ಬೆಂಗಳೂರು, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸರ್ವೋಚ್ಛ ನ್ಯಾಯಾಲಯವು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸೇವಾ ನಿರತ ಶಿಕ್ಷರಿಗೂ ಕಡ್ಡಾಯಗೊಳಿಸಿ ನೀಡಿರುವ ತೀರ್ಪಿನ ಬಗ್ಗೆ ಅಖಿಲ ಭಾರತ ಪ್ರಾಥಮಿಕ ಶಿಕ್ಷರರ ಒಕ್ಕೂಟ ( AIPTF) ತನ್ನ ತೀವ್ರ ಅಸಮಧಾನವನ್ನು ದಾಖಲಿಸುತ್ತದೆ. ಈ ತೀರ್ಪಿನಿಂದ ದೇಶದಾದ್ಯಂತ ಪ್ರಾಥಮಿಕ ಶಾಲೆಯ 30 ಲಕ್ಷಕ್ಕೂ ಅಧಿಕ ಶಿಕ್ಷಕರ ಸೇವಾ ಭದ್ರತೆ ಅನಿಶ್ಚತತೆಗೆ ದೂಡಿದೆ ಎಂದು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದ್ದಾರೆ.
ಸೆಪ್ಟೆಂಬರ್ 1, 2025 ರಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸೇವಾ ನಿರತ ಶಿಕ್ಷರಿಗೂ ಕಡ್ಡಾಯಗೊಳಿಸಿ ನೀಡಿರುವ ತೀರ್ಪಿನ ಬಗ್ಗೆ ಅಖಿಲ ಭಾರತ ಪ್ರಾಥಮಿಕ ಶಿಕ್ಷರರ ಒಕ್ಕೂಟ ( AIPTF) ತನ್ನ ತೀವ್ರ ಅಸಮಧಾನವನ್ನು ದಾಖಲಿಸುತ್ತದೆ. ಇದು ಸಂವಿಧಾನದ ಮತ್ತು ಸಹಜ ನ್ಯಾಯ ತತ್ವದ ವಿರುದ್ಧವಾಗಿದೆಯೆಂದು ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದ್ದಾರೆ.
ಈ ತೀರ್ಪಿನಿಂದ ದೇಶಾದ್ಯಂತ ಪ್ರಾಥಮಿಕಶಾಲೆಗಳ 30 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ತೊಂದರೆಯಾಗುತ್ತದೆ.
ಎಂದು ಬಸವರಾಜ ಗುರಿಕಾರ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಬಸವರಾಜ ಗುರಿಕಾರ
ಯಾವುದೇ ನೀತಿ ಅಥವಾ ಕಾನೂನಿನಲ್ಲಿರುವ ಅಂಶವನ್ನು ಪೂರ್ವಾನ್ವಯ ಜಾರಿಗೊಳಿಸುವುದು ಸಂವಿಧಾನ ಹಾಗು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗುತ್ತದೆ. ಸರ್ವೋಚ್ಛ ನ್ಯಾಯಾಲಯವು ತೀರ್ಪಿನಲ್ಲಿ ಹೇಳಿರುವಂತೆ ಯಾವುದೇ ಶಾಸನದ ಅನುಷ್ಠಾನವನ್ನು ಎಂದಿಗೂ ಕೆಟ್ಟದ್ದೆಂದು ನೋಡಬಾರದೆಂಬುದನ್ನು ಒಪ್ಪುತ್ತಲೇ, ಯಾವುದೇ ಕಾನೂನನ್ನು ಪೂರ್ವಾನ್ವಯಗೊಳಿಸುವುದೂ ಸಹ ನ್ಯಾಯ ಸಮ್ಮತವಲ್ಲವೆಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟ (AIPTF) ಅಭಿಪ್ರಾಯಪಡುತ್ತದೆ.
ಸರ್ವೋಚ್ಚ ನ್ಯಾಯಾಲಯವುದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಶಿಕ್ಷಕರ ಶೈಕ್ಷಣಿಕ ಅರ್ಹತೆ ಮತ್ತು ಅರ್ಹತಾ ಪರೀಕ್ಷೇಯನ್ನು ಸಮೀಕರಿಸಿ ನೋಡುವುದು ಸರಿಯಾದ ಕ್ರಮವಲ್ಲವೆಂದು ಅದು ಪ್ರತಿಪಾದಿಸುತ್ತದೆ. ಇದಲ್ಲದೆ, ಎನ್ ಸಿ ಟಿ ಇ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜಾರಿಗೊಳಿಸುವ ಮುನ್ನವೇ ಸೇವೆಗೆ ಸೇರಿ ಸೇವೆಯಲ್ಲಿರುವ ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ಪದೋನ್ನತಿ ಬಯಸುವ ಶಿಕ್ಷರಿಗೆ ಇದನ್ನು ಕಡ್ಡಾಯಗೊಳಿಸುವುದು ಅನ್ಯಾಯವಾಗುತ್ತದೆ. ಇದು ಸೇವಾನಿರತ ಶಿಕ್ಷಕರ ನೈತಿಕತೆ ಮತ್ತು ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತದೆಯಲ್ಲದೆ ಕಲಿಕಾ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ .
ಈ ವಿಷಯವನ್ನು ಎನ್ ಸಿ ಟಿ ಇ ಮತ್ತು ನ್ಯಾಯಾಲಯಗಳು ಮೊದಲಿನಿಂದಲೂ ತಪ್ಪಾಗಿ ಅರ್ಥೈಸುತ್ತಿರುವುದು ಕಂಡು ಬಂದಿದೆ . ಆರ್ ಟಿ ಇ ಕಾಯ್ದೆ ಜಾರಿಗೆ ಬಂದಾಗ, ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅರ್ಹ ವಿದ್ಯಾರ್ಹತೆಯಿಲ್ಲದ ಪ್ಯಾರಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು .ಇಂಥಹ ಶಿಕ್ಷಕರನ್ನು ಅರ್ಹ ಶಿಕ್ಷಕರನ್ನಾಗಿ ಮಾಡುವ ಅಗತ್ಯತೆಯಿಂದ ಅರ್ಹತಾ ಪರೀಕ್ಷೆ ಕಡ್ಡಾಯವಾಗಿತ್ತು. ಆದರೆ, ಅದಕ್ಕೂ ಪೂರ್ವದಲ್ಲಿ ಸೇವೆಯಲ್ಲಿರುವ ಲಕ್ಷಾಂತರ ಶಿಕ್ಷಕರು ಸೇವಾ ಪೂರ್ವ ಶೈಕ್ಷಣಿಕ ಅರ್ಹತೆ, ದೀರ್ಘಕಾಲದ ಅನುಭವ ಮತ್ತು ಸೇವಾ ನಿರತ ತರಬೇತಿ ಮತ್ತು ಹೆಚ್ಚಿನ ಶಿಕ್ಷಣ ಅರ್ಹತೆ ಹೊಂದಿರುವಾಗ ಅರ್ಹತಾ ಪರೀಕ್ಷೆಯನ್ನು ಏಕೆ ಬರೆಯಬೇಕೆಂಬುದು ಮೂಲ ಪ್ರಶ್ನೆಯಾಗುತ್ತದೆ . ಅರ್ಹತೆಯ ಅರ್ಥ ಮತ್ತು ಉದ್ದೇಶವೇನು? ಅರ್ಹತಾ ಪರೀಕ್ಷೆ ಯಾರಿಗೆ ಬೇಕು? ಡಿ.ಎಡ್/ಬಿ.ಎಡ್ ಪಡೆದು ಈಗಾಗಲೇ ಸೇವೆಯಲ್ಲಿರುವವರ ಅರ್ಹತೆಯನ್ನು ಈಗ ಪ್ರಶ್ನಿಸುವುದು ಉಚಿತವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಅಂತಹ ಅರ್ಹ ಶಿಕ್ಷಕರ ಅಡಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕೆ ಮುಂದಾಗಿದ್ದಾರೆ ಮತ್ತು ಲಕ್ಷಾಂತರ ಜನರು ಸರ್ಕಾರಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ . ಹಾಗಾದರೆ , ಅವರು ಟಿಇಟಿ ಹೊಂದಿರದ ಶಿಕ್ಷಕರ ಅಡಿಯಲ್ಲಿ ಅಧ್ಯಯನ ಮಾಡಿದ್ದಾರೆಂದು ಅಂತಹ ವಿದ್ಯಾರ್ಥಿಗಳ ಪ್ರಮಾಣಪತ್ರಗಳನ್ನು ಹಿಂತೆಗೆದುಕೊಳ್ಳಲಾಗುತ್ತಯೇ ಅಥವಾ ಅನೂರ್ಜಿತವೆಂದು ಘೋಷಿಸಲಾಗುತ್ತದೆಯೇ?
ನ್ಯಾಯಾಲಯದ ಈ ತೀರ್ಪುಗಳು ಶಿಕ್ಷಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಅಪಖ್ಯಾತಿ ತರುತ್ತವೆ ಎಂಬ ಅಂಶವನ್ನು ಸರ್ಕಾರ ಮತ್ತು ನ್ಯಾಯಾಲಯಗಳು ನಿರ್ಲಕ್ಷಿಸುತ್ತಿವೆ. ಈ ಎಲ್ಲಾ ಕಾರಣಗಳಿಂದ , ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದೇಶಾದ್ಯಂತ ಸೇವಾನಿರತ ಶಿಕ್ಷರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟ ಅಧ್ಯಕ್ಷ ಬಸವರಾಜ ಗುರಿಕಾ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ