ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಸಿದ್ದೇಶ್ವರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ 36ನೇ ವರ್ಷದ ವಾರ್ಷಿಕೋತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಅಂಗವಾಗಿ ಸನ್ಮಾನ ಸಮಾರಂಭ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.
ಎಸ್. ರವೀಂದ್ರನಾಥ್ ಶಕುಂತಲಾ ಬಾಯಿ ದಂಪತಿಗಳು, ಕೆ. ತಿಪ್ಪೇಸ್ವಾಮಿ ದಂಪತಿ ಮತ್ತು ಜೆ. ಬಸವನಗೌಡ ಇವರ ಶಿಷ್ಯಂದಿರರು ಶಿಕ್ಷಕರನ್ನು ಸನ್ಮಾನಿಸಿ, ತಮ್ಮ ಬಾಲ್ಯ - ವಿದ್ಯಾಭ್ಯಾಸದ ದಿನಗಳನ್ನು ಮೆಲಕು ಹಾಕಿದರು.
ಶ್ರೀ ಸಿದ್ದೇಶ್ವರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಚ್.ಎಂ. ಚನ್ನಬಸವಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರನ್ನು ಸ್ಮರಿಸುವುದು ಪುಣ್ಯದ ಕಾರ್ಯ ಎಂದರು.
ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ ಅವರು ಪ್ರಾರ್ಥನೆ ಸಲ್ಲಿಸಿದರು. ನಿವೃತ್ತ ಇಂಜಿನಿಯರ್ ಮಹೇಶ್ ಗೌಡ ಅವರು
ಕುರುಕ್ಷೇತ್ರ ನಾಟಕದ ದುರ್ಯೋಧನನ ಪಾತ್ರವನ್ನು ಅಭಿನಯಿಸಿದರು. ಅಲ್ಲೀಪುರ ಮಹಾದೇವ ತಾತನ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳ ವಾದ್ಯ ವೃಂದವು ಅತಿಥಿಗಳನ್ನು ಸ್ವಾಗತಿಸಿತು. ನಿವೃತ್ತ ಚಿತ್ರಕಲಾ ಶಿಕ್ಷಕ ಯು. ರಮೇಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಚ.ಮ. ಗಂಗಾಧರಯ್ಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್