
ಕೋಲಾರ, ೧೯ ಜನವರಿ (ಹಿ.ಸ) :
ಆ್ಯಂಕರ್ : ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಎನ್. ಮುನಿರಾಜು ಅವಿರೋಧ ಆಯ್ಕೆಯಾಗಿರುವುದಾಗಿ ಸಮಿತಿಯ ರಾಜ್ಯಾಧ್ಯಕ್ಷ ಡಾ. ಶಿವಶಂಕರ್ ಪ್ರಕಟಿಸಿದರು.
ಕೋಲಾರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಿರುವುದಾಗಿ ತಿಳಿಸಿದ ಅವರು, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಹೋರಾಟವೇ ಪ್ರಮುಖವಾಗಿ ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ ವರ್ಗಗಳಲ್ಲಿರುವ ಎಲ್ಲಾ ಒಂದೇ ಸೂರಿನಡಿಯಲ್ಲಿ ನೌಕರರಿಗೆ ಕಾಪಾಡಲು ಇದೆ ವರ್ಷ ಮೇ ತಿಂಗಳಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಬೇಕೆಂದ ಅವರು ಈ ನಿಟ್ಟಿನಲ್ಲಿ ಸದಸ್ಯತ್ವ ಆಂದೋಲನದ ಜೊತೆಗೆ ಸಂಘಟಿತ ಹೋರಾಟ ಅಗತ್ಯ ಎಂದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಡಿ.ಎನ್ ಮುಕುಂದ ರವರು ಅಧ್ಯಕ್ಷ ಒಡಗೂಡಿ ಜಿಲ್ಲೆಯಾದ್ಯಂತ ಸಂಚರಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ತಾಲೂಕು ಸಂಘಟನೆಯನ್ನು ಪೂರ್ಣಪ್ರಮಾಣದಲ್ಲಿ ವಿಸ್ತರಣೆ ಮಾಡಬೇಕೆಂದು, ನೂತನ ಪದಾಧಿಕಾರಿಗಳ ನೇಮಕ ಆಯ್ಕೆಯನ್ನು ಜಿಲ್ಲಾ ಸಮಿತಿ ಪ್ರಾಮಾಣಿಕವಾಗಿ ಮಾಡಿ ಬಲಿಷ್ಠ ಸಂಘಟನೆ ನಿರ್ಮಿಸಬೇಕೆಂದು ಸೂಚಿಸಿದರು. ಇದಕ್ಕಾಗಿ ಸದಸ್ಯತ್ವ ಆಂದೋಲನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಡು ಸಂಘಟಿತ ಹೋರಾಟ ಮಾಡಬೇಕೆಂದು ಕೋರಿದರು.
ನೂತನ ಅಧ್ಯಕ್ಷರಾದ ಎನ್ ಮುನಿರಾಜು ಮಾತನಾಡಿ ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಯನ್ನು ನೀಡಿದ್ದೀರಿ ಕಾಯ ವಾಚ ಮನಸ್ಸ ಪ್ರಾಮಾಣಿಕವಾಗಿ ದುಡಿದು ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ವಿಜಯ್ ಕುಮಾರ್ ಉಪಾದ್ಯಕ್ಷರಾದ ಆರ್.ಮೋಹನ್ ಕೆ.ಜಿ.ಎಫ್ ತಾಲ್ಲೂಕು ಅಧ್ಯಕ್ಷರಾದ ಅಶ್ವತ್ಥ, ಶ್ರೀನಿವಾಸಪುರ ಮುನಿವೆಂಕಟಪ್ಪ, ಬಂಗಾರಪೇಟೆ ನಾಗರಾಜ, ಮುಳಬಾಗಲು ಬಿ.ಎನ್.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಅಶ್ವಿನ್ ಭಾಗವಹಿಸಿದ್ದರು.
ಚಿತ್ರ : ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಪದಾಧಿಕಾರಿಗಳ ಸಭೆ ಕೋಲಾರದಲ್ಲಿ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್