ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರೆಡ್ಡಿ ಜನಸಂಘ ಸ್ಥಾಪನೆಯಾಗಿ ನೂರು ವರ್ಷಗಳಾಗಿದ್ದು, ಶತಮಾನೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸೆಪ್ಟಂಬರ್ 24ರಂದು ಅದ್ದೂರಿಯಾಗಿ ಆಚರಿಸಲಾಗುವುದು ಮತ್ತು ಭವಿಷ್ಯದ ಜನಗಣತಿಯಲ್ಲಿ ಹಿಂದೂ, ಲಿಂಗಾಯಿತ ರೆಡ್ಡಿ ಎಂದು ಬರೆಯಿಸಬೇಕು ಎಂದು ವೇಮನಾನಂದ ಸ್ವಾಮೀಜಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ 25 ರಿಂದ 30 ಲಕ್ಷ ಜನಸಂಖ್ಯೆ ಇರುವ ರೆಡ್ಡಿ ಸಮಾಜದಿಂದ ಪ್ರತಿ ಚುನಾವಣೆಯಲ್ಲಿ 25 ರಿಂದ 30 ಶಾಸಕರು ಆಯ್ಕೆಯಾಗುತ್ತಿದ್ದಾರೆ. ನಮ್ಮ ರೆಡ್ಡಿ ಸಮುದಾಯ ಪ್ರಭಲವಾಗಿದ್ದು, ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿ ನಮ್ಮ ರೆಡ್ಡಿ ಸಮುದಾಯದವರು. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರಥಮ ಮುಖ್ಯಮಂತ್ರಿಗಳು ರೆಡ್ಡಿ ಸಮುದಾಯದವರು ಎಂದರು.
ಬೆಂಗಳೂರಿನಲ್ಲಿ ಕೆಜಿ ಯಿಂದ ಪಿಜಿ ವರೆಗೆ ವಿದ್ಯಾಸಂಸ್ಥೆಗಳನ್ನು ನಡೆಸಲಾಗುತ್ತಿದ್ದು, ತಾಂತ್ರಿಕ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿ ತಾಂತ್ರಿಕ ಕಾಲೇಜುಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಜನಗಣತಿಯ ಕಾಂತರಾಜ್ ವರದಿಯಲ್ಲಿ ನಮ್ಮ ರೆಡ್ಡಿ ಸಮಾಜವನ್ನು ಕೇವಲ 7 ಲಕ್ಷ ಎಂದು ಮಾತ್ರ ತೋರಿಸಿದ್ದು, ನಾವು, 25 ರಿಂದ 30 ಲಕ್ಷ ಜನರಿದ್ದೇವೆ ಎಂದರು.
ಬಳ್ಳಾರಿ ಜಿಲ್ಲಾ ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ಎನ್. ಪ್ರತಾಪ್‍ರೆಡ್ಡಿ ಅವರು, ಕರ್ನಾಟಕ ರಾಜ್ಯ ಸಂಘ ಶತಮಾನದ ವಸ್ತಿಲಲ್ಲಿದ್ದು, ಜಿಲ್ಲಾ ಸಂಘವು ಮುಂದಿನ ವರ್ಷ 75ನೇ ವರ್ಷದ ಗೋಲ್ಡನ್ ಜಿಬ್ಲಿ ಆಚರಿಸಿಕೊಳ್ಳುತ್ತಿದೆ. ಅರ್ಧ ಎಕರೆ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ರೆಡ್ಡಿ ಭವನ ಉತ್ತರ ಕರ್ನಾಟಕದಲ್ಲಿಯೇ ವಿಶೇಷಗಳನ್ನು ಹೊಂದಿದೆ ಎಂದರು.
ರೆಡ್ಡಿ ಜನಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ರೆಡ್ಡಿ, ನಿರ್ದೇಶಕರುಗಳಾದ ಕೃಷ್ಣಾರೆಡ್ಡಿ, ಪ್ರಭಾಕರರೆಡ್ಡಿ, ಬಾಬುರೆಡ್ಡಿ, ರಾಜಾರೆಡ್ಡಿ, ಶಾಂತರಾಜ್ ಮತ್ತು ಖಜಾಂಚಿ ಹೇಮರೆಡ್ಡಿ ಮತ್ತು ಐನಾಥರೆಡ್ಡಿ ಸೇರಿ ಹಲವಾರು ಮುಖಂಡರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್