ವಿಜಯಪುರ, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಸ್ಥಳೀಯವಾಗಿ ಇರದ ಕಾರಣ ಅ.3 ರ ಶುಕ್ರವಾರ ಸಿಂದಗಿ ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದುಪಡಿಸಲಾಗಿದೆ ಎಂದು ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳೊಂದಿಗೆ ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲಿ ಎಂದು ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande