ಯುವ ಪೀಳಿಗೆಗೆ ಕಠಿಣ ಪರಿಶ್ರಮ ಮತ್ತು ಕ್ರಿಯಾಶೀಲತೆಯ ಸಂದೇಶ ನೀಡಿದ ಪ್ರಧಾನಿ ಮೋದಿ
ನವದೆಹಲಿ, 19 ಜನವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ನಾಗರಿಕರಿಗೆ, ವಿಶೇಷವಾಗಿ ಯುವ ಪೀಳಿಗೆಗೆ, ಕಠಿಣ ಪರಿಶ್ರಮ, ಕ್ರಿಯಾಶೀಲತೆ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಸಾರುವ ಸ್ಪೂರ್ತಿದಾಯಕ ಸಂಸ್ಕೃತ ನಾಣ್ಣುಡಿಯನ್ನು ಹಂಚಿಕೊಂಡಿದ್ದಾರೆ.
Pm


ನವದೆಹಲಿ, 19 ಜನವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ನಾಗರಿಕರಿಗೆ, ವಿಶೇಷವಾಗಿ ಯುವ ಪೀಳಿಗೆಗೆ, ಕಠಿಣ ಪರಿಶ್ರಮ, ಕ್ರಿಯಾಶೀಲತೆ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಮೂಲ ಎಂಬ ಸಂದೇಶವನ್ನು ಸಾರುವ ಸ್ಪೂರ್ತಿದಾಯಕ ಸಂಸ್ಕೃತ ನಾಣ್ಣುಡಿಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಅವರು ಈ ನಾಣ್ಣುಡಿಯನ್ನು ಹಂಚಿಕೊಂಡಿದ್ದು, ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಸಾಧಿಸಲು ಉದ್ಯಮಶೀಲತೆ ಹಾಗೂ ಶ್ರಮ ಅನಿವಾರ್ಯ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಾರೆ.

ಈ ನಾಣ್ಣುಡಿಯ ಆಶಯದಂತೆ,

ಕ್ರಿಯಾಶೀಲತೆಯಿಲ್ಲದೆ ಇರುವವರಿಗೆ ವಿನಾಶ ಅನಿವಾರ್ಯವಾಗಿದ್ದು, ಏಳುವಿಕೆ ಮತ್ತು ನಿರಂತರ ಪ್ರಯತ್ನದಿಂದ ಮಾತ್ರ ಫಲ ಮತ್ತು ಸಂಪತ್ತು ಲಭಿಸುತ್ತದೆ. ಉದ್ಯಮಶೀಲತೆಯ ಕೊರತೆಯಿಂದ ವ್ಯಕ್ತಿಯು ಭವಿಷ್ಯದ ಅವಕಾಶಗಳನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ, ಈಗಾಗಲೇ ಗಳಿಸಿದ ಸಾಧನೆಗಳನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಧಾನಿ ಮೋದಿ ಅವರು ಸಂದೇಶದ ಮೂಲಕ ಎಚ್ಚರಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ, ನಿರಂತರ ಪರಿಶ್ರಮ, ಉನ್ನತಿಗೆ ಪ್ರಯತ್ನ ಮತ್ತು ಕ್ರಿಯಾತ್ಮಕ ಚಿಂತನೆಗಳು ಯಶಸ್ಸು, ಫಲಪ್ರಾಪ್ತಿ ಮತ್ತು ಆರ್ಥಿಕ ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿಯವರ ಈ ಸಂದೇಶವು ವಿಶೇಷವಾಗಿ ಯುವಕರು, ಕಾರ್ಮಿಕರು, ಉದ್ಯಮಿಗಳು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಪ್ರತಿಯೊಬ್ಬ ನಾಗರಿಕರಿಗೆ ಸ್ವಾವಲಂಬನೆಯ ದಾರಿಯಲ್ಲಿ ಮುಂದುವರಿಯಲು ಮತ್ತು ಶ್ರಮಶೀಲ ಜೀವನವನ್ನು ಅಳವಡಿಸಿಕೊಳ್ಳಲು ಬಲವಾದ ಪ್ರೇರಣೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande