ಕೊಪ್ಪಳ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ನಂತರದ ತರಗತಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತಮ್ಮ ಕಾಲೇಜು ಮುಖ್ಯಸ್ಥರ ದೃಢೀಕರಣದೊಂದಿಗೆ ಭರ್ತಿಮಾಡಿ ಸೆಪ್ಟೆಂಬರ್ 30 ರೊಳಗೆ ಕಚೇರಿ ಅವಧಿಯಲ್ಲಿ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಜಿಯೋ ಪೆಟ್ರೋಲ್ ಬಂಕ್ ಎದುರುಗಡೆ ಇರುವ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ ಕೊಠಡಿ ಸಂಖ್ಯೆ 31 ಮತ್ತು 32ರಲ್ಲಿನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಶುಲ್ಕ ಮರುಪಾವತಿ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಕಡ್ಡಾಯವಾಗಿ ಪ್ರಚಲಿತ ಬ್ಯಾಂಕ್ ಖಾತೆಯ ವಿವರ ನೀಡತಬೇಕು.
ಪ್ರಮುಖ ದಾಖಲೆಗಳು: ಅರ್ಜಿ ನಮೂನೆಯೊಂದಿಗೆ ಯು.ಡಿ.ಐ.ಡಿ ಕಾರ್ಡ್ ಝರಾಕ್ಸ್ ಪ್ರತಿ, ಚಾಲ್ತಿಯಲ್ಲಿರುವ ಧೃಡೀಕರಿಸಿದ ಜಾತಿ ಪ್ರಮಾಣ ಪತ್ರ, ಧೃಡೀಕರಿಸಿದ ಚಾಲ್ತಿ ಬ್ಯಾಂಕ್ ಖಾತೆ ಝರಾಕ್ಸ ಪ್ರತಿ ಹಾಗೂ ಧೃಡೀಕರಿಸಿದ ಹಿಂದಿನ ವರ್ಷದ ಅಂಕಪಟ್ಟಿ, ಶುಲ್ಕ ಪಾವತಿಸಿದ ಮೂಲ ಪ್ರತಿ, ಆಧಾರ್ ಕಾರ್ಡ್ ಮತ್ತು ಕಾಲೇಜಿನ ದೃಡೀಕರಣ ಪತ್ರಿಯನ್ನು ಲಗತ್ತಿಸಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಎಂ.ಆರ್.ಡಬ್ಲೂ.ಗಳಾದ ಕೊಪ್ಪಳದ ಜಯಶ್ರೀ ಮೊ.ಸಂ: 9980126391, ಯಲಬುರ್ಗಾದ ಶಶೀಕಲಾ ಮೊ.ಸಂ: 8147749523, ಕುಕನೂರಿನ ಶರಣಯ್ಯ ಮೊ.ಸಂ: 9886240203, ಕುಷ್ಟಗಿಯ ಚಂದ್ರಶೇಖರ ಮೊ.ಸಂ: 9916308585 ಹಾಗೂ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕುಗಳ ಎಂ.ಆರ್.ಡಬ್ಲೂ ಆಗಿರುವ ಮಂಜುಳಾ ಮೊ.ಸಂ: 7975398202 ಗೆ ಸಂಪರ್ಕಿಸಿ ಅಥವಾ ಗ್ರಾಮ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲೂ ಹಾಗೂ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್. ಡಬ್ಲೂ ಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್