
ಕೋಲಾರ, ೧೯ ಜನವರಿ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಜಾನಪದ ಗಾಯಕ ಸುಗಟೂರಿನ ಗೋ.ನಾ ಸ್ವಾಮಿ ನೇತೃತ್ವದಲ್ಲಿ ಕನ್ನಡ ಅಸೋಸಿಯೇಷನ್ ಲಕ್ನೋ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಸಂರಕ್ಷಣಾ ಪರಿಷತ್, ಸಹಯೋಗದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಭೋದ್ ಸಂಸ್ಥಾನ್ ಆಡಿಟೋರಿಯಂನಲ್ಲಿ ಜಾನಪದ ಸುಗ್ಗಿ ಕಾರ್ಯಕ್ರಮವು ವಿಜೃಂಭಣೆಯಿ0ದ ನಡೆಯಿತು.
ಜಿಲ್ಲೆಯ ಅಂತರಾಷ್ಟ್ರೀಯ ಜಾನಪದ ಗಾಯಕ ಹಾಗೂ ಜಾನಪದ ಸಂರಕ್ಷಣಾ ಪರಿಷತ್ ಅಧ್ಯಕ್ಷ ಗೋ ನಾ ಸ್ವಾಮಿ ಉದ್ಘಾಟಿಸಿ ಮಾತನಾಡಿ ಜಾನಪದ ಕಲೆ ದೇಶ ವಿದೇಶಗಳನ್ನು ದಾಟಿ ಎಲ್ಲ ಕಡೆಯು ಪಸರಿಸಿದೆ ವಿಶೇಷ ಕಲೆಯಾಗಿ ಇದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಹಾಗಾಗಿ ದೇಶ ವಿದೇಶಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಗಡಿಯ ಅಭಿವೃದ್ಧಿ ಪ್ರಾಧಿಕಾರದ ಪ್ರಕಾಶ್ ಮತ್ತಿಹಳ್ಳಿ, ಲಕ್ನೋ ಕನ್ನಡ ಅಸೋಸಿಯೇಷನ್ ಅಧ್ಯಕ್ಷೆ ಗಾಯಿತ್ರಿ, ಕಾರ್ಯದರ್ಶಿ ಸಂಜೀವ ನಾಯಕ, ಶಿಕ್ಷಣ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್, ಹೊಸಮನಿ, ಮಿಮಿಕ್ರಿ ಗೋಪಿ, ಕೋಲಾರದ ಮತ್ತಿಕುಂಟೆ ಕೃಷ್ಣ, ಅಬಕಾರಿ ಇಲಾಖೆ ರಾಜಶೇಖರ್, ಸಮಾಜ ಸೇವಕಿ ಜಾನಕಿ ಮುಂತಾದವರು ಭಾಗವಹಿಸಿದ್ದರು.
ವಿಜಯ ಮತ್ತು ತಂಡದಿಂದ ಜಾನಪದ ನೃತ್ಯ ವರ್ಷಿತಾ ಮತ್ತು ತಂಡದಿಂದ ಕೋಲಾಟ, ಮತ್ತಿಕುಂಟೆ ಕೃಷ್ಣ ತಂಡದಿಂದ ಜಾನಪದ ಗಾಯನ ಗುಣವತಿ ಮತ್ತು ತಂಡದಿಂದ ಭರತನಾಟ್ಯ ಮಿಮಿಕ್ರಿ ಗೋಪಿ ತಂಡದಿ0ದ ಹಾಸ್ಯರಸ ಸಂಜೆ ಕಾರ್ಯಕ್ರಮ ನಡೆದು ನೋಡುಗರ ಗಮನ ಸೆಳೆಯಿತು.
ಚಿತ್ರ : ಕರ್ನಾಟಕ ಗಡಿ ಪ್ರಾಧಿಕಾರ ಮತ್ತು ಜಾನಪದ ಸಂರಕ್ಷಣಾ ಪರಿಷತ್ ಆಶ್ರಯದಲ್ಲಿ ಲಕ್ನೋದಲ್ಲಿ ನಡೆದ ಜಾನಪದ ಸುಗ್ಗಿ ಕಾರ್ಯಕ್ರಮದಲ್ಲಿ ಕೋಲಾರದ ಸುಗಟೂರಿನ ಗಾಯಕ ಗೋ.ನ ಸ್ವಾಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್