ತಾಲ್ಲೂಕಿನಲ್ಲಿ ಜೆಸ್ಕಾಂ ಗ್ರಾಹಕರ ತ್ರೈಮಾಸಿಕ ಸಭೆ
ರಾಯಚೂರು, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯ ನಾನಾ ತಾಲ್ಲೂಕಿನ ಜೆಸ್ಕಾಂ ಉಪ ವಿಭಾಗಗಳಲ್ಲಿ ಗ್ರಾಹಕರ ಕುಂದುಕೊರೆತೆ ತ್ರೈಮಾಸಿಕ ಸಭೆಯನ್ನು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರ ಅಧ್ಯಕ್ಷತೆಯಲ್ಲಿ ನಾನಾ ದಿನಾಂಕಗಳಂದು ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರು ಹೆಚ್ಚಿ
ತಾಲ್ಲೂಕಿನಲ್ಲಿ ಜೆಸ್ಕಾಂ ಗ್ರಾಹಕರ ತ್ರೈಮಾಸಿಕ ಸಭೆ


ರಾಯಚೂರು, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ನಾನಾ ತಾಲ್ಲೂಕಿನ ಜೆಸ್ಕಾಂ ಉಪ ವಿಭಾಗಗಳಲ್ಲಿ ಗ್ರಾಹಕರ ಕುಂದುಕೊರೆತೆ ತ್ರೈಮಾಸಿಕ ಸಭೆಯನ್ನು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರ ಅಧ್ಯಕ್ಷತೆಯಲ್ಲಿ ನಾನಾ ದಿನಾಂಕಗಳಂದು ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಸೆಪ್ಟೆಂಬರ್ 18ರಂದು ಜಿಲ್ಲೆಯ ಸಿಂಧನೂರು, ಸೆಪ್ಟೆಂಬರ್ 24ರಂದು ರಾಯಚೂರು ನಗರ ಉಪ ವಿಭಾಗ-1 ಹಾಗೂ ನಗರ ಉಪ ವಿಭಾಗ-2, ಸೆಪ್ಟೆಂಬರ್ 12ರಂದು ಮಸ್ಕಿ ಹಾಗೂ ಲಿಂಗಸುಗೂರು, ಸೆಪ್ಟೆಂಬರ್ 06ರಂದು ರಾಯಚೂರು ಗ್ರಾಮೀಣ ಉಪ ವಿಭಾಗ, ಸೆಪ್ಟೆಂಬರ್ 26ರಂದು ಶಕ್ತಿನಗರ, ಸೆಪ್ಟೆಂಬರ್ 25ರಂದು ಮಾನ್ವಿ, ಸೆಪ್ಟೆಂಬರ್ 09ರಂದು ದೇವದುರ್ಗ ಹಾಗೂ ಸಿರವಾರದಲ್ಲಿ ನಡೆಯುವ ಗ್ರಾಹಕರ ಕುಂದುಕೊರತೆ ತ್ರೈಮಾಸಿಕ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande