ಕೊಪ್ಪಳ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ತಾಲೂಕಿನ ಹ್ಯಾಟಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಹಾಗು ಸಂಘದ ಕಟ್ಟಡ ನಿಧಿ ಯಿಂದ ನಿರ್ಮಿಸಲಾದ ನೂತನ ಕಾಮಧೇನು ಸಭಾಂಗಣ ಉದ್ಘಾಟನೆ ಮತ್ತು ಗೋ ಮಾತೆ ಬರಡು ರಾಸುಗಳ ಆರೋಗ್ಯ ಶಿಬಿರದ ಉದ್ಘಾಟನೆ ರವಿವಾರ ನಡೆಯಲಿದೆ ಎಂದು ಅನುಪಮ ಬಿ. ಅವಣ್ಣೇರ ಅವರು ತಿಳಿಸಿದ್ದಾರೆ.
ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶಾಸಕ ಶ್ರೀ ರಾಘವೇಂದ್ರ ಹಿಟ್ನಾಳ ಅವರು ನೂತನ ಸಭಾಂಗಣವನ್ನು ಉದ್ಘಾಟಿಸಲಿದ್ದು, ಗೋಮಾತೆ ಪೂಜೆ ಮತ್ತು ಬರಡು ರಾಸುಗಳ ಆರೋಗ್ಯ ಶಿಬಿರವನ್ನು ಸಂಸದ ಶ್ರೀ ರಾಜಶೇಖರ್ ಹಿಟ್ನಾಳ ಮತ್ತು ಮಾಜಿ ಸಂಸದರಾದ ಶ್ರೀ ಸಂಗಣ್ಣ ಕರಡಿಯವರು ಉದ್ಘಾಟಿಸುವರು.
ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ್ ರವರು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನೇತೃತ್ವ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನೀಲಮ್ಮ ಚಿನ್ನರೆಡ್ಡಿ ರೊಡ್ಡರ್ ವಹಿಸಿಕೊಳ್ಳುವರು, ಮುಖ್ಯ ಅತಿಥಿಗಳಾಗಿ ಜಿ ಪಂ ಮಾಜಿ ಅಧ್ಯಕ್ಷ ಎಸ್ ಬಿ ನಾಗರಹಳ್ಳಿ ಮತ್ತು ರಾಯಚೂರು ಕೆ ಓ ಎಫ್ ಅಧ್ಯಕ್ಷ ಸುರೇಶ್ ರೆಡ್ಡಿ ಮಾದಿನೂರ್, ಜಿ ಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ,ರಾಬಕೊವಿ ಉಪಾಧ್ಯಕ್ಷ ಎನ್ ಸತ್ಯನಾರಾಯಣ ಮತ್ತು ನಿರ್ದೇಶಕರಾದ ಶ್ರೀ ಕೃಷ್ಣಾರೆಡ್ಡಿ ಗಲಬಿ, ಮಂಜುನಾಥ್ ನಿಡಶೇಶಿ ಶ್ರೀಮತಿ ಕಮಲಮ್ಮ ಗೌರಾಳ,ಹಂಪಯ್ಯ ಸ್ವಾಮಿ ಹಿರೇಮಠ್ ಸೇರಿದಂತೆ ಹಾಲು ಒಕ್ಕೂಟದ ಸದಸ್ಯರು ನಿರ್ದೇಶಕರು, ಪದಾಧಿಕಾರಿಗಳು ಮತ್ತು ಹ್ಯಾಟಿ ಗ್ರಾಮಸ್ಥರು ಉಪಸ್ಥಿತರಿರುವರು. ರಾಬಕೊವಿ ಮಾಜಿ ಅಧ್ಯಕ್ಷರಾದ ಶ್ರೀ ವೆಂಕನಗೌಡ ಹಿರೇಗೌಡ್ರು ಮತ್ತು ಬಹದ್ದೂರ್ ಬಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗಾನಂದ ಲೇಬಗೇರಿ ಇವರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್