ಕೊಪ್ಪಳ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರದ ಮಿಟ್ಟಿಕೇರಿ ಓಣಿಯ ನಿವಾಸಿ ಮಹ್ಮದ್ ಅರ್ಮಾನ್(4) ತಂದೆ ಸಾಧಿಕಅಲಿ ಅಳವಂಡಿ ಸೆಪ್ಟೆಂಬರ್ 2ರ ಮಂಗಳವಾರದಂದು ಕಾಣೆಯಾಗಿದ್ದು, ಬಾಲಕನ್ನು ಅಪಹರಣ ಮಾಡಿರುವ ಸಾಧ್ಯತೆಗಳಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಮಹಿಳಾ ಪೆÇಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಹ್ಮದ್ ಅರ್ಮಾನ್ ಎಂಬ ಬಾಲಕ ಸೆ. 2ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದು, ಪಾಲಕರು ತಮ್ಮ ಓಣಿ ಮತ್ತು ತಮ್ಮ ಸಂಬಂಧಿಕರು ವಾಸವಿರುವ ಏರಿಯಾಗಳಲ್ಲಿ ಹುಡುಕಿದ್ದರೂ ಸಹ ಬಾಲಕನು ಸಿಕ್ಕಿರುವುದಿಲ್ಲ. ಬಾಲಕನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರಬಹುದು ಎಂದು ಕಾಣೆಯಾದ ಬಾಲಕನ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಠಾಣಾ ಗುನ್ನೆ ನಂ: 85/2025 ಕಲಂ: 137(2) ಬಿ.ಎನ್.ಎಸ್ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಬಾಲಕನ ಚಹರೆ ವಿವರ: ಮಹ್ಮದ್ ಅರ್ಮಾನ್ ತಂದೆ ಸಾಧಿಕಅಲಿ ಅಳವಂಡಿ ವಯಸ್ಸು 4 ವರ್ಷ, ಎತ್ತರ 2.5 ಫೀಟ್, ಬಿಳಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಸಾದಾ ಹಸಿರು ಬಣ್ಣದ ಟಿ ಶರ್ಟ್ ಮತ್ತು ಚಾಕಲೇಟ್ ಕಲರ್ ಪ್ಯಾಂಟ್ ಧರಿಸಿದ್ದನು.
ಕಣೆಯಾದ ಬಾಲಕನು ಎಲ್ಲಿಯಾದರು ಕಂಡುಬಂದಲ್ಲಿ ಅಥವಾ ಈ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ದೂ.ಸಂ: 08539-221233, ಪಿ.ಐ ಮೊ.ಸಂ: 8861116999, ತನಿಖಾಧಿಕಾರಿ ಶಶಿಕಲಾ ಮೊ.ಸಂ: 8217391502 ಹಾಗೂ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ ಮೊ.ಸಂ: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್