ಡಾ. ರಾಧಾಕೃಷ್ಣನ್‌ರವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿ : ಶಾಸಕ ಎಸ್ ವಿ ಸಂಕನೂರ
ಗದಗ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ತತ್ವಜ್ಞಾನಿ, ಶ್ರೇಷ್ಠ ಶಿಕ್ಷಕ, ರಾಷ್ಟಪತಿಯಾಗಿ ಡಾ. ರಾಧಾಕೃಷ್ಣನ್‌ರವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅವರು ಅಭಿಪ್ರಾಯ ಪಟ್ಟರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗದಗ ಜಿಲ್ಲಾಡಳಿತ,
ಪೋಟೋ


ಗದಗ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ತತ್ವಜ್ಞಾನಿ, ಶ್ರೇಷ್ಠ ಶಿಕ್ಷಕ, ರಾಷ್ಟಪತಿಯಾಗಿ ಡಾ. ರಾಧಾಕೃಷ್ಣನ್‌ರವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅವರು ಅಭಿಪ್ರಾಯ ಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಅವರ ಶಿಸ್ತು ಶ್ರದ್ದೆಯಿಂದ ಕಾರ್ಯ ನಿರ್ವಹಿಸಿ, ಉನ್ನತಮಟ್ಟ ತಲುಪಿದರು. ಅವರಂತೆ ನಾವೆಲ್ಲರೂ ಸಹ ಶ್ರದ್ಧೆ ಪ್ರಾಮಾಣಿಕತೆ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.

ಬಹಳ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮಾಡ್ತಿದ್ದೇವೆ. ರಾಧಾಕೃಷ್ಣನ್‌ರವರ ಅವರಿಗೆ ಶಿಕ್ಷಕರ ಮೇಲೆ ಅಪಾರ ಪ್ರೀತಿ ಗೌರವ ಇದ್ದುದರಿಂದ ತಮ್ಮ ದಿನಾಚರಣೆ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದರು ಎಂದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನಾವೇಲ್ಲರೂ ಶ್ರೇಷ್ಠ ಶಿಕ್ಷಕರಾಗಿ ಸುಭದ್ರ ಸುಶಿಕ್ಷಿತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಕೈಜೊಡಿಸೋಣ ಎಂದು ಶಾಸಕ ಎಸ್ ವಿ ಸಂಕನೂರ ಕರೆ ನೀಡಿದರು.

ಪ್ರಾನ್ಸ್ ದೇಶದ ಕೋಟರ್ನಲ್ಲಿ ಶಿಕ್ಷಕರ ಹೇಳಿಕೆ ವಿಚಾರಣೆಯನ್ನು ಗೌರವಯುತವಾಗಿ ಕುರಿಸಿ ವಿಚಾರಣೆ ಮಾಡುತ್ತಾರೆ. ಅಂದರೆ ಪ್ರಾನ್ಸ್ ದೇಶದಲ್ಲಿ ಗುರುಗಳಿಗೆ ಉನ್ನತಮಟ್ಟದ ಗೌರವಯುತ ಸ್ಥಾನ ನೀಡಿದ್ದಾರೆ ಎಂದು ವಿವಿಧ ದೇಶಗಳಲ್ಲಿ ಶಿಕ್ಷಕರಿಗೆ ನೀಡುವ ಗೌರವ ಗಳ ಕುರಿತು ವಿವರಿಸಿದರು.

ಓಮನ್ ರಾಷ್ಟ್ರದ ರಾಜನು ಶಂಕರದಯಾಳ ಶರ್ಮಾ ಅವರನ್ನು ವಿಮಾನ ನಿಲ್ದಾಣಕ್ಕೆ ಸ್ವತಃ ಬಂದು ಸ್ವಾಗತಿಸಿ, ಸ್ವತಃ ಅವರೆ ಕಾರು ಚಲಾಯಿಸುವ ಮೂಲಕ ಅವರನ್ನು ಗೌರವ ಯುತವಾಗಿ ಕಂಡರು. ಇದನ್ನೆಲ್ಲ ಕಾರಣ ಶಂಕರದಯಾಳ ಶರ್ಮಾ ಅವರ ಶಿಷ್ಯನಾಗಿ ಓಮನ್ ರಾಜ ಬಾಲ್ಯದಲ್ಲಿ ಅಭ್ಯಾಸ ಮಾಡಿದ್ದರು ಎಂದರು.

ದೇಶದ ಭವಿಷ್ಯ ನಾಲ್ಕು ಕೊಟಡಿಗಳ ಒಳಗೆ ನಿರ್ಮಾಣ ಆಗುತ್ತದೆ. ತಾಯಿ ಮಗುವಿಗೆ ಜನ್ಮ ನಿಡುತ್ತಾಳೆ, ಆ ಮಗುವಿನ ಜೀವನ ಉನ್ನತ ಗುಣಮಟ್ಟದಲ್ಲಿ ಸಾಗಲು ಶಿಕ್ಷಕರ ಶ್ರಮ ನಿರಂತರವಾಗಿ ಅಡಗಿರುತ್ತದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಶಿಕ್ಷಕರು ಹಲವು ಪ್ರಯತ್ನ ಮಾಡಬೇಕು.

ಹೆಚ್ಚು ಜ್ಞಾನ ಸಂಪಾದಿಸದ ಶಿಕ್ಷಕ ಮಕ್ಕಳ ಮೇಲೆ ಕಲಿಯುವದಿಲ್ಲ ಎಂದು ದೂರುತ್ತಾನೆ. ಉತ್ತಮ ಶಿಕ್ಷಕನಾದವನು ಪಾಠ ಆರಂಬಕ್ಕೂ ಮೊದಲು ಕಲಿಸುವ ವಿಷಯದ‌ ಮೇಲೆ ಆಸಕ್ತಿ ಕರ ವಿಷಯದಿಂದ ಪಾಠದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ ನಂತರ ಪಾಠ ಆರಂಭ ಮಾಡುತ್ತಾರೆ. ಶಿಕ್ಷಕರಾದವರಿಗೆ ಜ್ಞಾನ ಸಂಪತ್ತು ಅಧಿಕವಾಗಿರಬೇಕು ಎಂದರು.

ನೈತಿಕ ಶಿಕ್ಷಣ ಇಂದಿನ ಪ್ರಸ್ತುತ ಕಾಲದಲ್ಲಿ ಅನಿವಾರ್ಯ ಎಂದೆನಿಸುತ್ತಿದೆ. ಮಕ್ಕಳಿಗೆ ಮಾನವೀಯ ಮೌಲ್ಯಗಳ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಎಸ್ ವಿ ಸಂಕನೂರ ನುಡಿದರು.

ಕೊಟಾರಿ ಕಮಿಷನ್ ಪ್ರಕಾರ ತ್ರಿಬಾಷಾ ಸೂತ್ರ ಇರಬೇಕು ಎಂಬ ನಿಯಮವಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಯಾವಾಗಲು ಹೇಳುವುದು ತ್ರಿಬಾಷಾ ಸೂತ್ರ ಇರಲಿ ಎಂದು. ಇಷ್ಟೇಲ್ಲಾ ಇರುವಾಗ ರಾಜ್ಯದಲ್ಲಿ ದ್ವಿಬಾಷಾ ಸೂತ್ರ ಬೇಕಾ ? ಎಂದರು. ಉತ್ತರ ಭಾರತದಲ್ಲಿ ಹೋಗಿ ಕೆಲಸ ಮಾಡಲು, ವ್ಯವಹರಿಸಲು ಹಿಂದಿ ಅಗತ್ಯವಾಗಿದೆ. ದ್ವಿಬಾಷಾ ಸೂತ್ರ ಜಾರಿ ತರುವ ನಿರ್ದಾರವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲೆಯ ಪಲಿತಾಂಶ ಉತ್ತಮವಾಗಲಿ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು‌ ಮರಳಿ ಶಾಲೆಗೆ ತರುವ ಪ್ರಯತ್ನ ಉತ್ತಮವಾಗಿ ನಡೆದಿದೆ. ಪ್ರಶಸ್ತಿಗೆ ಅರ್ಹರಾದ ಎಲ್ಲ ಶಿಕ್ಷಕರಿಗೂ ಅಭಿನಂದನೆಗಳು. ಅಲ್ಲದೇ ನಿವೃತ್ತ ಶಿಕ್ಷಕರೆಲ್ಲರಿಗೂ ಒಳ್ಳೆಯದಾಗಲಿ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಶುಭ ಕೋರಿದರು.

ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಒಬ್ಬ ಶ್ರೇಷ್ಠ ತತ್ವಜ್ಞಾನಿ, ರಾಷ್ಟಪತಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯಾಗಿ ಆಚರಣೆ‌ ಮಾಡುತ್ತಿರುವುದು ಸಂತಸ ತಂದಿದೆ. ಗದಗ ಜಿಲ್ಲೆ ಶೈಕ್ಷಣಿಕ ಪ್ರಗತಿಗೆ ಒತ್ತು ಕೊಡುವ ಜಿಲ್ಲೆಯಾಗಿದೆ. ಆದರೂ ಪಲಿತಾಂಶ ಸುದಾರಣೆ ಅಷ್ಟೇನು ಸಮಾದಾನಕರವಿಲ್ಲ. ಇನ್ನು ಮುಂದಾದರೂ ಸಹ ಇನ್ನಷ್ಟು ಪಲಿತಾಂಶ ಸುದಾರಣೆಗೆ ಶ್ರಮಿಸೋಣ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರು ಸಹ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಶಾಲೆಗಳ ಕಟ್ಟಡ, ಶೌಚಾಲಯ ಸುದಾರಣೆ ದುರಸ್ತಿಗೆ ಸರ್ಕಾರಕ್ಕೆ ಒತ್ತಾಯಿಸಿ, ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರಿಗೆ ಇರುವ ಕೊರತೆಗಳ ಬಗ್ಗೆ ಸಹ ಸಮಾಲೋಚನೆ ಮಾಡಲಾಗುತ್ತಿದೆ. ನಿಮ್ಮ ಬೇಡಿಕೆಗಳನ್ನು ಇಡೇರಿಸಲು ಪ್ರಯತ್ನ ಸಾಗಿದೆ ಎಂದರು.

ಕೆಂದ್ರದಂತೆ, ರಾಜ್ಯ ಶಿಕ್ಷಣ ನೀತಿಯಲ್ಲಿ ಅಷ್ಟೇನು‌ ಬದಲಾವಣೆ ಇರದು, ಮಕ್ಕಳ ಶಿಕ್ಷಣಕ್ಕೆ ರಾಜ್ಯ ಶಿಕ್ಷಣ ನೀತಿ ಸಹ ಹೆಚ್ಚು ಸಹಕಾರಿಯಾಗಲಿದೆ ಎಂದರು. ಈ ವರ್ಷ ಪಬ್ಲಿಕ್ ಶಾಲೆ ಆರಂಬಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆದಿದೆ. ಶಿಘ್ರದಲ್ಲೆ ಇನ್ನಷ್ಟು ಪಬ್ಲಿಕ್ ಶಾಲೆ ಆರಂಬಿಸಲು ಕ್ರಮ ವಹಿಸಲಾಗುವುದು. ಅಲ್ಲದೇ ಶಿಕ್ಷಕರ‌ ನೇಮಕಕ್ಕೂ ಶ್ರಮಿಸಲಾಗುತ್ತಿದೆ. ಒಟ್ಟಾರೆ ಶಿಕ್ಷಣ ಕ್ಷೇತ್ರದ ಅಭಿರುದ್ದಿಗೆ ನಮ್ಮ‌ ಸರ್ಕಾರದ ಆಧ್ಯತೆ ನೀಡಿದೆ ಎಂದು ಜಿ ಎಸ್ ಪಾಟೀಲ ತಿಳಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಉನ್ನತ‌ಮಟ್ಟದ ಗೌರವಯುತ ಹುದ್ದೆ ಎಂದರೆ ಅದು ಶಿಕ್ಷಕ. ಜೀವನದಲ್ಲಿ ಶಿಕ್ಷಕ ಪಾತ್ರ ಬಹುದೊಡ್ಡದಾಗಿದೆ.

ಶಾಲಾ ಶಿಕ್ಷಕ ವರ್ಗಾವಣೆ ಆದಾಗ ಆ ಶಾಲೆ ಮಕ್ಕಳು ಗ್ರಾಮಸ್ಥರು ವರ್ಗಾವಣೆ ಆಗಿರುವ ಶಿಕ್ಷರನ್ನು ಬಿಳ್ಕೊಡಲು ಒಪ್ಪುವದಿಲ್ಲ. ಅನಿವಾರ್ಯವಾಗಿ ಕಳಿಸುತ್ತಾರೆ. ಇಂತಹ ಅನೇಕ ಉತ್ತಮ ಶಿಕ್ಷಕರನ್ನು ನಾವಿಂದು ಸಮಾಜದಲ್ಲಿ ಕಾಣುತ್ತೇವೆ ಎಂದರು.

ಶಾಲೆಯಲ್ಲಿ ಪಾಠದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ಸಹ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು ಎಂದು ಅಭಿಪ್ರಾಯ ಪಟ್ಟರು. ಶಿಕ್ಷಕರು ನಿವೃತ್ತಿ ಆದ ದಿನವೇ ಅವರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ನಿವೃತ್ತಿ ಉಪದಾನಗಳು ಲಭ್ಯವಾಗಬೇಕು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ, ದೇಶದ ಉಪರಾಷ್ಟ್ರಪತಿಗಳಾಗಿ, ರಾಷ್ಟ್ರಪತಿಯಾಗಿ ಅಪಾರ ಸೇವೆ ಸಲ್ಲಿಸಿದವರು ಡಾ. ರಾಧಾಕೃಷ್ಣನ್ ಅವರು. ರಾಧಾಕೃಷ್ಣನ್ ಅವರು ದೇಶಕ್ಕೆ ಹಾಗೂ ಶಿಕ್ಷಕ ಸಮುದಾಯಕ್ಕೇ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾಗೋಣ ಎಂದರು. ಜಿಲ್ಲೆಯಲ್ಲಿ ರಾಜ್ಯ ಪುರಸ್ಕೃತ ಶಿಕ್ಷಕ ಬಿ ಜಿ ಅಣ್ಣಿಗೇರಿ ಅವರು ಸಹ ಉತ್ತಮ ಶಿಕ್ಷಕರಾಗಿದ್ದರು ಅವರ ಹೆಸರನ್ನು ಒಂದು ಉಧ್ಯಾನವನಕ್ಕೆ ಬಿ ಜಿ ಅಣ್ಣಿಗೇರಿ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ನಮ್ಮ ಶಿಕ್ಷಣ ವ್ಯವಸ್ಥೆ ಸರಿ ಇದ್ದರೇ ಎಲ್ಲವೂ ಸುಭದ್ರವಾಗಿರುತ್ತದೆ. ಒಬ್ಬ ಶಿಕ್ಷಕ ಸಮಾಜದ ಎಲ್ಲ ರಂಗಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ವ್ಯಕ್ತಿಗಳನ್ನು ತಯಾರು ಮಾಡುವ ಶಕ್ತಿ ಹೊಂದಿದ್ದಾರೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಆಗ‌ಮಾತ್ರ ಗುರಿ ಸಾಧನೆ ಸಾದ್ಯಮಾಗುತ್ತದೆ. ಇಂದು ನಾವೆಲ್ಲ ಇಲ್ಲಿ‌ಬಂದು ಸೇರಬೇಕಾದರೇ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಇಲ್ಲದ ಸಮಾಜ ಪರಿಪೂರ್ಣ ಆಗಲಾರದು. ಹಿಂದೆ ಮಠಮಾನ್ಯಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಗುರುಕುಲ ಪದ್ದತಿ ಇತ್ತು. ಇಂದು ನಾವು ಅವುಗಳನ್ನು ಕಾಣಬಹುದು ಎಂದರು.

ಶಿಕ್ಷಣದ ನೀತಿಗಳನ್ನು ಜಾರಿ ತರುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯ. ನಮ್ಮನ್ನು ತಿದ್ದಿ ತೀಡಿ ನಮ್ಮನ್ನು ಶಿಲ್ಪಿಗಳಾಗಿಸಿದವರು ಶಿಕ್ಷಕರು. ಯಾವುದೇ ಸಂದರ್ಭದಲ್ಲಿ ನಮಗೆ ಕಲಿಸಿದ ಶಿಕ್ಷಕರು ಕಂಡ ತಕ್ಷಣ ನಮಸ್ಕರಿಸುತ್ತೇವೆ, ಅದು ನಮಗೆ ಅವರ ಮೇಲಿರುವ ಗೌರವ, ಜಾಗೃತ ಮನಸ್ಸಿಂದ ಬರುತ್ತದೆ. ಇರು ಶಿಕ್ಷಕರ ಮೇಲಿರುವ ಶ್ರದ್ದೇಯಾಗಿದೆ ಎಂದರು.

ಇಂದಿನ ಆದುನಿಕ ಕಾಲದಲ್ಲಿ ಗ್ಯಾಜೆಟ್ಸ್ ನಿಂದ‌ ಮಕ್ಕಳನ್ನು ಹೊರ ತಂದು ಅವರಿಗೆ ಮನವರಿಕೆ ಆಗುವಂತೆ ಕಲಿಸುವದು ಚಾಲೆಂಜ್ ಆಗಿದೆ. ಅದನ್ನು ನಮ್ಮ ಶಿಕ್ಷಕರು ಸರಿಯಾಗಿ ನಿಬಾಯಿಸಬೇಕು. ಅರಿವೇ ಗುರು ಎಂಬಂತೆ ಮೊದಲು ನಮ್ಮನ್ನು ನಾವು ಅರಿತು ನಂತರ ಮಕ್ಕಳಿಗೆ ಅರಿವು ಮಾಡಿಸುವ ಕಾರ್ಯ ನಾವೆಲ್ಲ‌ ಮಾಡಬೇಕು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ಡಾ.ಹರಿಪ್ರಸಾದ್ ಜಿ.ವಿ. ಉಪನ್ಯಾಸ ನೀಡಿ, ಶಿಕ್ಷಕರಿಗೆ ನೀಡಿದ ದೈನಂದಿನ ಕಾರ್ಯಗಳು, ಕರ್ತವ್ಯಗಳು, ಆದುನಿಕ ತಂತ್ರಜ್ಞಾನ, ಸಿಂತಟೆಕ್ ಇಂಟಲಿಜೆನ್ಸ್ ಕುರಿತು ವಿಸ್ತಾರವಾಗಿ ಮಾತನಾಡಿದರು.

ಇಂದಿನ ಮಕ್ಕಳು‌ ಜನರೇಶನ್ ಆಲ್ಪಾ, ಬೀಟಾ ಮಕ್ಕಳಾಗಿದ್ದಾರೆ. ಮಕ್ಕಳದ್ದು ಮುದ್ರಣರಹಿತ ಅಭ್ಯಸ ಆಗಿದೆ. ಇದಕ್ಕಾಗಿ ನಾವುಸಹ ಆದುನಿಕತೆಗೆ ಹೊಂದಿಕೊಳ್ಳಬೇಕು. ಇಂದಿನ ಮಕ್ಕಳು ಟೀನೆಜರ್ಸ್ ಅಲ್ಲ ಮೊಬೈಲ್ ಸ್ಕ್ರೀನಿರ್ ಮಕ್ಕಳಾಗಿರುತ್ತಾರೆ.

ಇಂದಿನ ಮಕ್ಕಳಿಗೆ ಒದುವುದು ಎಂದರೆ, ಕೆಳಿಸಿಕೊಳ್ಳುವುದು. ಬರೆಯುವದು ಎಂದರೆ, ಹೇಳುವುದಾಗಿದೆ. ಇದಕ್ಕೆ ನಾವು ಬದಲಾಗಿ ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಆರ್.ಎಸ್.ಬುರಡಿ, ಸರ್ವರಿಗೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಒಬ್ಬ ಒಳ್ಳೆ ಶಿಕ್ಷಕನಾದವರು ಮೊದಲು ತಮ್ಮನ್ನು ತಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಕರಾದವರು ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ಪ್ರಮಾಣಿಕವಾಗಿ ಮಾಡಬೇಕು ಎಂದರು. ಶಿಕ್ಷಕ ನಿರಂತರ ಅಧ್ಯಯನ ಶೀಲರಾಗಿರಬೇಕು, ಅದನ್ನು ಮಕ್ಕಳಿಗೆ ಕಲಿಸುವ ರೂಡಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಶಿಕ್ಷಕರ ಮೇಲಿನ ಪ್ರೀತಿ ಅಭಿಮಾನದಿಂದಾಗಿ ತಮ್ಮ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್ ಎನ್ ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ ಆರ್, ಜಿಪಂ ಉಪಕಾರ್ಯರ್ಶಿ ಸಿ ಆರ್ ಮುಂಡರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಡಯಟ್‌ದ ಉಪನಿರ್ದೇಶಕರಾದ ( ಅಭಿವೃದ್ಧಿ) ಮಂಗಳಾ ತಾಪಸ್ಕರ್ , ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಸಿ ಕೊರವನವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಗದಗ ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟೆಪ್ಪನವರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande