ರಾಯಚೂರು, 30 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ್ ಸರ್ಕಾರದ ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜಿವನ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಸುಭೋದ್ ಯಾದವ್ ಅವರು ಅಕ್ಟೋಬರ್ 2 ಹಾಗೂ 3ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಕ್ಟೋಬರ್ 2ರ ಬೆಳಿಗ್ಗೆ 9.30 ಗಂಟೆಗೆ ಹೈದರಾಬಾದ್‍ನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ರಾಯಚೂರು ನಗರಕ್ಕೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಸಿರವಾರ ಮತ್ತು ಮಸ್ಕಿಗೆ ತೆರಳಿ ಸಿರವಾರ ಮತ್ತು ಮಸ್ಕಿ ಬ್ಲಾಕ್‍ಗಳಲ್ಲಿ ಎಡಿಪಿ ಹಾಗೂ ಎಬಿಪಿಯ ಭೌತಿಕ ಪ್ರಗತಿಯ ವಿಮರ್ಶೆ ಮಾಡಲಿದ್ದಾರೆ.
ಅಕ್ಟೋಬರ್ 3ರ ಬೆಳಿಗ್ಗೆ 09ಕ್ಕೆ ಮಹತ್ವಾಕಾಂಕ್ಷೆಯ ಜಿಲ್ಲೆಯ ಬ್ಲಾಕ್ ಕಾರ್ಯಕ್ರಮದ ಅಡಿಯಲ್ಲಿ ಚಟುವಟಿಕೆಗಳಿಗೆ ಕ್ಷೇತ್ರಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 1 ಗಂಟೆಗೆ ರಾಯಚೂರಿನಿಂದ ರಸ್ತೆ ಮೂಲಕ ಹೈದರಾಬಾದಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್