ಮಾನ್ವಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಸ್ಲಿಮ್ ಸಮಾಜದ ಪವಿತ್ರ ಈದ್ ಮಿಲಾದ್ ಹಬ್ಬ ಕೋಮು ಸೌಹಾರ್ದತೆಯ ಸಂಕೇತವಾಗಿದ್ದು ನಾವೆಲ್ಲರು ಜಾತಿ-ಮತ-ಧರ್ಮಗಳನ್ನು ಬದಿಗಿಟ್ಟು ಹಬ್ಬ ಹರಿದಿನಗಳನ್ನು ಒಂದಾಗಿ ಆಚರಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿ ಮುಸ್ಲೀಂ ಬಂದುಗಳಿಗೆ ಪರಸ್ಪರ ಶುಭಕೋರಿದರು.
ಮನ್ವಿಯ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ಯ ಆಯೋಜಿಸಿದ್ದ ಆರಾಧನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೊದಲಿನಿಂದಲೂ ನಾವೆಲ್ಲರು ಸಹೋದರರಂತೆ ಬಾಳುತ್ತಿದ್ದೇವೆ. ದೇಶದ ಎಲ್ಲಾ ಮಹಾನ್ ದಾರ್ಶನಿಕರು ಶಾಂತಿ, ಸೌಹಾರ್ದತೆ ಸಂದೇಶವನ್ನು ನಾಡಿಗೆ ಸಾರಿದ್ದಾರೆ. ಅವರ ಆಶಯದಂತೆ ನಮ್ಮ ಧರ್ಮವನ್ನು ಪ್ರೀತಿಸುವ ಜೊತೆಗೆ ಇತರೆ ಧರ್ಮವನ್ನು ಗೌರವಿಸುವ ಮೂಲಕ ಸೌಹಾರ್ಧತೆಯಿಂದ ಬದುಕಬೇಕು ಎಂದು ತಿಳಿಸಿದರು.
ನಂತರ ಶಾಸಕರಾದ ಹಂಪಯ್ಯ ನಾಯಕ ಮಾತನಾಡಿ, ನಮ್ಮೆಲ್ಲರದು ಒಂದೆ ರಕ್ತ, ಒಂದೇ ಭೂಮಿ ಯಲ್ಲಿ ಬೆಳದ ಅನ್ನವನ್ನು ಊಟ ಮಾಡುತ್ತಿದ್ದೇವೆ ಅಂದ ಮೇಲೆ ಮನುಕುಲಕ್ಕೆ ಜಾತಿ, ಧರ್ಮದ ಬೇದವಿಲ್ಲ. ಮೊದಲಿನಿಂದಲೂ ಹಿಂದು, ಮುಸ್ಲೀಂ, ಕ್ರೈಸ್ತರೆಲ್ಲರು ಸ್ನೇಹಿತರಾಗಿ ಸಹೋದರರಂತೆ ಬೆಳದಿದ್ದೇವೆ. ನಮ್ಮಲ್ಲಿ ಯಾವುದೇ ಬೇಧಬಾವವಿಲ್ಲ ಎಂದು ಈದ್ ಮಿಲಾದ್ ಹಬ್ಬಕ್ಕೆ ಶುಭಕೋರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಮಾನ್ವಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಗಫೂರ್ ಸಾಬ್, ರಾಜಾ ಸುಭಾಷ್ ಚಂದ್ರ ನಾಯಕ, ರೌಡೂರ್ ಮಹಾಂತೇಶ ಸ್ವಾಮಿ, ಖಾಲೀದ್ ಗುರು, ಜಯಪ್ರಕಾಶ್, ಇದಾಯತ್, ಅಬ್ದುಲ್ ಭಾಷಾ, ಶರಣಯ್ಯ, ಹುಸೇನ್ ಪಾಷಾ ಕೊಡ್ಲಿ, ರಸೂಲ್ ಖುರೇಶಿ, ಸತ್ತರ್ ಬಂಗ್ಲೇವಾಲೆ, ಇಸ್ಮೈಲ್ ಮಾಡಗಿರಿ, ಜಾಫರ್, ಮೊಹ್ಮದ್ ಪಾಷಾ, ಹಂಪಯ್ಯ ನಾಯಕ, ಕಾಮೇಶ್, ರೇಣುಕಾ ರಡ್ಡಿ ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್