಧರ ಅಗತ್ಯಗಳಿಗೆ ಹೊಂದಿಸುವುದು ಸ್ವಾಗತಾರ್ಹ ಬೆಳವಣಿಗೆ” ಎಂದರು.

ಔಷಧಿ ಪ್ಯಾಕೆಟ್‌ಗಳ ಮೇಲೆ ಅಳವಡಿಸಿರುವ QR ಕೋಡ್ ಮೂಲಕ ಔಷಧದ ಹೆಸರು, ಬಳಕೆ ವಿಧಾನ, ಪ್ರಮಾಣ ಹಾಗೂ ಎಚ್ಚರಿಕೆ ಮಾಹಿತಿಯನ್ನು ಧ್ವನಿಯ ರೂಪದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ದೃಷ್ಟಿಹೀನರು ದಿನನಿತ್ಯದಲ್ಲಿ ಔಷಧಿಗಳನ್ನು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಬಳಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಭಾಷಾ ಅಡಚಣೆ ಇರುವವರಿಗೆಲೂ ಈ ತಂತ್ರಜ್ಞಾನ ವರದಾನವಾಗಲಿದೆ ಎಂದರು.

ಫಾರ್ಮಸಿಸ್ಟ್‌ಗಳಾಗಿ ಕೆಲಸ ಮಾಡುವ ದೃಷ್ಟಿಹೀನರು ಔಷಧಿ ಲೇಬಲ್, ಸೂಚನೆಗಳು ಹಾಗೂ ಪ್ಯಾಕೇಜಿಂಗ್‌ನ ಕಾರಣದಿಂದ ಎದುರಿಸುವ ಸಮಸ್ಯೆಗಳಿಗೆ ಈ ತಂತ್ರಜ್ಞಾನ ಪರಿಹಾರ ನೀಡಬಲ್ಲದು. ಐದು ರಾಜ್ಯಗಳಲ್ಲಿ ಸಂಗ್ರಹಿಸಿರುವ ಸಂಶೋಧನಾ ಮಾಹಿತಿಯು, ತಂತ್ರಜ್ಞಾನ ಬಳಕೆಯಿಂದ ಔಷಧಿ ಸುರಕ್ಷತೆ ಹಾಗೂ ಅಂಧರ ಸ್ವಾವಲಂಬನೆಯನ್ನು ಸುಧಾರಿಸಬಹುದೆಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅಂಧರ ಅನುಭವಗಳು ಹಾಗೂ ಸಂಶೋಧನಾ ಫಲಿತಾಂಶಗಳನ್ನು ಪರಿಗಣಿಸಿ, ಈ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಅಳವಡಿಸುವ ಕುರಿತು ಚಿಂತನೆ ನಡೆಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಪಾನ್‌ನ ಎಕ್ಸ್‌ಪೋರ್ಟ್ ಜಪಾನ್ ಇಂಕ್ ಮತ್ತು ಡೆಲಾಯಿಟ್ ತೊಮಾತ್ಸು ಫೈನಾನ್ಶಿಯಲ್ ಅಡ್ವೈಸರಿ ಪ್ರತಿನಿಧಿಗಳು, ಅಂಧರಿಗೆ ಅನುಕೂಲವಾಗುವ ಮಾಹಿತಿ ತಂತ್ರಜ್ಞಾನಗಳು ಔಷಧಿ ನಿರ್ವಹಣೆಯನ್ನು ಹೇಗೆ ಸುಲಭಗೊಳಿಸಬಲ್ಲವು ಎಂಬುದನ್ನು ವಿವರಿಸಿದರು. ಜೆಎಸ್‌ಎಸ್ ಸಂಸ್ಥೆಯ ಸಂಶೋಧಕರು ಹಾಗೂ ದೃಷ್ಟಿಹೀನರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande