ರೆಡ್ಡಿ ಜನಸಂಘ ಶಿಕ್ಷಣದ ಜ್ಯೋತಿಗೆ ಶತಮಾನದ ಖ್ಯಾತಿ
ಕೊಪ್ಪಳ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರೆಡ್ಡಿಜನ ಸಂಘಕ್ಕೆ ಈಗ ಶತಮಾನದ ಸಂಭ್ರಮ, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ. 24 ರಂದು ರೆಡ್ಡಿ ಜನ ಸಂಘ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸು ಮೂಲಕ ಯಶಸ್ವಿ ಮಾಡೋಣ ಎಂದು ಹರಿಹರ ಎರೆಹೊಸಳ್ಳಿ ರೆಡ್ಡಿ ಗುರ
ರೆಡ್ಡಿ ಜನಸಂಘ ಶಿಕ್ಷಣದ ಜ್ಯೋತಿಗೆ ಶತಮಾನದ ಖ್ಯಾತಿ


ಕೊಪ್ಪಳ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರೆಡ್ಡಿಜನ ಸಂಘಕ್ಕೆ ಈಗ ಶತಮಾನದ ಸಂಭ್ರಮ, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ. 24 ರಂದು ರೆಡ್ಡಿ ಜನ ಸಂಘ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸು ಮೂಲಕ ಯಶಸ್ವಿ ಮಾಡೋಣ ಎಂದು ಹರಿಹರ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿಗಳು ಕರೆ ನೀಡಿದ್ದಾರೆ.

ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇಹೇರಮಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರೆಡ್ಡಿ ಜನ ಸಂಘದ ಶತಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

ರೆಡ್ಡಿ ಜನಸಂಘ ಹುಟ್ಟಿಕೊಂಡಿರುವುದೇ ರೆಡ್ಡಿ ಸಮುದಾಯದ ಕಲ್ಯಾಣಕ್ಕಾಗಿ. ನೂರು ವರ್ಷಗಳಲ್ಲಿ ಲಕ್ಷ ಲಕ್ಷ ಜನರ ಬಾಳಲ್ಲಿ ಬೆಳಕಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಕ್ರಾಂತಿಯನ್ನೇ ಮಾಡಿದೆ. ಅಷ್ಟೇ ಅಲ್ಲಾ, ಬೆಂಗಳೂರಿನಂತ ನಗರ ಪ್ರದೇಶದಲ್ಲಿ ರೆಡ್ಡಿ ಹಾಸ್ಟೆಲ್ ಮಡಿ, ವಾಸಕ್ಕೆ ಮತ್ತು ಪ್ರಸಾದಕ್ಕೆ ಅವಕಾಶ ನೀಡುವ ಮೂಲಕ ವಿದ್ಯಾರ್ಥಿಗಳು ಜೀವನ ಬೆಳಗುವುದಕ್ಕೆ ಕಾರಣವಾಗಿದೆ.

ಕೇವಲ ಶಿಕ್ಷಣ ಅಷ್ಟೇ ಅಲ್ಲಾ, ಸಾಕಷ್ಟು ಸಮಾಜದ ಕಾರ್ಯಗಳನ್ನು ಮಾಡಲಾಗಿದೆ. ಇಂಥದ್ದೊಂದು ಸಂಘ ನೂರು ವರ್ಷಗಳನ್ನು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ರೆಡ್ಡಿ ಜನಸಂಘವನ್ನು ರಾಜ್ಯವ್ಯಾಪ್ತಿ ವಿಸ್ತರಣೆ ಮಾಡಿ, ರಾಜ್ಯದ ಪ್ರತಿ ಜಿಲ್ಲಾಕೇಂದ್ರದಲ್ಲಿಯೂ ರೆಡ್ಡಿ ಜನಸಂಘದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಯೋಜನೆ ರೂಪಿಸಿ, ನೂರು ವರ್ಷಗಳ ಸವಿನೆನಪಿಗಾಗಿ ಅಂಥ ಮಹಾನ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಹೀಗಾಗಿ, ಇಂಥ ಮಹಾನ್ ಶತಮಾನೋಮತ್ಸವ ಕಾರ್ಯಕ್ರಮದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದಲೂ ಬಂದು ಭಾಗವಹಿಸುವ ಮೂಲಕ ನಮ್ಮ ಸಂಘಟನೆಯ ಬಲ ಪ್ರದರ್ಶನ ಮಾಡಬೇಕಾಗಿದೆ.

ಹೀಗಾಗಿ, ಕೊಪ್ಪಳ ಜಿಲ್ಲೆಯಲ್ಲಿಯೂ ರೆಡ್ಡಿ ಸಮಾಜ ಬಲಿಷ್ಠವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಇದೆ. ಇಲ್ಲಿ ರಡ್ಡಿ ಜನಾಂಗ ಸದಾ ಕಲ್ಯಾಣಕಾರ್ಯಕ್ರಮ ಮಾಡುತ್ತಾ, ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಇಲ್ಲಿಂದಲೂ ಸೆ. 24 ರಂದು ನಡೆಯುವ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ಕರ್ನಾಟಕ ರೆಡ್ಡಿ ಜನಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣರಡ್ಡಿ, ನಿರ್ದೇಶಕರಾದ ಬಾಬುರೆಡ್ಡಿ, ರಾಜಾರೆಡ್ಡಿ, ಎಂ.ಸಿ. ಪ್ರಭಾಕರೆಡ್ಡಿ, ಎಂ. ಕೃಷ್ಣಾರಡ್ಡಿ, ರಡ್ಡಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಆರ್. ಪಿ. ರಡ್ಡಿ, ಆನಂದರಡ್ಡಿ, ಪ್ರಭು ಹೆಬ್ಬಾಳ, ವೆಂಕನಗೌಡ, ಮನೋಹರಗೌಡ, ಎಸ್. ಬಿ. ನಾಗರಳ್ಳಿ, ನವೋದಯ ವಿರುಪಾಕ್ಷಪ್ಪ, ದೇವಪ್ಪ ಅರಿಕೇರಿ, ಹನುಮರಡ್ಡಿ ಹಂಗನಕಟ್ಟಿ, ವೆಂಕಾರಡ್ಡಿ ವಕೀಲರು ಮೊದಲಾದವರು ಇದ್ದರು.

4ಕೆಪಿಎಲ್28 ಕೊಪ್ಪಳ ನಗರದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಸಾನಿಧ್ಯವನ್ನು ಶ್ರೀ ವೇಮಾನಂದ ಸ್ವಾಮೀಜಿಗಳು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande