
ವಿಜಯಪುರ, 19 ಜನವರಿ (ಹಿ.ಸ.) :
ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರು ಹಾಗೂ ಹಾಗೂ ವೀ ಕೇರ್ ಸೊಸೈಟಿ, ಬೆಂಗಳೂರು ಇವರುಗಳ ಸಹಯೋಗದಲ್ಲಿ ಎಂ.ಎಸ್.ಎ0.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿಯಲ್ಲಿ ಉದ್ಯಮಿಗಳಿಗೆ ಪರಿಸರ ಮತ್ತು ಸಾಮಾಜಿಕ ನಿರ್ವಹಣಾ ವ್ಯವಸ್ಥೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದ ಹೋಟೆಲ್ ಮಧುವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿವೇಕ ಸಿ.ಗುನಗ ಮಾತನಾಡಿ, ಮಾಲಿನ್ಯ ನಿಯಂತ್ರಣ ಕುರಿತಂತೆ ಗಾಳಿ, ನೀರು ಮತ್ತು ಮಾಲಿನ್ಯವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವುದು. ತ್ಯಾಜ್ಯವನ್ನು ನಿರ್ವಹಿಸುವುದು, ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಪ್ರಯತ್ನಿಸುವುದು ಮತ್ತು ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಲು ಉದ್ದಿಮೆದಾರರಿಗೆ ಹೇಳಿದರು. ಸಾಮಾಜಿಕ ನಿರ್ವಹಣೆ ಕುರಿತಂತೆ, ಕಾರ್ಮಿಕರ ಹಕ್ಕುಗಳು,ನ್ಯಾಯಯುತ ವೇತನ, ಆರೋಗ್ಯ ಮತ್ತು ಸುರಕ್ಷತೆ, ಸಮಾನತೆ ಖಚಿತಪಡಿಸುವುದು.
ಸಮುದಾಯದೊಂದಿಗೆ ಸಂಬ0ಧ ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ ನೆರವಾಗುವುದು, ಆಸ್ಪತ್ರೆಗಳು, ಶಿಕ್ಷಣ ಮುಂತಾದವುಗಳಲ್ಲಿ ಸಹಾಯ,ಮಾನವ ಹಕ್ಕುಗಳು ಮತ್ತು ಕಾರ್ಮಿಕ ಮಾನದಂಡಗಳನ್ನು ಪಾಲಿಸುವುದು. ವಿಕಚೇತನರಿಗೆ, ದುರ್ಬಲ ವರ್ಗದವರಿಗೆ ಬೆಂಬಲ ನೀಡುವುದು. ನಿರ್ವಹಣಾ ಚೌಕಟ್ಟು, ಸಂಬ0ಧಿಸಿದ0ತೆ ಮುಂಜಾಗ್ರತಾ ಕ್ರಮವಾಗಿ ಹಾನಿಯ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸುವುದು. ಪರಿಸರ ಮತ್ತು ಸಾಮಾಜಿಕ ಅಪಾಯಗಳನ್ನು ಗುರುತಿಸಿ ನಿಯಂತ್ರಿಸುವುದು. ಸಾರ್ವಜನಿಕರ ಭಾಗವಹಿಸುವಿಕೆ ಮತ್ತು ಪಾರದರ್ಶಕತೆಯಿಂದ ಪರಿಸರ ಮತ್ತು ಸಾಮಾಜಿಕ ಅಪಾಯಗಳನ್ನು ಕಡಿಮೆ ಮಾಡುವುದು, ಯೋಜನೆಗಳು ಮತ್ತು ಕಾರ್ಯಾಚರಣೆಗಳಿಂದ ಉಂಟಾಗಬಹುದಾದ ನಕಾರಾತ್ಮಕ ಪರಿಣಾಮಗಳನ್ನು ತಡೆಯುವುದು. ಸುಸ್ಥಿರ ಅಭಿವೃದ್ಧಿ ಆರ್ಥಿಕ ಬೆಳವಣಿಗೆಯೊಂದಿಗೆ ಪರಿಸರ ಮತ್ತು ಸಾಮಾಜಿಕ ಸಮತೋಲನ ಕಾಪಾಡುವುದು. ಸಾಮಾಜಿಕ ಹೊಣೆಗಾರಿಕೆ ಮತ್ತು ನೈತಿಕತೆಯನ್ನು ಹೆಚ್ಚಿಸುವುದು ಜವಾಬ್ದಾರಿ ಸಂಸ್ಥೆಯದ್ದಾಗಿದೆ.
ಅ0ತಾರಾಷ್ಟ್ರೀಯ ಮಾನದಂಡಗಳ ಅನುಸರಣೆ: ಐಎಪ್‌ಸಿ ಮತ್ತು ಇತರ ಸಂಸ್ಥೆಗಳ ಮಾನದಂಡಗಳನ್ನು ಪಾಲಿಸುವುದು. ಒಟ್ಟಾರೆ, ಪರಿಸರ ಮತ್ತು ಸಾಮಾಜಿಕ ನಿರ್ವಹಣಾ ವ್ಯವಸ್ಥೆಯು ಯಾವುದೇ ಸಂಸ್ಥೆಯು ಪರಿಸರ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಲು ಸಹಾಯ ಮಾಡುವ ಒಂದು ಸಮಗ್ರ ವಿಧಾನವಾಗಿದೆ ಎಂದು ವಿವರಿಸಿದರು.
ಉದ್ದಿಮೆದಾರರು ತಮ್ಮ ಉದ್ದಿಮೆಗಳ ಬೆಳವಣಿಗೆಯಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ವಿಜಯಪುರ ಡಿಸ್ಟ್ರಿಕ್ಟ್ ಇಂಡಸ್ಟ್ರೀಯಲ್ ಓನರ್ಸ್ ಅಸೋಶಿಯೇಶನ್ ಅಧ್ಯಕ್ಷ ಎಸ್.ವಿ.ಪಾಟೀಲ ಇವರು ಪರಿಸರ ಮತ್ತು ಸಾಮಾಜಿಕ ನಿರ್ವಹಣಾ ವ್ಯವಸ್ಥೆ ಎಂದರೆ ಒಂದು ಸಂಸ್ಥೆಯು ತನ್ನ ಕಾರ್ಯಗಳಿಂದ ಪರಿಸರ ಮತ್ತು ಸಮಾಜದ ಮೇಲೆ ಆಗುವ ಪರಿಣಾಮಗಳನ್ನು ಗುರುತಿಸಿ, ನಿರ್ವಹಿಸಲು ಬಳಸುವ ನೀತಿಗಳು, ಕಾರ್ಯ-ವಿಧಾನಗಳು ಮತ್ತು ಪ್ರಕ್ರಿಯೆಗಳ ಸಮೂಹವಾಗಿದೆ. ಪ್ರತಿಕೂಲ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ಪರಿಶೀಲಿಸುವ ವ್ಯವಸ್ಥಿತ ಕಾರ್ಯ ವಿಧಾನವನ್ನು ಒದಗಿಸುತ್ತದೆ. ಇದು ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುತ್ತದೆ ಅಥವಾ ಸಾಧ್ಯವಾದಷ್ಟು ಕಡಿಮೆ ಮಾಡುತ್ತದೆ. ಸಕಾರಾತ್ಮಕ ಪರಿಣಾಮಗಳನ್ನು ಉತ್ತೇಜಿಸುತ್ತದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಉದ್ಯಮದಾರರಿಗೆ ತಿಳಿಸಿದರು. ಹಾಗೆಯೇ ಕಂಪನಿಯ ಕಾರ್ಯನಿರ್ವಹಣೆಗೆ ಸರ್ಕಾರದ ಕೆಲವು ನಿಯಮಗಳ ಪಾಲನೆ ಅತ್ಯಗತ್ಯ. ಈ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಪೀಟರ್ ಅಲೆಕ್ಸಾಂಡರ್ ಇವರು ತ್ಯಾಜ್ಯ ನಿರ್ವಹಣೆ ಕುರಿತಂತೆ, ಪರಿಸರ ಸಂಬ0ಧಿತ ನಿಯಮಗಳನ್ನು ರೂಪಿಸಲು ಮತ್ತು ವೀಕ್ಷಿಸಲು ಪರಿಸರಣಾ ನಿರ್ವಹಣಾ ವ್ಯವಸ್ಥೆ ಸಹಾಯ ಮಾಡುತ್ತದೆ. ತ್ಯಾಜ್ಯ ನಿರ್ವಹಣೆ ಎಂಬುದು ವ್ಯವಸ್ಥೆಯ ವಿನ್ಯಾಸದಿಂದ ಆರಂಭವಾಗಿ ತ್ಯಾಜ್ಯದ ಪುನರ್ಬಳಕೆಯವರೆಗೆ ಎಲ್ಲಾ ಹಂತದವರೆಗೂ ಮುಖ್ಯವಾಗುತ್ತದೆ ಎಂದು ಉದ್ದಿಮೆದಾರರಿಗೆ ಹೇಳಿದರು. ಉಪಸ್ಥಿತರಿದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ, ಎಸ್. ಸತ್ಯಮೂರ್ತಿ, ಶಮಶೂದಿನ ಸರಟೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಂತೋಷ ಸಜ್ಜನ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande