ಕುಡತಿನಿ : ಮುಂಗಡ ಆಯವ್ಯಯ ವರದಿ ಸಿದ್ಧತಾ ಸಭೆ
ಬಳ್ಳಾರಿ, ಕುಡತಿನಿ, 19 ಜನವರಿ (ಹಿ.ಸ.) : ಆ್ಯಂಕರ್ : ಕುಡತಿನಿ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಮುಂಗಡ ಆಯ-ವ್ಯಯ ವರದಿ ಸಿದ್ಧತೆ ಅಂಗವಾಗಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕುಡತಿನಿ ಪಟ್ಟಣದ 02 ನೇ ವಾರ್ಡ್‍ನಲ್ಲಿ ಚರ್ಚ್
ಕುಡತಿನಿ : ಮುಂಗಡ ಆಯವ್ಯಯ ವರದಿ ಸಿದ್ಧತಾ ಸಭೆ


ಬಳ್ಳಾರಿ, ಕುಡತಿನಿ, 19 ಜನವರಿ (ಹಿ.ಸ.) :

ಆ್ಯಂಕರ್ : ಕುಡತಿನಿ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಮುಂಗಡ ಆಯ-ವ್ಯಯ ವರದಿ ಸಿದ್ಧತೆ ಅಂಗವಾಗಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕುಡತಿನಿ ಪಟ್ಟಣದ 02 ನೇ ವಾರ್ಡ್‍ನಲ್ಲಿ ಚರ್ಚ್ ಹತ್ತಿರ ಉಳಿಕೆ ರಸ್ತೆ ಕಾಮಗಾರಿಯನ್ನು ಅಳವಡಿಸಿ ಪೂರ್ಣಗೊಳಿಸುವುದು. 02 ನೇ ವಾರ್ಡಿನಲ್ಲಿ ಈಗಾಗಲೇ ಮುಕ್ತಾಯವಾದ ರಸ್ತೆ ಕಾಮಗಾರಿ ಅಕ್ಕ ಪಕ್ಕ ಗ್ರಾವೆಲ್ ಹಾಕುವುದು. ಕೆರೆ ಹತ್ತಿರ 1 ಲಕ್ಷ ಲೀಟರ್ ಸಾಮಥ್ರ್ಯವುಳ್ಳ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡುವುದು.

ಕನ್ನಡ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಗೆ ವಸತಿ ಕಲ್ಪಿಸಲು ಸೂಚಿಸಲಾಯಿತು.

09 ನೇ ವಾರ್ಡಿನಲ್ಲಿ ದುರಸ್ಥಿಯಲ್ಲಿದ್ದ ರಸ್ತೆಯನ್ನು ಅಗೆದು ಪೇವರ್ಸ್ ಹಾಕಲು ಕ್ರಮವಹಿಸುವುದು. ರಾಜ ಕಾಲುವೆಯಲ್ಲಿನ ಶೀಲ್ಟ್ ತೆಗೆಯಲು ಕ್ರಮವಹಿಸುವುದು. 18ನೇ ವಾರ್ಡಿನಲ್ಲಿ ಚಲುವಾದಿ ಕೇರಿಯಲ್ಲಿ ಜನಾಂಗದವರು ಕಾಯ್ದಿರಿಸಿದ 100x100 ಸ್ಥಳದಲ್ಲಿ ಗ್ರಂಥಾಲಯ ಅಥವಾ ಭವನ ನಿರ್ಮಾಣ ಮಾಡಲು ಸೂಚಿಸಿದರು.

ಬಳಿಕ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ಹಿರಿಯ ನಾಗರಿಕರು, ಪಟ್ಟಣದ ಮುಖಂಡರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande