

ಬಳ್ಳಾರಿ, 19 ಜನವರಿ (ಹಿ.ಸ.) :
ಆ್ಯಂಕರ್: ದೇಶದ ಪ್ರತಿ ಮಗುವಿಗೂ ಉಚಿತವಾಗಿ ಶಿಕ್ಷಣ ಸಿಗಬೇಕು ಮತ್ತು ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಶಾಲೆಗಳು ಇರಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಘಟಕವು ಆಗ್ರಹಿಸಿದೆ.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಘಟಕದ ಆರ್. ಸೋಮಶೇಖರ ಗೌಡ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ಸರ್ಕಾರಿ ಶಿಕ್ಷಣ ಅಳಿವಿನ ಅಂಚಿನಲ್ಲಿದೆ. ಶಿಕ್ಷಣದ ವ್ಯಾಪಾರಿಕರಣ ದೇಶಾದ್ಯಂತ ಆವರಿಸಿದೆ. ದುಬಾರಿ ಶುಲ್ಕ, ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳು ಅನೇಕರನ್ನು ಕಾಡುತ್ತಿವೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ರಾಜ್ಯದಲ್ಲಿ ಈಗ ಜಾರಿಗೆ ತರುತ್ತಿರುವ ಮ್ಯಾಗ್ನೆಟ್ ಪದ್ಧತಿ ಅವೈಜ್ಞಾನಿಕ. ಈ ಎರೆಡೂ ಪದ್ಧತಿಗಳನ್ನು ಎರೆಡೂ ಸರ್ಕಾರಗಳು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕರ್ನಾಟಕ ಘಟಕವು ಜನವರಿ 24ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಜನ ಸಂಸತ್ತನ್ನು ಆಯೋಜಿಸಿದೆ. ಈ ಸಂಸತ್ತಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ 20 ಅಂಶಗಳ ಕುರಿತು ಚರ್ಚಿಸಿ ರಾಜ್ಯದ ಪ್ರತಿ ಮಗುವಿಗೆ ಎಂಥಹಾ ಶಿಕ್ಷಣ ನೀಡಬೇಕು ಎಂಬುದರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಸಂಚಾಲಕರಾದ ನಾಗರತ್ನ ಶಶಿಧರ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್