ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ
ರಾಯಚೂರು, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್: ರಾಯಚೂರು ಮಹಾನಗರ ಪಾಲಿಕೆಯ ವತಿಯಿಂದ 2019-20 ಹಾಗೂ 2021-22ನೇ ಸಾಲಿನ ನಗರಸಭೆ ನಿಧಿಯ ಶೇ.5ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2019-20ನೇ ಸಾಲಿನ ಜೀವ ವಿಮಾ
ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ


ರಾಯಚೂರು, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್: ರಾಯಚೂರು ಮಹಾನಗರ ಪಾಲಿಕೆಯ ವತಿಯಿಂದ 2019-20 ಹಾಗೂ 2021-22ನೇ ಸಾಲಿನ ನಗರಸಭೆ ನಿಧಿಯ ಶೇ.5ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2019-20ನೇ ಸಾಲಿನ ಜೀವ ವಿಮಾ ಅಥವಾ ಆರೋಗ್ಯ ಯೋಜನೆಯ ವಾರ್ಷಕ ಪ್ರೀಮಿಯಂ ಕಂತುಗಳನ್ನು ವಿಕಲಚೇತನರ ಜನರಿಗೆ ವಿಮೆಯನ್ನು ಮಾಡಿಸಲಾಗುತ್ತದೆ. ನವೀಕರಿಸಿ ವಿಮಾ ಮೊತ್ತವನ್ನು ಪಾವತಿಸುವುದಿಲ್ಲ.

ದಾಖಲಾತಿಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ/ರೇಷನ್ ಕಾರ್ಡ, ಪಾಸ್ ಪೋಟೋ ಅಳತೆಯ ಭಾವಚಿತ್ರ-2, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಐ.ಎಫ್.ಎಸ್.ಸಿ ಕೋಡ್‍ನೊಂದಿಗೆ ಬ್ಯಾಂಕ್ ವಿವರ, ವೈದ್ಯರಿಂದ ಪಡೆದ ಗುರುತಿನ ಚೀಟಿ ಅಥವಾ ಯು.ಡಿ.ಎ. ಕಾರ್ಡ್ ಹಾಗೂ ಮೊಬೈಲ್ ನಂಬರ್‍ನೊಂದಿಗೆ ಸೆಪ್ಟೆಂಬರ್ 18ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯು ತಿರಸ್ಕೃತ ಮಾಡುವರು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande