
ಪ್ರಯಾಗ್‌ರಾಜ್, 19 ಜನವರಿ (ಹಿ.ಸ.) :
ಆ್ಯಂಕರ್ : ಮಾಘ ಮೇಳದ ವೇಳೆ ಪೊಲೀಸ್ ಹಾಗೂ ಆಡಳಿತದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜರು, ಸೋಮವಾರ ಬೆಳಿಗ್ಗೆ ಶಿಬಿರದ ಹೊರಗೆ ಪಲ್ಲಕ್ಕಿಯ ಮೇಲೆ ಕುಳಿತು ದಂಡ, ತರ್ಪಣ ಹಾಗೂ ಪೂಜಾ ಅರ್ಚನೆ ನೆರವೇರಿಸಿದರು.
ಶಂಕರಾಚಾರ್ಯರು ಇಡೀ ರಾತ್ರಿ ಆಹಾರ ಹಾಗೂ ನೀರಿಲ್ಲದೆ ಶಿಬಿರದ ಹೊರಗೇ ಪಲ್ಲಕ್ಕಿಯಲ್ಲೇ ಕಾಲ ಕಳೆಯಿದರು ಎಂದು ಅವರ ವಕ್ತಾರ ಶೈಲೇಂದ್ರ ಯೋಗಿ ಸರ್ಕಾರ್ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಪಲ್ಲಕ್ಕಿಯ ಮೇಲೆಯೇ ದಂಡ ತರ್ಪಣ ವಿಧಿಯನ್ನು ನೆರವೇರಿಸಿದ್ದು, ಇದು ಧಾರ್ಮಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.
ಈ ವೇಳೆ ಶಂಕರಾಚಾರ್ಯರ ಭಕ್ತರು ಹಾಗೂ ಶಿಷ್ಯರು ಸಂಗಮದ ಮರಳಿನ ಮೇಲೆ ಪಲ್ಲಕ್ಕಿಯ ಸಮೀಪವೇ ರಾತ್ರಿ ತಂಗಿದ್ದರು. ಶಿಬಿರದ ಹೊರಗೆ ನೆರೆದಿದ್ದ ಅನುಯಾಯಿಗಳು ‘ರಾಮ್, ಶ್ರೀ ರಾಮ್, ಜೈ ಸಿಯಾ ರಾಮ್’ ಎಂಬ ನಾಮಜಪದಲ್ಲಿ ನಿರಂತರವಾಗಿ ತೊಡಗಿದ್ದರು.
ಮಾಘ ಮೇಳದ ವ್ಯವಸ್ಥೆ ಹಾಗೂ ಆಡಳಿತದ ಕ್ರಮಗಳ ವಿರುದ್ಧ ಶಂಕರಾಚಾರ್ಯರ ಈ ಧಾರ್ಮಿಕ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa