
ಕೋಲಾರ, ಜನವರಿ೧೯ (ಹಿ.ಸ.) :
ಆ್ಯಂಕರ್ : ವೇಮನ ಯೋಗಿಶ್ವರರ ಜಯಂತಿಯ ಭವ್ಯ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ಡೂಮ್ ಲೈಟ್ ಸರ್ಕಲ್ ನಗರ ಪೊಲೀಸ್ ಠಾಣೆ ಎಂಜಿ ರೋಡ್ ಪಾರ್ಕ್ ಸರ್ಕಲ್ ಹಾದು ಶ್ರೀ ಚನ್ನಯ್ಯ ರಂಗ ಮಂದಿರದವರೆಗೆ ಸಾಗಿ ಬಂತು.
ಶ್ರೀ ವೇಮನ ಭಗವಾನ್ ರವರ ಜನ್ಮದಿನದ ಪ್ರಯುಕ್ತ ಪ್ರಬೋಧ ಸೇವಾ ಸಮಿತಿ ಮತ್ತು ಕೋಲಾರ ರೆಡ್ಡಿ ಸಂಘ ರವರ ಸಂಯುಕ್ತ ಆಶ್ರಯದಲ್ಲಿ ವೇಮನ ಜಯಂತಿ ಮಹೋತ್ಸವವನ್ನು ಹಮ್ಮಿಕೊಂಡಿದ್ದು, ಮೆರವಣಿಗೆಯಲ್ಲಿ ಶ್ರೀ ವೇಮನ ಭಗವಾನ್ ರವರ ಪ್ರತಿಮೆಯನ್ನ ಭಕ್ತರು ತಮ್ಮ ಭುಜದ ಮೇಲೆ ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಸಾಗಿತು. ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ವೇಮನ ಜಯಂತಿಯ ಕುರಿತು ಮಾತನಾಡಿದರು.
ಸಮಿತಿ ಮುಖಂಡರು ಮಾತನಾಡಿ, ವೇಮನನ ಆಧ್ಯಾತ್ಮಿಕ ಪದ್ಯಗಳ ರಹಸ್ಯವನ್ನು ತಿಳಿಸಲಾಯಿತು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಭಕ್ತರಿಗೆ ಎಲ್ಲರಿಗೂ ವೇಮನ ಸಾಹಿತ್ಯದ ಪುಸ್ತಕವನ್ನು ವಿತರಿಸಲಾಯಿತು ಹಾಗೂ ಗಣ್ಯರಿಗೆ ವೇಮನ ಭಗವಾನ್ ರವರ ಚಿತ್ರಪಟವನ್ನು ಸಹಿತ ಸೇವಾ ರೂಪದಲ್ಲಿ ವಿತರಿಸಲಾಯಿತು.
ವೇಮನ ಯೋಗಿ ಮಾತ್ರವಲ್ಲ ಈ ಭೂಮಿಯ ಮೇಲೆ ಪದ್ಯ ರೂಪದಲ್ಲಿ ಆತ್ಮಜ್ಞಾನವನ್ನು ಬೋಧಿಸುವುದಕ್ಕೆ ಭಗವಂತನಾಗಿ ಜನಿಸಿದವನು ಎಂದು ಶ್ರೀ ಶ್ರೀಶ್ರೀ ಆಚಾರ್ಯ ಪ್ರಬೋದಾನಂದ ಯೋಗೇಶ್ವರ ಮೂಲಕ ಈ ಲೋಕಕ್ಕೆ ತಿಳಿದಿದೆ ವೇಮನನ್ನು ತನ್ನ ಪದ್ಯಗಳಲ್ಲಿ ಲೋಕನೀತಿಯನ್ನು ಹೇಳದೆ ಸರ್ವ ಮಾನವರಿಗೂ ಅನ್ವಯಿಸುವ ಆಧ್ಯಾತ್ಮ ರಹಸ್ಯವನ್ನು ಪದ್ಯ ರೂಪದಲ್ಲಿ ತಿಳಿಸಿದ್ದಾರೆ ಕೊನೆಯಲ್ಲಿ ರೆಡ್ಡಿ ಕುಲಸ್ತರನ್ನು ಕರೆದು ಈ ಜ್ಞಾನವನ್ನ ತನ್ನ ಹೆಸರಿನ ಮೇಲೆ ಊರೂರು ತಿರುಗಿ ಜ್ಞಾನ ಪ್ರಚಾರ ಮಾಡಿದೆ ಎಂದು ತಿಳಿಸಿ ಹೋಗಿದ್ದಾರೆ ಎಂದು ಸಾರಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರು ಕೋಲಾರ ರೆಡ್ಡಿ ಸಂಘ ಕುಲಬಾಂಧವರು ಹಾಗೂ ಪ್ರಬೋಧ ಸೇವಾ ಸಮಿತಿ ಕೋಲಾರ ಬೆಂಗಳೂರು ಕುಪ್ಪಂ ಬಂಗಾರ ಪಾಳ್ಯ ಚಿತ್ತೂರು ಪ್ರಾಂತ್ಯದ ಪ್ರಬೋದಾ ಸೇವಾ ಸಮಿತಿಯ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು.
ಚಿತ್ರ : ಕೋಲಾರದಲ್ಲಿ ವೇಮನ ಯೋಗಿಶ್ವರರ ಜಯಂತಿಯ ಭವ್ಯ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ಡೂಮ್ ಲೈಟ್ ಸರ್ಕಲ್ ನಗರ ಪೊಲೀಸ್ ಠಾಣೆ ಎಂಜಿ ರೋಡ್ ಪಾರ್ಕ್ ಸರ್ಕಲ್ ಹಾದು ಶ್ರೀ ಚನ್ನಯ್ಯ ರಂಗ ಮಂದಿರದವರೆಗೆ ಸಾಗಿ ಬಂತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್