ಮೊಕದ್ದಮೆಗೆ ಸ್ವಾಗತ ; ಸಿಬಿಐ/ಎನ್‍ಐಎ ತನಿಖೆ ನಡೆಯಲಿ : ಶಾಸಕ ಜಿ. ಜನಾರ್ದನ ರೆಡ್ಡಿ
ಬಳ್ಳಾರಿ, 06 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೇರಳ ರಾಜ್ಯದ ಕಾಂಗ್ರೆಸ್ ಸಂಸದ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ ಸೆಂಥಿಲ್ ಅವರು ನನ್ನ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶನಿವಾರ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದನ್ನು ಸ್ವಾಗತಿಸುವೆ. ಶಶಿಕಾಂತ ಸೆಂಥಿಲ್ ಅವರೇ
ನನ್ನ ವಿರುದ್ಧದ ಮಾನನಷ್ಟ ಮೊಕದ್ದಮೆ ಸ್ವಾಗತ,  ಸಿಬಿಐ ಅಥವಾ ಎನ್‍ಐಎ ತನಿಖೆ ನಡೆಯಲಿ : ಶಾಸಕ ಜಿ. ಜನಾರ್ದನರೆಡ್ಡಿ


ಬಳ್ಳಾರಿ, 06 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೇರಳ ರಾಜ್ಯದ ಕಾಂಗ್ರೆಸ್ ಸಂಸದ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ ಸೆಂಥಿಲ್ ಅವರು ನನ್ನ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶನಿವಾರ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದನ್ನು ಸ್ವಾಗತಿಸುವೆ. ಶಶಿಕಾಂತ ಸೆಂಥಿಲ್ ಅವರೇ ಧರ್ಮಸ್ಥಳ ಪ್ರಕರಣವನ್ನು ಸಿಬಿಐ ಅಥವಾ ಎನ್‍ಐಎ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಮನವಿ ಸಲ್ಲಿಸಬೇಕು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಆಗ್ರಹಿಸಿದ್ದಾರೆ.

ಗೃಹ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ನಡೆಸಿ, ಧರ್ಮಸ್ಥಳ ಅಪಪ್ರಚಾರ ಪ್ರಕರಣದಲ್ಲಿ ಸಂಸದ ಶಶಿಕಾಂತ್ ಸೆಂಥಿಲ್ ಅವರ ಕೈವಾಡವಿದೆ. ಧರ್ಮಸ್ಥಳ ಮತ್ತು ಸೌಜನ್ಯ ಹತ್ಯೆ ಪ್ರಕರಣದ ಕುರಿತು ಯೂಟ್ಯೂಬರ್‌ಗಳು, ನಗರ ನಕ್ಸಲರು ಒಟ್ಟಾಗಿ ಸೇರಿ ಸುಳ್ಳುಗಳನ್ನು ಪ್ರಚಾರ ಮಾಡಿದ್ದಾರೆ. ಈ ಎಲ್ಲ ಷಡ್ಯಂತ್ರಗಳ ಹಿಂದೆ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಷಡ್ಯಂತ್ರ ಮತ್ತು ಕೈವಾಡವಿದೆ. ಶಶಿಕಾಂತ ಸೆಂಥಿಲ್ ಹಿಂದೂ ವಿರೋಧಿ. ಇಡೀ ಪ್ರಕರಣ ದೇಶ - ವಿದೇಶಗಳನ್ನು ವ್ಯಾಪಿಸಿದೆ. ವಿದೇಶೀ ಹಣದ ಹರಿವಿರುವ ಶಂಕೆ ಇದೆ. ಕಾರಣ ಈ ಪ್ರಕರಣದ ಕುರಿತು ಸಿಬಿಐ ಅಥವಾ ಎನ್‍ಐಎ ತನಿಖೆ ಅಗತ್ಯವಿದೆ ಎಂದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಶಿಕಾಂತ ಸೆಂಥಿಲ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನ ಮೇಲಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಜಾಮೀನಿನ ಮೇಲಿರುವುದನ್ನು ಶಶಿಕಾಂತ ಸೆಂಥಿಲ್ ಅವರು ಗಮನಿಸಿ, ನನ್ನ ವಿರುದ್ಧ ಮಾತನಾಡಬೇಕು ಎಂದರು.

ಬಿಜೆಪಿಯ ಮುಖಂಡರು, ಕಾರ್ಪೊರೇಟರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande