ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾಜಿ ಸಂಸದ ಪ್ರತಾಪ್ ಸಿಂಹ್ ಕೋರ್ಟ್ ಮೆಟ್ಟಿಲೇರಿದ್ದು ಬಹಳ ಸಂತೋಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್‌ಗೆ ಆಹ್ವಾನ ಹಿನ್ನೆಲೆ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ ಪ್ರಶ್ನೆಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದರು.
ಅದನ್ನು ಕೋರ್ಟ್ ತೀರ್ಮಾನ ಮಾಡುತ್ತದೆ. ಹಿಂದೆ ನಿಸಾರ್ ಅಹ್ಮದ್ ಇದ್ದಾಗ ಆಗ ಏಕೆ ಕೊರ್ಟಗೆ ಹೋಗಲಿಲ್ಲ.
ಟಿಪ್ಪು ಸುಲ್ತಾನ ಮಾಡಿದರು. ಆಗ ಏಕೆ ಮಾಡಲಿಲ್ಲ. ಮಿರ್ಜಾ ಇಸ್ಮಾಯಿಲ್ ಮಾಡಿದಾಗ ಯಾಕೆ ಕೋರ್ಟ್ ಗೆ ಹೋಗಲಿಲ್ಲ. ಇದು ರಾಜಕೀಯವಾಗಿ ಮಾಡುತ್ತಿದ್ದಾರೆ. ನಾವೂ ಮಾಡುತ್ತೇವೆ ಎಂದರು.
ಇನ್ನು ಬೂಕರ್ ಅವಾರ್ಡ್ ಯಾರಿಗೆ ಬಂತು? ಭಾನು ಮುಷ್ತಾಕ್ ಬರೆದ ಎದೆಯ ಹಣತೆ ಬಳಿಕ ಅದು ಹೃದಯ ಹಣತೆ ಎಂದರು. ಎದೆಯ ಹಾಗೂ ಹೃದಯ ಎರಡೂ ಒಂದೇ ಎಂದು ಸಮಜಾಯಿಷಿ ಮುಖ್ಯಮಂತ್ರಿ ಕೊಟ್ಟರು. ಭಾನು ಮುಷ್ತಾಕ್ ವಿಚಾರದಲ್ಲಿ
ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande