ಪಾರ್ವತಿ ಗಿರಿ ಜನ್ಮ ಶತಮಾನೋತ್ಸವ ; ಪ್ರಧಾನಿ ಮೋದಿ ಗೌರವ ನಮನ
ನವದೆಹಲಿ, 19 ಜನವರಿ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಸಮಾಜ ಸುಧಾರಕಿಯಾಗಿದ್ದ ಪಾರ್ವತಿ ಗಿರಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅವರಿಗೆ ಗೌರವ ನಮನ ಸಲ್ಲಿಸಿದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಪಾರ್ವತಿ ಗಿರಿ ಅವರ ಕೊಡುಗೆ ಅಮೂಲ್
Pm


ನವದೆಹಲಿ, 19 ಜನವರಿ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಸಮಾಜ ಸುಧಾರಕಿಯಾಗಿದ್ದ ಪಾರ್ವತಿ ಗಿರಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅವರಿಗೆ ಗೌರವ ನಮನ ಸಲ್ಲಿಸಿದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಪಾರ್ವತಿ ಗಿರಿ ಅವರ ಕೊಡುಗೆ ಅಮೂಲ್ಯ ಮತ್ತು ಸ್ಮರಣೀಯ ಎಂದು ಪ್ರಧಾನಿ ಶ್ಲಾಘಿಸಿದರು.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ, ವಸಾಹತುಶಾಹಿ ಆಡಳಿತವನ್ನು ಅಂತ್ಯಗೊಳಿಸುವ ಸ್ವಾತಂತ್ರ್ಯ ಚಳವಳಿಯಲ್ಲಿ ಪಾರ್ವತಿ ಗಿರಿ ಅವರು ವಹಿಸಿದ್ದ ಪಾತ್ರ ಅತ್ಯಂತ ಶ್ಲಾಘನೀಯವಾಗಿತ್ತು ಎಂದು ತಿಳಿಸಿದ್ದಾರೆ. ಜೊತೆಗೆ ಆರೋಗ್ಯ ಸೇವೆ, ಮಹಿಳಾ ಸಬಲೀಕರಣ, ಸಮುದಾಯ ಸೇವೆ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ಅವರು ತೋರಿದ ನಿಷ್ಠೆ ಮತ್ತು ಸೇವಾಭಾವ ಗಮನಾರ್ಹವಾಗಿದೆ ಎಂದು ಅವರು ಪ್ರಶಂಸಿಸಿದರು.

ಇದೇ ವೇಳೆ, ಡಿಸೆಂಬರ್ 28 ರಂದು ಪ್ರಸಾರವಾದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿಯೂ ಪ್ರಧಾನಿ ಮೋದಿ ಪಾರ್ವತಿ ಗಿರಿ ಅವರ ಸೇವೆಯನ್ನು ಸ್ಮರಿಸಿದ್ದರು. ಮುಂದಿನ ತಿಂಗಳಲ್ಲಿ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ಕೊಡುಗೆ ನೀಡಿದ ಹಾಗೂ ಬಡವರು–ಹಿಂದುಳಿದವರ ಉನ್ನತಿಗಾಗಿ ಜೀವನವನ್ನೇ ಸಮರ್ಪಿಸಿದ ಪಾರ್ವತಿ ಗಿರಿ ಅವರ ಜನ್ಮ ಶತಮಾನೋತ್ಸವವನ್ನು ದೇಶವ್ಯಾಪಿಯಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದ್ದರು.

ಗಮನಾರ್ಹವಾಗಿ, ಪಾರ್ವತಿ ಗಿರಿ (1926–1995) ಅವರು ಒಡಿಶಾದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಸಮಾಜ ಸೇವಕಿಯಾಗಿದ್ದು, ಮಾನವೀಯ ಸೇವೆಯ ಕಾರಣಕ್ಕೆ ಅವರನ್ನು ‘ಪಶ್ಚಿಮ ಒಡಿಶಾದ ಮದರ್ ತೆರೇಸಾ’ ಎಂದು ಕರೆಯಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande