ರೆಡ್ಡಿ ಜನಾಂಗ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಸದ ಎಂ.ಮಲ್ಲೇಶ್ ಬಾಬು ಸಲಹೆ
ರೆಡ್ಡಿ ಜನಾಂಗ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಸದ ಎಂ.ಮಲ್ಲೇಶ್ ಬಾಬು ಸಲಹೆ
ಕೋಲಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ವೇಮನ ಜಯಂತಿಯನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು.


ಕೋಲಾರ ೧೯ ಜನವರಿ (ಹಿ.ಸ) :

ಆ್ಯಂಕರ್ : ಪ್ರತಿ ವರ್ಷ ಕೆ.ಸಿ ರೆಡ್ಡಿ ಪುತ್ಥಳಿ ಬಗ್ಗೆ ಹೇಳತ್ತೀರ. ಜಯಂತಿ ಬಂದಾಗ ಅಷ್ಟೇ ನೆನಪು ಆಗುತ್ತದೆ. ಕೆ.ಸಿ ರೆಡ್ಡಿ ರಾಜ್ಯದ ಮೊದಲ ಸಿಎಂ ಎಂಬುದು ನಮ್ಮ ಹೆಮ್ಮೆ. ಕೂಡಲೇ ಜಿಲ್ಲಾಧಿಕಾರಿಗೆ ಹೇಳಿ ಮಾಡಿಸುತ್ತೇವೆ. ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದಿದ್ದು ಕೈಗಾರಿಕೆಗಳನ್ನು ಪ್ರಾರಂಭ ಮಾಡಿ ಬೇರೆಯವರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಪಡೆದು ಪ್ರಾರಂಭ ಮಾಡಿ ಬೇರೆವರಿಗೆ ಅವಕಾಶ ಬೇಡ ನೀವುಗಳೇ ಮಾಡಿ ಕೈಗಾರಿಕೆ ಪ್ರಾರಂಭ ಮಾಡಿ ನಿಮ್ಮ ಬಳಿ ಹಣ, ಶಿಕ್ಷಣ ಎಲ್ಲವೂ ಇದೆ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಟಿ.ಚೆನ್ನಯ್ಯ ರಂಗಮ0ದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಸೋಮವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ರೆಡ್ಡಿ ಜನಾಂಗದ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಜಿಲ್ಲಾ ಕೇಂದ್ರದಲ್ಲಿ ಒಂದು ಎಕರೆ ಜಾಗವನ್ನು ಮಂಜೂರು ಮಾಡಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಅವರ ಪುತ್ಥಳಿ ನಿರ್ಮಾಣಕ್ಕೆ ಪಕ್ಷಾತೀತವಾಗಿ ಸಹಕರಿಸಲಾಗುತ್ತದೆ. ನಮ್ಮ ಆಲೋಚನೆಗಳಿಗೆ ಅನುಗುಣವಾಗಿ ಅಧಿಕಾರ ಸಿಕ್ಕಾಗ ಸಮಾಜದ ಮತ್ತು ಸಮುದಾಯಗಳ ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸುವಂತಾಗಬೇಕು. ವೇಮನ ಜಯಂತಿ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೋಗಬೇಕು. ಸಮಾಜದ ಮತ್ತು ಸಮುದಾಯದ ಸಮಸ್ಯೆಗಳು ಬಂದಾಗ ನಾವು ನಿಮ್ಮ ಜೊತೆಗೆ ಇರತ್ತೇವೆ ಎಂದರು.

ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ ನಾನು ಇತ್ತಿಚೆಗೆ ಜಿಲ್ಲೆಯ ಯಾವುದೇ ಕಾರ್ಯಕ್ರಮಕ್ಕೂ ಬರಲ್ಲ ಯಾಕೆಂದರೆ ಜಿಲ್ಲಾಡಳಿತವು ಕೆಲವರಿಗೆ ಸೀಮೀತಗೊಳಿಸಿದೆ ಆದರೂ ರೆಡ್ಡಿ ಜನಾಂಗ ನನ್ನ ಮೇಲೆ ಇಟ್ಟಿರುವ ವಿಶ್ವಾಸದಿಂದ ಇಷ್ಟು ಪಟ್ಟು ಬಂದಿದ್ದೇನೆ ಜೀವನದಲ್ಲಿ ಸಾಕು ಎಂದಾಗ ಯೋಗಿ ಆಗಬೇಕು ಎಂದು ಬಯಸುವ ಜನಾಂಗದಲ್ಲಿ ನೀವು ಹುಟ್ಟಿದ್ದು ಹೆಮ್ಮೆಯಾಗಿದೆ ರೆಡ್ಡಿ ಕುಟುಂಬಕ್ಕೆ ಗೌರವ ಘನತೆ ಇದೆ ಎಂದ ಅವರು ರಾಜಕೀಯ ಜೀವನ ಚಿಕ್ಕದ್ದು ಎಲ್ಲಾ ಕ್ಷೇತ್ರ ಸರಿ ಇದೆ ಆದರೆ ರಾಜಕೀಯ ಕ್ಷೇತ್ರ ಮಾತ್ರ ಒಲಸು ಆಗಿದೆ ಯಾರು ಈ ಕ್ಷೇತ್ರಕ್ಕೆ ಬರಬೇಡಿ ಬಂದರೆ ಮುಂದೆ ಕಷ್ಟ ಗ್ಯಾರಂಟಿ ಮೇ ೧೦ ರಂದು ಮುಳಬಾಗಿಲಿನಲ್ಲಿ ರೆಡ್ಡಿ ಭನನ ಕಟ್ಟಲು ಎರಡು ಎಕರೆ ಜಾಗ ಮಂಜೂರು ಮಾಡಿ ಅವತ್ತೆ ಗುದ್ದಲಿ ಪೂಜೆ ಮಾಡಲಾಗುತ್ತದೆ ಎಂದರು.

ರೆಡ್ಡಿ ಸಮುದಾಯದ ಜಿಲ್ಲಾಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ ಮಾತನಾಡಿ,ಜಿಲ್ಲೆಯಲ್ಲಿ ರೆಡ್ಡಿ ಜನಾಂಗ ಒಳಿತಿಗಾಗಿ ಕೆಸಿ ರೆಡ್ಡಿ ಪುತ್ಥಳಿ ಅನಾವರಣ ಮಾಡಬೇಕು ಪ್ರತಿ ತಾಲೂಕಿನಲ್ಲಿ ಸಮುದಾಯ ಭವನ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಜಾಗ ಕೊಡಿಸಬೇಕು ಸಮುದಾಯ ಬಂದಾಗ ಒಗ್ಗಟ್ಟಿನಿಂದ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ ಮೈತ್ರಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಸಮಾಜಸೇವಕ ಕಿರಣ್ ಕುಮಾರ್ ರೆಡ್ಡಿ, ಸಂಘದ ಗೌರವ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡರಾದ ಪ್ರಭಾಕರ್ ರೆಡ್ಡಿ, ಶಾಂತರಾಜು, ರವೀಂದ್ರರೆಡ್ಡಿ, ವೆಂಕಟಕೃಷ್ಣರೆಡ್ಡಿ, ರಾಘವೇಂದ್ರ ರೆಡ್ಡಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹಾಜರಿದ್ದರು.

ಚಿತ್ರ : ಕೋಲಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ವೇಮನ ಜಯಂತಿಯನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande